ಗೀಗೀ ಪದ ಮತ್ತು ಬೀದಿನಾಟಕಗಳ ಮೂಲಕ ಆರೋಗ್ಯ ಜಾಗೃತಿ ಅಭಿಯಾನ

0
90
loading...

ಕನ್ನಡಮ್ಮ ಸುದ್ದಿ-ಕುಷ್ಟಗಿ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ ಇವರ ಆಶ್ರಯದಲ್ಲಿ 2016-17ನೇ ಸಾಲಿನ ಐ.ಇ.ಸಿ, ಬಿ.ಸಿ.ಸಿ. ಅನುದಾನಿತ ಕಾರ್ಯಕ್ರಮಗಳ ಅಡಿಯಲ್ಲಿ ಜಾನಪದ ಕಲಾತಂಡಗಳ ಮೂಲಕ ಆರೋಗ್ಯ ಸೇವೆಗಳ ಕುರಿತು ಜನ ಸಾಮಾನ್ಯರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಜಿಲ್ಲೆಯ ಆಯ್ದ ಹತ್ತು ಗ್ರಾಮಗಳಲ್ಲಿ ದಾವಲಸಾಬ ಅತ್ತಾರ ಮತ್ತು ತಂಡ ಹಾಬಲಕಟ್ಟಿ ತಾ: ಕುಷ್ಟಗಿ ಇವರಿಂದ ಗೀಗೀ ಪದಗಳು ಮತ್ತು ಬೀದಿನಾಟಕ ಸನ್ನಿವೇಶಗಳ ಮೂಲಕ ತಾಯಿ-ಮಗುವಿನ ಆರೋಗ್ಯ ಹೆಣ್ಣು ಮಗುವಿನ ರಕ್ಷಣೆ, ಬಾಲ್ಯವಿವಾಹ ತಡೆಗಟ್ಟುವಿಕೆ, ಗರ್ಭಿಣಿ ಆರೈಕೆ, ಹದಿಹರೆಯದ ಲೈಂಗಿಕ ಸಮಸ್ಯೆಗಳು, ಕುಟುಂಬ ಯೋಜನೆ, ಭ್ರೂಣಲಿಂಗ ಪತ್ತೆ ಶಾಸನ, ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ, ಮಡಿಲು ಯೋಜನೆ, ವಾಜಪೇಯಿ ಆರೋಗ್ಯಶ್ರೀ ಯೋಜನೆ, ಮಕ್ಕಳ 10 ಲಸಿಕಾ ಕಾರ್ಯಕ್ರಮಗಳು ವಿಶೇಷವಾಗಿ ರಾಜ್ಯಾದ್ಯಾಂತ 9 ತಿಂಗಳಿಂದಾ 15 ವರ್ಷದೊಳಗಿನ ಮಕ್ಕಳಿಗೆ ಫೆಬ್ರುವರಿ 7 ರಿಂದ ಫೆ.28ರವರೆಗೆ ರುಬೆಲ್ಲಾ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಬೇಕೆಂದು ಬೀದಿ ನಾಟಕ ಹಾಗೂ ಗೀಗೀಪದ ಜಾಗೃತಿ ಪದಗಳ ಮೂಲಕ ಕರೆ ನೀಡಲಾಯಿತು. ಜಿಲ್ಲೆಯ ಗಂಗಾವತಿ ತಾಲೂಕಿನ ವೆಂಕಟಗಿರಿ, ದಾಸನಾಳ, ವಟ್ಟರಹಟ್ಟಿ, ಗಡ್ಡಿ, ಬಂಡ್ರಾಳ, ಹಂಪಸದುರ್ಗ, ಆಗೋಲಿ, ವಿಠ್ಠಲಾಪುರ ಮುಂತಾದ ಗ್ರಾಮಗಳಲ್ಲಿ ಯಶಸ್ವಿಯಾಗಿ ಕಾರ್ಯಕ್ರಮ ನೀಡಲಾಯಿತು ಕಾರ್ಯಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಸ್ತ್ರೀ ಶಕ್ತಿ ಗುಂಪಿನ ತಾಯಂದಿರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು ಭಾಗವಹಿಸಿದ್ದರು. ಕಲಾತಂಡದಲ್ಲಿ ಹಿರಿಯ ಕಲಾವಿದರಾದ ದಾವಲಸಾಬ ಅತ್ತಾರ, ಖಾಜಾಹುಸೇನ್ ಅತ್ತಾರ, ರಾಜೇಶ್ವರಿ ಟಕ್ಕಳಕಿ, ಚನ್ನಮ್ಮ ನಿಡಶೇಸಿ, ಶಿವಣ್ಣ ಪೂಜಾರಿ ಮುಂತಾದ ಕಲಾವಿದರು ಭಾಗವಹಿಸಿದ್ದರು.

loading...