ಜನಪದ ನೈಜ ಬದುಕಿನ ಪ್ರತಿಬಿಂಬ

0
21
loading...

ಕನ್ನಡಮ್ಮ ಸುದ್ದಿ-ಧಾರವಾಡ : ದೃಶ್ಯ ಮಾಧ್ಯಮಗಳಲ್ಲಿ ನಮ್ಮದಲ್ಲದ ಮತ್ತು ಸಮಾಜಕ್ಕೆ ಮಾರಕವಾಗುವ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಮಕ್ಕಳನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ ಎಂದು ಪ್ರಗತಿಪರ ಚಿಂತಕ ಎಂ. ಬಿ. ಕಟ್ಟಿ ವಿಷಾದ ವ್ಯಕ್ತಪಡಿಸಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಮಕ್ಕಳ ಮಂಟಪ ಏರ್ಪಡಿಸಿದ್ದ ‘ಮಕ್ಕಳ ಜನಪದ ವೈಭವ-2017’À ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿ, ಜನಪದ ಕಲೆ ಒಂದು ಮನೊರಂಜನೆಯಲ್ಲ ಅದು ನಮ್ಮ ನೈಜ ಬದುಕಿನ ಪ್ರತಿಬಿಂಬ. ನಮ್ಮ ಹಿರಿಯರು ನಮ್ಮದೇಶ, ಭಾಷೆ, ಆಚಾರ, ವಿಚಾರ, ಸಂಬಂಧಗಳು ಮತ್ತು ಆರೋಗ್ಯಕರ ಸಮಾಜ ಮುಂತಾದ ನೆಲಗಟ್ಟುಗಳನ್ನು ನೋಡಿ, ಅನುಭವಿಸಿ, ಸಮೀಕರಿಸಿ ಸಮಾಜ ಮುಂದೆ ಹೇಗೆ ನಡೆಯಬೇಕು ಎಂಬುದನ್ನು ಕಲಿಸಿದ್ದಾರೆ. ವಿವಿಧ ಜನಪದ ಕಲೆಗಳ ಮೂಲಕ ಸಮಾಜಕ್ಕೆ ದಿವ್ಯದಾರಿ ದೀಪವನ್ನು ನೀಡಿದ್ದಾರೆ ಕಾರಣ ನಮ್ಮತನ ಉಳಿಸಿಕೊಳ್ಳಬೇಕಾದಲ್ಲಿ ಅಮೂಲ್ಯವಾದ ನಮ್ಮಜನಪದ ಕಲೆಗಳು ಉಳಿಯಬೇಕು. ನಮ್ಮ ಜನಪದ ಕಲೆಯನ್ನು ಉಳಿಸಿಕೊಳ್ಳಲು ಸಾರ್ವಜನಿಕರು ಜನಪದಕ್ಕಾಗಿ ಜನಪರ ಚಳುವಳಿಯನ್ನು ಮಾಡಬೇಕಾಗಿದೆ ಎಂದರು.
ನ್ಯಾಯವಾದಿ ಬಿ. ಸಿ. ಗುಡ್ಡದಮಠ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಸಂಸ್ಕøತಿ ನಮ್ಮ ಹೆಮ್ಮೆ. ನಮ್ಮ ಸಂಸ್ಕøತಿಗೆಧಕ್ಕೆ ಬಾರದಂತೆ ನಡೆದುಕೊಳ್ಳುವುದು ಕೂಡಾ ನಮ್ಮಜವಾಬ್ದಾರಿ ಹಾಗೂ ಕರ್ತವ್ಯ.ಜನಪದ ಕಲೆ ನಮ್ಮ ಸಂಸ್ಕøತಿಯ ತಾಯಿಬೇರು. ಮಕ್ಕಳಿಗೆ ಜನಪದ ಕಲೆಯನ್ನು ಪರಿಚಯಿಸುವ ಪ್ರಯತ್ನಗಳು ಇನ್ನೂ ಹೆಚ್ಚೆಚ್ಚು ಆಗಬೇಕಿವೆ. ನಗರೀಕರಣದ ಭರಾಟೆಯಲ್ಲಿ ಗ್ರಾಮೀಣ ಮಟ್ಟದಲ್ಲಿ ಕೂಡಾ ಜನಪದ ಕಲೆಗಳು ನಮಗೆ ತಿಳಿಯದಂತೆ ಮಾಯವಾಗುತ್ತಿವೆ. ಜನಪದ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಂಘದ ಮಕ್ಕಳ ಮಂಟಪ ಮಾಡುತ್ತಿರುವ ಕಾರ್ಯಕ್ರಮಗಳು ಶ್ಲಾಘನೀಯ ಎಂದರು.
Àಆಲೂರ ವೆಂಕಟರಾವ ಸ್ಮಾರಕ ರಾಷ್ಟ್ರೀಯ ಟ್ರಸ್ಟ್ ಸದಸ್ಯ ವೆಂಕಟೇಶ ದೇಸಾಯಿ ಮಾತನಾಡಿ, ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮದ ಹೆಸರಲ್ಲಿ ಇತ್ತೀಚಿನ ದಿನಗಳಲ್ಲಿ ನಮ್ಮ ಮೂಲ ಸಂಸ್ಕøತಿಗೆ ಮತ್ತು ಜನಪದಕ್ಕೆ ಧಕ್ಕೆ ಉಂಟಾಗುತ್ತಿದೆ. ಸಂಸ್ಕøತಿ ವಿನಾಶ ದೇಶದ ಅವನತಿ. ಪಾಲಕರು ಈ ನಿಟ್ಟನಲ್ಲಿ ಜಾಗೃತ ಹೆಜ್ಜೆ ಇರಿಸಬೇಕಾದ ಸನ್ನಿವೇಶ ಮತ್ತು ಸಮಯದಲ್ಲಿ ಈಗ ನಾವಿದ್ದೇವೆ ಎಂದರು.
ಕೃಷ್ಣ ಜೋಶಿ, ಸುರೇಶ ಹಾರೋಬಿಡಿ ಉಪಸ್ಥಿತರಿದ್ದರು. ಜಯಶ್ರೀ ಗೌಳಿ ಸ್ವಾಗತಿಸಿದರು. ಮಕ್ಕಳ ಮಂಟಪದ ಸಂಚಾಲಕ ಪ್ರಕಾಶ ಉಡಿಕೇರಿ ಪ್ರಾಸ್ತಾವಿಕ ಮಾತನಾಡಿದರು. ನೀಲಾ ಕೋಲಕರ ನಿರೂಪಿಸಿದರು. ಜಯಶ್ರೀಜಾತಿಕರ್ತ ವಂದಿಸಿದರು. ಮುಮ್ಮಿಗಟ್ಟಿಯ ಜನಸಾಗರ ಸಾಹಿತ್ಯ ಕಲೆ ಮತ್ತು ಸಂಸ್ಕøತಿಕ ಸಂಸ್ಥೆಯ ಮಕ್ಕಳು ವಿವಿಧ ಪ್ರಕಾರದ ಜನಪದ ಕಲೆಯ ಪ್ರದರ್ಶನಗಳನ್ನು ನೀಡಿದರು.

loading...