74ನೇ ವಾರ್ಷಿಕೋತ್ಸವ : ಕೀರ್ತನೆ, ಸಂಗೀತ ಸಂಜೆ

0
26
loading...

ಕನ್ನಡಮ್ಮ ಸುದ್ದಿ-ಗಂಗಾವತಿ : ಇಲ್ಲಿನ ಬಸವಣ್ಣ ವೃತ್ತದಲ್ಲಿರುವ ವಿಶ್ವಬ್ರಾಹ್ಮಣ ಸಮಾಜದ ಕಾಳಿಕಾ ದೇವಿದೇವಸ್ಥಾನದ 74ನೇ ವಾರ್ಷಿಕೋತ್ಸವದ ಅಂಗವಾಗಿ ಫೆ.8 ಮತ್ತು 9ರಂದು ಎರಡು ದಿನಗಳ ವಿವಿಧ ಕಾರ್ಯಕ್ರಮ ನಡೆಸಲು ಸಮಾಜದ ಹಿರಿಯರು ಸಭೆ ನಡೆಸಿ ನಿರ್ಣಯ ಕೈಗೊಂಡರು.
ಸಮಾಜದ ಹಿರಿಯ ಮುಖಂಡ ದೇವೇಂದ್ರ ಎಂಜಿನೀಯರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಫೆ.8ರಂದು ಸಂಜೆ ದೇವಸ್ಥಾನದ ಆವರಣದಲ್ಲಿ ಸಂಕೀರ್ತನೆ ಬಳಿಕ ಉದಯೋನ್ಮುಖ ಕಲಾವಿದ ವಿಜಯಕುಮಾರ್ ನೇತೃತ್ವದಲ್ಲಿನ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಫೆ.9ರಂದು ಬೆಳಗ್ಗೆ ಕಾಳಿಕಾ ದೇವಿಗೆ ಕುಂಕುಮಾರ್ಚನೆ, ವಿಶೇಷ ಅಭಿಷೇಕ, ಅರ್ಚನೆ ಬಳಿಕ ಸಮಾಜದ ವಿವಿಧ ಸ್ವಾಮೀಜಿಗಳ ಸಮ್ಮುಖದಲ್ಲಿ ವಿಶ್ವಬ್ರಾಹ್ಮಣ ಸಮಾಜದ ಮಕ್ಕಳಿಗೆ ಸಾಮೂಹಿಕ ಉಚಿತ ಯಜ್ಞೋಪವಿತ (ಉಪನಯನ) ಧಾರಣೆ ಆಯೋಜಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ದೇವಸ್ಥಾನ ಅಲಂಕಾರ, ವಿವಿಧ ಗಣ್ಯರಿಗೆ ಆಹ್ವಾನ, ನಿಧಿ ಶೇಖರಣೆ, ಮುಂದಿನ ವರ್ಷ ನಡೆಯಲಿರುವ 75ನೇ ವಾರ್ಷಿಕೋತ್ಸವದ ಬಗ್ಗೆ ಪೂರ್ವ ತಯಾರಿ ಮೊದಲಾದ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಸಮಾಜದ ಹಲವುರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಮುಂದಿನ ವರ್ಷ ನಡೆಯಲಿರುವ 75ನೇ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಐದು ದಿನಗಳ ಕಾಲ ಆಚರಿಸುವ ಹಾಗೂ ಅದಕ್ಕೆ ಸಂಬಂಧಿಸಿದಂತೆ ಮೂರ್ನಾಲ್ಕು ತಿಂಗಳು ಮುಂಚೆಯಿಂದಲೂ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸಭೆಯಲ್ಲಿ ಹಲವರು ಸೂಚಿಸಿದರು.
ಸಮಾಜದ ಪ್ರಮುಖರಾದ ಅಮರೇಶ ಪತ್ತಾರ, ಮಂಜುನಾಥ ಪತ್ತಾರ, ವಿಜಯಕುಮಾರ, ಮಂಜುನಾಥ ಜ್ಯೋತಿ ಜುವೆಲ್ಲರಿ, ಸುನಿಲ್ ಕುಮಾರ ಪತ್ತಾರ್, ವೆಂಕಟೇಶ ಆಚಾರ್, ಲಕ್ಕಪ್ಪ, ವಿರುಪಾಕ್ಷಿ, ಸಿದ್ದೇಶ, ಗುರು, ಸಣ್ಣಪ್ಪ ಕಮ್ಮಾರ, ವೀರಭದ್ರಪ್ಪ ಮೊದಲಾದವರಿದ್ದರು.

loading...