ಉಳ್ಳವರು ಮಾತ್ರ ಒಳ್ಳೆಯ ಶಿಕ್ಷಣ ಪಡೆಯುವ ವಾತಾವರಣ ಸೃಷ್ಟಿಯಾಗಿದೆ

0
16
loading...

ಕನ್ನಡಮ್ಮ ಸುದ್ದಿ-ಧಾರವಾಡ : ಎಲ್ಲ ಮಕ್ಕಳಿಗೂ ಸಮಾನ ಶಿಕ್ಷಣ ಸಿಗುವಂತಾಗಬೇಕು ಅಂದಾಗಲೇ ಭವ್ಯ ಭಾರತದ ಕನಸು ನನಸು ಮಾಡಲು ಸಾಧ್ಯ ಎಂದು ವಿದೂಷಿ ವೈಜಯಂತಿಕಾಶಿ ಹೇಳಿದರು.
ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜರುಗಿದ ಗುಬ್ಬಚ್ಚಿಗೂಡು ಹಾಗೂ ಚಿಲಿಪಿಲಿ ಶಾಲೆಗಳ ಮಕ್ಕಳ 6ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪ್ರತಿ ಮಗುವಿನಲ್ಲೂ ಪ್ರತಿಭೆ ಇರುತ್ತದೆ ಅದನ್ನು ಗುರುತಿಸುವ ಒಳನೋಟವು ಪಾಲಕರದ್ದಾಗಬೇಕು. ಮಕ್ಕಳನ್ನು ಬರೀ ಅಂಕಗಳನ್ನು ಗಳಿಸುವುದಕ್ಕಾಗಿ ಒತ್ತಡ ಹಾಕುತ್ತಿರುವ ಪಾಲಕರು ಆ ಮಗುವಿನಲ್ಲಿದ್ದ ಪ್ರತಿಭೆ ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿಲ್ಲ. ಉಳ್ಳವರು ಮಾತ್ರ ಒಳ್ಳೆಯ ಶಿಕ್ಷಣ ಪಡೆಯುವಂತ ವಾತಾವರಣ ಇಂದು ಸೃಷ್ಟಿಯಾಗುತ್ತಿದೆ ಇದು ಸಮಾಜಕ್ಕೆ ಒಳ್ಳೆಯ ಬೆಳವಣಿಗೆಯಲ್ಲ ಹಿಂದುಳಿದ ಪ್ರದೇಶದ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವಲ್ಲಿ ಸಂಸ್ಥೆಗಳು ಆಸಕ್ತಿವಹಿಸಬೇಕು ಎಂದರು.
Àತವನಪ್ಪ ಅಷ್ಟಗಿ ಮಾತನಾಡಿ, ಇಂದಿನ ಮಕ್ಕಳು ಪ್ರತಿಯೊಂದನ್ನು ಪ್ರಶ್ನಿಸುವ ಮನೋಭಾವನೆಯನ್ನು ಹೊಂದಿದ್ದಾರೆ. ಎಲ್ಲವನ್ನೂ ತರ್ಕಕ್ಕೆ ಹಚ್ಚಿ ಸ್ವೀಕರಿಸುವ ಗುಣವನ್ನು ಮಕ್ಕಳಲ್ಲಿ ಬೆಳೆಯಬೇಕು ಅಂದಾಗಲೇ ನಿರ್ಭಯ ವಾತಾವರಣ ಉಳ್ಳ ಸಮಾಜ ಕಾಣಲು ಸಾಧ್ಯ ಎಂದರು.
ಯೋಗಶಿಕ್ಷಕ ಎಂ.ಡಿ.ಪಾಟೀಲ ಮಾತನಾಡಿ, ಮಕ್ಕಳ ಕಲಿಕೆ ಆನಂದದಾಯಕವಾಗಿರಬೇಕಾದರೆ ಮಾನಸಿಕವಾಗಿ ಸದೃಢವಾಗಿರಬೇಕು. ಶರೀರ ಸದೃಢಇದ್ದಾಗ ಮಾತ್ರ ಮನಸ್ಸು ಸದೃಢಇರಲು ಸಾಧ್ಯ.ಇವೆರಡೂಇರಬೇಕಾದರೆ ಒಂದಿಷ್ಟು ನಿಯಮಿತವಾಗಿಯೋಗವನ್ನು ಮಕ್ಕಳು ಮಾಡುವಂತಾಗಬೇಕು ಎಂದರು.
ಶಂಕರ ಹಲಗತ್ತಿ ಅಧ್ಯಕ್ಷತೆವಹಿಸಿದ್ದರು. ಕ್ಷೇತ್ರ ಸಂಪ್ಮೂಲ ವ್ಯಕ್ತಿ ರಾಜೇಶ್ವರಿ ಸವಣೂರ, ಕರ್ನಾಟಕ ಹಣಕಾಸು ಸಂಸ್ಥೆಯ ಅಧಿಕಾರಿ ಸುನಿಲ ಕುಲಕರ್ಣಿ ಉಪಸ್ಥಿತರಿದ್ದರು. ವಿಜಯಲಕ್ಷ್ಮಿ ಸುಭಾಂಜಿ ಸ್ವಾಗತಿಸಿದರು, ಭಾರತಿ ಸಾಬಳೆ ನಿರೂಪಿಸಿದರು, ಪ್ರಗತಿ ಸಾಬಳೆ ವಂದಿಸಿದರು. ನಂತರ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.

loading...