ಜನಪದ ಕಲೆ ಒಂದು ಮನೊರಂಜನೆಯಲ್ಲ: ಕಟ್ಟಿ

0
35
loading...

ಕನ್ನಡಮ್ಮ ಸುದ್ದಿ-ಧಾರವಾಡ : ದೃಶ್ಯ ಮಾಧ್ಯಮಗಳಲ್ಲಿ ನಮ್ಮದಲ್ಲದ ಮತ್ತು ಸಮಾಜಕ್ಕೆ ಮಾರಕವಾಗುವ ಕಾರ್ಯಕ್ರಮಗಳನ್ನು ಪ್ರದರ್ಶಿಸಿ, ಮಕ್ಕಳನ್ನು ದಾರಿ ತಪ್ಪಿಸು ಯತ್ನ ಮಾಡಲಾಗುತ್ತ್ತಿದೆ ಎಂದು ಪ್ರಗತಿಪರ ಚಿಂತಕ ಎಂ. ಬಿ. ಕಟ್ಟಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಮಕ್ಕಳ ಮಂಟಪ ಏರ್ಪಡಿಸಿದ್ದ ‘ಮಕ್ಕಳ ಜನಪದ ವೈಭವ-2017’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನಪದ ಕಲೆ ಒಂದು ಮನೊರಂಜನೆಯಲ್ಲ. ಅದು ನಮ್ಮ ನೈಜ ಬದುಕಿನ ಪ್ರತಿಬಿಂಬ. ನಮ್ಮ ಹಿರಿಯರು ನಮ್ಮದೇಶ, ಭಾಷೆ, ಆಚಾರ, ವಿಚಾರ, ಸಂಬಂಧಗಳು ಮತ್ತುಆರೋಗ್ಯಕರ ಸಮಾಜ ಮುಂತಾದ ನೆಲಗಟ್ಟುಗಳನ್ನು ನೋಡಿ, ಅನುಭವಿಸಿ, ಸಮೀಕರಿಸಿ ಸಮಾಜ ಮುಂದೆ ಹೇಗೆ ನಡೆಯಬೇಕೆಂದು ವಿವಿಧಜನಪದ ಕಲೆಗಳ ಮೂಲಕ ಸಮಾಜಕ್ಕೆ ದಿವ್ಯದಾರಿ ದೀಪವನ್ನು ನೀಡಿದ್ದಾರೆ ಎಂದರು.
ನ್ಯಾಯವಾದಿ ಬಿ. ಸಿ. ಗುಡ್ಡದಮಠ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಸಂಸ್ಕøತಿ ನಮ್ಮ ಹೆಮ್ಮೆ. ನಮ್ಮ ಸಂಸ್ಕøತಿಗೆಧಕ್ಕೆ ಬಾರದಂತೆ ನಡೆದುಕೊಳ್ಳುವುದು ಕೂಡಾ ನಮ್ಮಜವಾಬ್ದಾರಿ ಹಾಗೂ ಕರ್ತವ್ಯ.ಜನಪದ ಕಲೆ ನಮ್ಮ ಸಂಸ್ಕøತಿಯತಾಯಿಬೇರು. ಮಕ್ಕಳಿಗೆ ಜನಪದಕಲೆಯನ್ನು ಪರಿಚಯಿಸುವ ಪ್ರಯತ್ನಗಳು ಇನ್ನೂ ಹೆಚ್ಚೆಚ್ಚು ಆಗಬೇಕಿವೆ. ನಗರೀಕರಣದ ಭರಾಟೆಯಲ್ಲಿಗ್ರಾಮೀಣ ಮಟ್ಟದಲ್ಲಿಕೂಡಾಜನಪದ ಕಲೆಗಳು ನಮಗೆ ತಿಳಿಯದಂತೆ ಮಾಯವಾಗುತ್ತಿವೆ ಎಂದರು.
Àಆಲೂರ ವೆಂಕಟರಾವ ಸ್ಮಾರಕ ರಾಷ್ಟ್ರೀಯ ಟ್ರಸ್ಟ್ ಸದಸ್ಯ ವೆಂಕಟೇಶ ದೇಸಾಯಿ, ಕೃಷ್ಣ ಜೋಶಿ ಸುರೇಶ ಹಾರೋಬಿಡಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಮುಮ್ಮಿಗಟ್ಟಿಯ ಜನಸಾಗರ ಸಾಹಿತ್ಯ ಕಲೆ ಮತ್ತು ಸಂಸ್ಕøತಿಕ ಸಂಸ್ಥೆಯ ಮಕ್ಕಳು ವಿವಿಧ ಪ್ರಕಾರದ ಜನಪದ ಕಲೆಯ ಪ್ರದರ್ಶನಗಳನ್ನು ನೀಡಿದರು.

loading...