ಚೂರ್ಣತ್ವದಿಂದ ಪೂರ್ಣತ್ವದೆಡೆಗೆ ಮುನ್ನಡೆಸುವವನೇ ಗುರು

0
30
loading...

ಕನ್ನಡಮ್ಮ ಸುದ್ದಿ-ಧಾರವಾಡ : ಗುರುವಿನ ಆಶೀರ್ವಾದ ಇದ್ದರೆ ಮಾತ್ರ ಇಹದಲ್ಲಿ ಕ್ರಮಿಸುವ ಹಾದಿ ಸುಗಮವಾಗುತ್ತದೆ. ನಾವು ಭಕ್ತಿಯನ್ನು ಆವರಿಸಿದರೆ, ಭಕ್ತಿ ನಮ್ಮನ್ನು ಆವರಿಸುತ್ತದೆ. ಗುರುಕಾರುಣ್ಯವಿಲ್ಲದೆ ಜೀವನದಲ್ಲಿ ಏನೂ ಸಾಧಿಸಲು ಸಾಧ್ಯವಿಲ್ಲ ಎಂದು ಬಹುಭಾಷಾ ಕವಿ ಡಾ.ಪಂಚಾಕ್ಷರಿ ಹಿರೇಮಠ ಹೇಳಿದರು.
ತತ್ವಾನೇಷಣ ಮಂದಿರದಲ್ಲಿ ವೀರಶೈವ ಜಂಗಮ ಸಂಸ್ಥೆಯ ಏರ್ಪಡಿಸಿದ ‘ಗುರುಕಾರುಣ್ಯ’ ವಿಷಯ ಕುರಿತು ಮಾತನಾಡಿ, ಮನುಷ್ಯ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಅವನಿಗೆ ಗುರುಕಾರುಣ್ಯ ಬೇಕೇಬೇಕು. ಗುರುಕರುಣೆ ಇಲ್ಲದೇ ಸಾಧನೆ ಅಸಾಧ್ಯವಾಗುತ್ತದೆ. ಕತ್ತಲೆಯಿಂದ ಬೆಳಕಿನೆಡೆಗೆ, ಅಪೂರ್ಣತೆಯಿಂದ ಪೂರ್ಣತೆಯ ಕಡೆಗೆ, ಚೂರ್ಣತ್ವದಿಂದ ಪೂರ್ಣತ್ವದೆಡೆಗೆÉ ಮುನ್ನಡೆಸುವವನೇ ಶ್ರೀಗುರು. ಬದುಕಿನಲ್ಲಿ ಎಲ್ಲಿಯೂ ಎಚ್ಚರ ತಪ್ಪದಂತೆ ಸದಾ ಒಳಗಿನ ಬೆಳಗನ್ನು ಅಧಿಕಗೊಳಿಸಿ ಶ್ರೀಗುರು ಕೈಹಿಡಿದು ಮುನ್ನಡೆಸುತ್ತಾನೆ ಗುರುಕೃಪೆಗೆ ಪಾತ್ರರಾದವರೇ ಧನ್ಯರು ಎಂದರು.
ನಿವೃತ್ತ ಎ.ಸಿ.ಪಿ. ಜಿ. ಆರ್. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ನೀಲಲೋಚನಾ ಹಿರೇಮಠ, ಡಾ.ಎಸ್ ಬಿ ಪುರಾಣಿಕ, ಪಂಪಾಪತಿ ಹಿರೇಮಠ, ಡಾ. ಮಹಾಂತಸ್ವಾಮಿ ಹಿರೇಮಠ, ಕೆ. ಎ. ಕಲ್ಲೂರ, ಸಿ.ಎಸ್. ಪಾಟೀಲಕುಲಕರ್ಣಿ, ಸೋಮಶೇಖರ ಮರಡಿಮಠ, ವಿ. ಎಸ್. ಹಿರೇಮಠ, ಎಂ. ಪಿ. ಹಿರೇಮಠ, ಪುಷ್ಟಾ ಪಾಟೀಲ ಉಪಸ್ಥಿತರಿದ್ದರು.

loading...