ಕವಿತ್ವ ಶಕ್ತಿಯಿಂದ ರೂಪಿತವಾದ ನಿವೇದನೆ

0
21
loading...

ಕನ್ನಡಮ್ಮ ಸುದ್ದಿ-ಧಾರವಾಡ : ಗಟ್ಟಿಯಾದ ಅನುಭವವನ್ನ ಹೊಂದಿ ತಮ್ಮ ಭಾವನೆಗಳನ್ನು ಹೊರಸೂಸುವಾಗ ಸೂಕ್ಷ್ಮವಾದ ಸಂವೇದನೆ ಕವಿಗಳಿಗೆ ಅಗತ್ಯವಿದೆಯಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಕವಯಿತ್ರಿ ಸುಕನ್ಯಾ ಬಿ. ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ ಬಿ. ಎಂ. ಪಾಟೀಲ ಸಭಾಭವನದಲ್ಲಿ ಸ್ನೇಹರಂಗ ಕಲಾಬಳಗದ ಎರಡನೆಯ ವಾರ್ಷಿಕೋತ್ಸವದ ನಿಮಿತ್ತ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಡಾ. ನಾಗರಾಜ ದೇಶಪಾಂಡೆ ವಿರಚಿತ ‘ನಿವೇದನೆ’ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿ, ಡಾ. ನಾಗರಾಜ ದೇಶಪಾಂಡೆಯವರ ‘ನಿವೇದನೆ’ ಕೃತಿಯಲ್ಲಿ ಮಾತೃಸ್ವರೂಪವನ್ನು ಕಾಣುವುದರ ಜೊತೆಗೆ ಹೃದಯವಂತಿಕೆಯನ್ನು ಎತ್ತಿ ತೋರಿಸುತ್ತದೆ ಎಂದರು.
ಸಾಹಿತಿ ಮೋಹನ ನಾಗಮ್ಮನವರ ಮಾತನಾಡಿ, ಕವಿತ್ವ ಶಕ್ತಿಯಿಂದ ರೂಪಿತವಾದ ನಿವೇದನೆ ಕೃತಿಯು ಸಮಾಜದ ಒಳಿತಿಗೆ ಸ್ಪಂದಿಸುವುದರ ಜೊತೆಗೆ ಸಾಹಿತ್ಯಿಕ, ಚಿಕಿತ್ಸಕ ಶ್ರೀಮಂತಿಕೆಯನ್ನು ಮೆರೆದಿದೆ ಎಂದರು.
ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮಾರುತಿ ಶಿಡ್ಲಾಪೂರ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಕೆ. ಜಗುಚಂದ್ರ, ಡಾ. ಚಿದಾನಂದ ಕಮ್ಮಾರ, ಹೇಮಂತ ಲಮಾಣಿ, ಅರ್ಜುನ ವಠಾರ, ಶಿವಾನಂದ ಹೂಗಾರ, ಪ್ರೇಮಾನಂದ ಶಿಂಧೆ, ಬಸವರಾಜ ಗೊರವರ, ಎಂ.ಆರ್. ಪಾಲ್ತಿ, ಎಸ್.ಬಿ. ಜಗಾಪೂರ, ಚಂದ್ರಶೇಖರ ಕುಂಬಾರ, ಐ.ಎಸ್. ಮೇಟಿ, ಜಿ. ಕೆ. ಬೆಳ್ಳನವರ, ವಿಕಾಸ ಉಂಡಾಳೆ, ಎಸ್.ಪಿ. ಹಿರೇಮಠ ಉಪಸ್ಥಿತರಿದ್ದರು. ಸಿ.ಎಂ. ಕೆಂಗಾರ ಸ್ವಾಗತಿಸಿದರು. ಎಫ್.ಬಿ. ಕಣವಿ ಪ್ರಾಸ್ತಾವಿಕ ಮಾತನಾಡಿದರು. ಎಸ್.ಎಸ್. ಜೋಶಿ ವಂದಿಸಿದರು. ಸುರೇಶ ಬೆಟಗೇರಿ ನಿರೂಪಿಸಿದರು.

loading...