8ನೇ ವರ್ಷದ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ

0
35
loading...

ಕನ್ನಡಮ್ಮ ಸುದ್ದಿ-ಹೊನ್ನಾವರ : ಶ್ರೀ ಶಂಭು ಹೆಗಡೆಯವರ ಯಕ್ಷಗಾನ ನೋಡಿದವರಿಗೆ ಅವರ ನಾಟ್ಯ ಶೈಲಿ, ಹೆಜ್ಜೆ ಗೆಜ್ಜೆಯನ್ನು ಎಂದೆಂದಿಗೂ ಮರೆಯಲಾಗದು ಎಂದು ಪದ್ಮಶ್ರೀ ಪ್ರಶಸ್ತಿ ಪರಸ್ಕøತ ಜಾನಪದ ಕಲಾವಿದೆ ಸುಕ್ರಿ ಬೊಮ್ಮ ಗೌಡ ಹೇಳಿದರು.
ತಾಲೂಕಿನ ಗುಣವಂತೆ ಯಕ್ಷಾಂಗಣದಲ್ಲಿ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಆಶ್ರಯದಲ್ಲಿ ನಡೆದ 8ನೇ ವರ್ಷದ `ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ’ವನ್ನು ಉದ್ಘಾಟಿಸಿ ಮಾತನಾಡಿದರು. ಅವರ ನಂತರವೂ ಅವರ ಕುಟುಂಬದವರು ಯಕ್ಷಗಾನವನ್ನು ಬೆಳೆಸುತ್ತಲೇ ಇದ್ದಾರೆ. ಅದು ಬೆಳೆಯುತ್ತಲೇ ಎಂದು ಹಾರೈಸಿದರು. ಪ್ರೇಕ್ಷಕರ ಅಪೇಕ್ಷೆಯ ಮೇರೆಗೆ ಜಾನಪದ ಗೀತೆ ಹಾಡಿ ರಂಜಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಶಾಸಕ ಮಂಕಾಳ ವೈದ್ಯ ಮಾತನಾಡಿ `ಮೊದಲು ಯಕ್ಷಗಾನಕ್ಕೆ ವಿಶೇಷ ಮಾನ್ಯತೆಯನ್ನು ನೀಡಲಾಗುತ್ತಿತ್ತು. ಕಲಾಭಿಮಾನಿಗಳಲ್ಲಿ ಆಸಕ್ತಿಯಿತ್ತು. ಈಗ ಯಕ್ಷಗಾನ ಎಂದರೆ `ಎಷ್ಟು ಗಂಟೆಯದು?’ ಎಂದು ಕೇಳುತ್ತಾರೆ. ಯಕ್ಷಗಾನ ಕುರಿತು ಆಸಕ್ತಿ ಮೂಡಿಸುವ ಕೆಲಸವನ್ನು ಜನಪ್ರತಿನಿಧಿಗಳು, ಸರ್ಕಾರ ಮಾಡಬೇಕು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಮಾತನಾಡಿ ಜಿಲ್ಲಾದ್ಯಂತ ನಡೆಯುವ ಸಾಹಿತ್ಯ ಪರಿಷತ್ತಿನಲ್ಲಿ ಯಕ್ಷಗಾನದ ಎಲ್ಲಾ ಆಯಾಮಗಳನ್ನು ಗೋಷ್ಠಿಯ ಮೂಲಕ, ಸನ್ಮಾನಿಸುವ ಮೂಲಕ ಮತ್ತು ಸಮ್ಮೇಳನಾಧ್ಯಕ್ಷತೆಯನ್ನು ನೀಡುವ ಮೂಲಕ ಆದ್ಯತೆ ನೀಡುತ್ತಿದ್ದೇವೆ ಎಂದ ಅವರು `ನಾಡೋಜ ಸುಕ್ರಿ ಬೊಮ್ಮ ಗೌಡ ರಂತಹ ಮಹಾತಾಯಿಯನ್ನು ಬಹುವಚನದಲ್ಲಿ ಅವರನ್ನು ಸಂಬೋಧಿಸಬೇಕು. ಸರಳತೆಯ ಪ್ರತೀಕವಾದ ಜಾನಪದ ಆಸ್ತಿಯನ್ನು ಏಕವಚನದಲ್ಲಿ ಸಂಬೋಧಿಸಿ ನಾವು ಹಗುರವಾಗಬಾರದು. ಯಕ್ಷಗಾನ ಜಾನಪದವೂ, ಶಾಸ್ತ್ರೀಯವೂ ಎಂಬ ಬಗ್ಗೆ ಗಂಭೀರ ಚರ್ಚೆಯಾಗಬೇಕು ಎಂದು ಸಲಹೆ ನೀಡಿದರು.
ತಮಿಳುನಾಡಿನ ಮೇಲಟ್ಟೂರು ಭಾಗವತ ಮೇಳದ ಶ್ರೇಷ್ಠ ಕಲಾವಿದ `ಕಲೈಮಾಮಣಿ’ ಎಸ್.ನಟರಾಜನ್ ಅವರಿಗೆ 2016 ರ `ಕೆರಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಅಂಕಣಕಾರ ಎಸ್.ಅರ್.ವಿಜಯಶಂಕರ, ಯಕ್ಷಗಾನ ವಿದ್ವಾಂಸ ಡಾ. ಎಂ.ಪ್ರಭಾಕರ ಜೋಶಿ,
ನಾಟ್ಯೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮಂಡಳಿಯ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ವಂದಿಸಿದರು. ಮಂಡಳಿಯ ಯಕ್ಷಗಾನ ಪ್ರದರ್ಶನದ ಧ್ವನಿಮುದ್ರಿಕೆಯನ್ನು ಶಾಸಕ ಮಂಕಾಳ ವೈದ್ಯ `ಸಿಡಿ’ ಬಿಡುಗಡೆಗೊಳಿಸಿದರು. ನಂತರ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.

loading...