ಅಭಿನಯವೆಂಬ ಲಲಿತಕಲೆಗಳ ಸಂಗಮ

0
30
loading...

ಕನ್ನಡಮ್ಮಸುದ್ದಿ-ಧಾರವಾಡ : ಟಿ. ವಿ. ಹಾಗೂ ಸಿನೆಮಾಗಳು ಹವ್ಯಾಸಿ ಹಾಗೂ ವೃತ್ತಿರಂಗಭೂಮಿಗೆ ಸವಾಲು ಒಡ್ಡಿದ್ದನ್ನು ನಂತರ ಮತ್ತೆ ರಂಗಭೂಮಿಯ ಕಡೆ ಪ್ರೇಕ್ಷಕರ ಒಲವು ಮೂಡುತ್ತಿರುವದನ್ನು ನಾವು ಕಾಣುತ್ತೇವೆ ಎಂದು ಜೆ.ಎಸ್.ಎಸ್. ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ಜಿನದತ್ತ ಹಡಗಲಿ ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಾರ್ಗದರ್ಶನದಲ್ಲಿ ಶಿವಕುಮಾರ ಕಲಾ ಸಂಘ ಶಿವಸಂಚಾರ-2016-17 ಸಾಣೇಹಳ್ಳಿ ಅವರಿಂದ ಆಯೋಜಿಸಿದ್ದ “ಮೂರು ದಿನಗಳ ನಾಟಕೋತ್ಸವ”ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ನಾಟಕ ಎನ್ನುವದು ಮನಸ್ಸಿಗೆ ಮುದ ನೀಡುವುದರ ಜೊತೆಗೆ ಪ್ರೇಕ್ಷಕನಿಗೆ ಜೀವನ ದರ್ಶನವನ್ನು ನೀಡಿ ಹಿತ ಎನಿಸುವ ನೀತಿಯನ್ನು ಬೋಧಿಸಿ ಜೀವನದ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುವ ಕಲೆಯಾಗಿದೆ. ದೃಶ್ಯ, ಕಾವ್ಯ ಎಂದು ಪ್ರಸಿದ್ಧಿ ಪಡೆದ ನಾಟಕ ಸಾಹಿತ್ಯ, ಸಂಗೀತ, ನೃತ್ಯ, ಅಭಿನಯವೆಂಬ ಲಲಿತಕಲೆಗಳ ಸಂಗಮವಾಗಿದೆ. ಪ್ರೇಕ್ಷಕರಾದವರು ಪಾತ್ರಗಳೊಂದಿಗೆ ನಕ್ಕು ಅವರೊಂದಿಗೆ ಅತ್ತು ಭಿನ್ನ ಭಾವಗಳನ್ನು ಅಂತರಂಗದಲ್ಲಿಯೇ ಅನುಭವಿಸಿ ಜೀವನದಲ್ಲಿ ಪಾಠ ಕಲಿಯುವಂತಿರಬೇಕು ಎಂದರು.
ಶಿವಣ್ಣ ಬೆಲ್ಲದ ಅಧ್ಯಕ್ಷತೆವಹಿಸಿ ಮಾತನಾಡಿದರು. ಬಿ. ಆರ್. ಮಂಜುನಾಥ, ಶಿವಾನಂದ ಭಾವಿಕಟ್ಟಿ ಉಪಸ್ಥಿತರಿದ್ದರು.

loading...