‘ಎಸ್ಡಿಎಂ ಝೇಂಕಾರ’ ದಲ್ಲಿ ಭಟ್ಕಳದ ಅಂಜುಮನ್ ಕಾಲೇಜು ವಿದ್ಯಾರ್ಥಿಗಳು ಚಾಂಪಿಯನ್

0
41
loading...

ಕನ್ನಡಮ್ಮ ಸುದ್ದಿ-ಭಟ್ಕಳ : ಧರ್ಮಸ್ಥಳ ಉಜಿರೆ ಎಸ್.ಡಿ.ಎಂ. ಪಿ.ಜಿ ಸೆಂಟರ್ ನಲ್ಲಿ ಆಯೋಜಿಸಿದ್ದ ‘ಎಸ್ಡಿಎಂ ಝೇಂಕಾರ ಫೆಸ್ಟ್’ ನಲ್ಲಿ ಭಟ್ಕಳದ ಅಂಜುಮನ್ ಪದವಿ ಕಾಲೇಜ್ ಮತ್ತು ಸ್ನಾತಕ ಕೇಂದ್ರದ ವಿದ್ಯಾರ್ಥಿಗಳು ಚಾಂಪಿಯನ್ ಶಿಪ್ ಗಳಿಸಿಕೊಂಡಿದ್ದಾರೆ.

ಫೆಸ್ಟ್ ನಲ್ಲಿ ರಾಜ್ಯದ 35 ಪದವಿ ಕಾಲೇಜಿನಿಂದ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದು ಇದರಲ್ಲಿ ಎಲ್ಲ ವಿಭಾಗದಲ್ಲಿ ಅತಿ ಹೆಚ್ಚು ಸ್ಪರ್ಧೆಗಳನ್ನು ವಿಜಯಿಯಾಗುವುದರ ಮೂಲಕ ಅಂಜುಮನ್ ಸಂಸ್ಥೆಯ ವಿದ್ಯಾರ್ಥಿಗಳು ವಿರಾಗ್ರಾಣಿ ಪ್ರಶಸ್ತಿಗೆ ಬಾಜನವಾಯಿತು.

ಯುವ ವಿಜ್ಞಾನಿ, ನ್ಯೂಸ್ ಅಂಕರಿಂಗ್, ಕ್ರೀಯಶೀಲ ಬರವಣಿಗೆ, ರೇಡಿಯೋ ಜಾಕಿ, ಕೈಟ್ ಮೇಕಿಂಗ್ ಮತ್ತು ಪ್ಲಯಿಂಗ್, ಕಿರುಚಿತ್ರ ನಿರ್ಮಾಣ, ದಂತಹ ವಿವಿಧ ವಿಭಾಗದಲ್ಲಿ ಸ್ಪರ್ಧೆಗಳು ನಡೆದವು. ಭಟ್ಕಳ ಅಂಜುಮನ್ ಸಂಸ್ಥೆಯಿಂದ 13 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಅಬ್ದುಲ ಮುಹಮೀನ್ ಸಾದಾ ನ್ಯೂಸ್ ಅಂಕರಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ಎಲ್ಲ ಸುತ್ತುಗಳನ್ನು ಗೆದ್ದು ಪ್ರಥಮ ಬಹುಮಾನ ಪಡೆದುಕೊಂಡರು. ನುಝೈಫ್ ಮನಿಗಾರ್ ಕ್ರೀಯಾಶೀಲ ಬರವಣಿಗೆಯಲ್ಲಿ ಪ್ರಥಮ, ಕಿರು ಚಿತ್ರ ನಿರ್ಮಾಣದಲ್ಲಿ ಮುಹಮ್ಮದ್ ನೂಹ್ ಮೊಹತೆಶಮ್ ದ್ವಿತೀಯಾ ಗುಫ್ರಾನ್ ಕೋಲಾ ಕೈಟ್ ಮೇಕಿಂಗ್ ನಲ್ಲಿ ದ್ವಿತೀಯಾ ಬಹುಮಾನ ಪಡೆದುಕೊಂಡಿದ್ದಾರೆ.

loading...