ಅಂಬಿಕಾತನರು ಕನ್ನಡ ಸಾಹಿತ್ಯ ಲೋಕದಲ್ಲೊಂದು ಬೆಳಕಿನ ಕಂಬ

0
27
loading...

ಕನ್ನಡಮ್ಮ ಸುದ್ದಿ-ಧಾರವಾಡ : ಹಂಪಿ ಕನ್ನಡ ವಿಶ್ವವಿದ್ಯಾಲಯ ಮತ್ತು ಕುವೆಂಪು ಭಾಷಾ ಭಾರತಿ ಸಂಸ್ಥೆಗಳಲ್ಲಿ ತಿಳುವಳಿಕೆಕೊಟ್ಟು ತಿಳುವಳಿಕೆ ಬೆಳೆಸುವ ತಮ್ಮ ಅತಿದೊಡ್ಡ ಕೊಡುಗೆಯಿಂದಾಗಿ ಅಂಬಿಕಾತನಯದತ್ತರು ಕನ್ನಡ ಸಾಹಿತ್ಯ ಲೋಕದಲ್ಲೊಂದು ಬೆಳಕಿನ ಕಂಬವಾಗಿ ನಿಲ್ಲುತ್ತಾರೆಂದು ಡಾ.ಎಚ್.ಎಸ್.ರಾಘವೇಂದ್ರರಾವ ಅಭಿಪ್ರಾಯಪಟ್ಟರು.
ಬೇಂದ್ರೆ ಭವನದಲ್ಲಿ ವರಕವಿ ಅಂಬಿಕಾತನಯದತ್ತರ 122ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿ, ಸಮುದಾಯದೊಳಗಿದ್ದು ಅಲ್ಲಿಯ ತಲ್ಲಣಗಳನ್ನು ಗುರುತಿಸುವ, ಸಮುದಾಯದ ಹೊರನಿಂತು ಅವುಗಳಿಗಾಗಿ ಪರಿಹಾರ ಮಾರ್ಗ ಸೂಚಿಸುವ, ವ್ಯಕ್ತಿಪೂಜೆಯತ್ತ ವಾಲದೇ ಕರ್ನಾಟಕದ ಮೂಲೆ ಮೂಲೆಯ ಜನ ಸಾಮಾನ್ಯರ ಜೀವನದತ್ತ ದೃಷ್ಟಿಹಾಯಿಸಿ, ಮನುಷ್ಯನ ಸಮಾನತೆಯನ್ನು ಕಂಡುಕೊಳ್ಳುವ ಪ್ರಯತ್ನದ ಡಾ.ಕೆ.ವಿ.ನಾರಾಯಣರ ಸಾಹಿತ್ಯ ಅದು ಬೆಳಕಿನ ಹಾದಿಯನ್ನು ತೋರುತ್ತಲೇ ನಮ್ಮೊಳಗನ್ನೂ ತೋರಿಸುವ ಅಪರೂಪದ ಸಾಹಿತ್ಯವಾಗಿದೆ ಎಂದರು.
ಪ್ರೊ.ಸಿ.ವಿ.ವೇಣುಗೋಪಾಲ ಅಧ್ಯಕ್ಷತೆವಹಿಸಿದ್ದರು. ಡಾ.ಕೆ.ಆರ್.ದುರ್ಗಾದಾಸ್, ಡಾ.ಆರ್.ಬಿ.ಚಿಲುಮಿ, ಡಾ.ಹಂ.ವೆಂ.ಕಾಖಂಡಿಕಿ, ಶ್ರೀನಿವಾಸ ವಾಡಪ್ಪಿ, ಪ್ರೊ.ಜಿ.ಕೆ.ಹಿರೇಮಠ, ಜಿ.ಬಿ.ಹೊಂಬಳ, ದಮಯಂತಿ ನರೆಗಲ್ಲ, ಡಾ.ವಿನಯಾ ಒಕ್ಕುಂದ, ಭಾಗ್ಯಜೋತಿ ಹಿರೇಮಠ ಉಪಸ್ಥಿತರಿದ್ದರು. ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಬಸವರಾಜ ಹೂಗಾರ ಸ್ವಾಗತಿಸಿದರು. ಟ್ರಸ್ಟ್ ಅಧ್ಯಕ್ಷ ಡಾ.ಶ್ಯಾಮಸುಂದರ ಬಿದರಕುಂದಿ ಪ್ರಾಸ್ತಾವಿಕ ಮಾತನಾಡಿದರು. ಟ್ರಸ್ಟ್ ಸದಸ್ಯ ನರಸಿಂಹ ಪರಾಂಜಪೆ ವಂದಿಸಿದರು. ಮಾಯಾ ರಾಮನ್ ನಿರೂಪಿಸಿದರು.

loading...