ಜನರು ಗುಳೆ ಹೋಗುವದನ್ನು ತಡೆಯುವ ಕೆಲಸ ಆಯಾ ಗ್ರಾಮ ಪಂಚಾಯತ ಅಧಿಕಾರಿಗಳ ಹೊಣೆ: ನಾಗರಹಳ್ಳಿ

0
43
loading...

ಕನ್ನಡಮ್ಮ ಸುದ್ದಿ-ಕುಷ್ಟಗಿ : ಜಿಲ್ಲೆಯಲ್ಲಿ ಬರಗಾಲ ಇರುವದರಿಂದ ಜನ ಜಾನುವಾರಗಳು ಸಂಕಷ್ಟದಲ್ಲಿದ್ದು ಅಧಿಕಾರಿಗಳು ತಮ್ಮ ಕೆಲಸದಲ್ಲಿ ವಿಳಂಬ ಮಾಡದೆ ಸಮರ್ಪಕವಾದ ಕೆಲಸ ನಿರ್ವಹಿಸಿ ಜನರು ಗುಳೆ ಹೋಗದಂತೆ ಆಯಾ ಗ್ರಾಮ ಪಂಚಾಯತ ಅಧಿಕಾರಿಗಳು ತಡೆಯಬೇಕು. ಇಲ್ಲವಾದರೆ ಗ್ರಾ.ಪಂ. ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷ ಎಸ್.ಬಿ. ನಾಗರಹಳ್ಳಿ ಹೇಳಿದರು.
ಪಟ್ಟಣದ ತಾಲುಕಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲೂಕಾ ಅಧಿಕಾರಿಗಳ ಸಭೆ ನಡೆಸಿ ಮಾತನಾಡುತ್ತ ಜಿಲ್ಲೆಯಲ್ಲಿ ಬರಗಾಲದ ಛಾಯೆ ಆವರಿಸಿದ್ದು ಪ್ರಮಾಣಿಕವಾಗಿ ಕೆಲಸ ನಿರ್ವಹಿಸಿ. ನಮ್ಮಲ್ಲಿನ ಜನತೆ ಕೆಲಸ ಹುಡಿಕಿಕೊಂಡು ಬೆರೆ ಕಡೆಗೆ ಗೂಳೆ ಹೋಗುತ್ತಿದ್ದಾರೆ. ನಾವುಗಳು ಇದನ್ನು ತಡೆಗಟ್ಟಬೇಕಾದರೆ ಜನರಲ್ಲಿ ಜಾಗರತಿ ಮೂಡಿಸಿ ಸರಕಾರದ ನಿಯಮನುಸಾರದ ಪ್ರಕಾರ ಉದ್ಯೋಗ ಖಾತ್ರಿಯಡಿಯಲ್ಲಿ ಕೆಲಸ ನೀಡಬೇಕು. ಕೆಲಸ ನಿರ್ವಹಿಸಿ ಜನರಿಗೆ 15 ದಿನಗಳವಳಗಾಗಿ ಅವರ ಕೂಲಿ ಹಣವನ್ನು ಪಾವತಿಸಬೆಕು. ಕುಡಿಯುವ ನೀರಿನ ಸಮಸ್ಯ ತುಂಬಾ ಇರುವದು ನಮ್ಮ ಗಮನಕ್ಕೆ ಬಂದಿದೆ ಜಿಲ್ಲಾ ಪಂಚಾಯತವತಿಯಿಂದ ನಿಮ್ಮಗಳಿಗೆ ಸಂಪೂರ್ಣವಾದ ಸಹಾಕಾರ ನೀಡುತ್ತೆವೆ. ಸಮಸ್ಯ ಇದ್ದ ಕಡೆಗಳಲ್ಲಿ ಅಲ್ಲಿನ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ತಾಲುಕಿನ ತಹಶೀಲ್ದಾರ ಮತ್ತು ಜಿಲ್ಲಾ ಪಂಚಾಯತ ಕುಡಿಯುವ ನೀರು ನೈರ್ಮಲ್ಯ ಉಪ ವಿಭಾಗದ ಎಇಇ ಅಧಿಕಾರಿಗಳ ಜೋತೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ನೀರಿನ ಕೊರತೆಯನ್ನು ನಿವಾರಿಸಬೇಕು. ಯಾವುದೆ ಕಾರಣಕ್ಕೂ ಕೆಲಸಿದಿಂದ ನುಣಿಚಿಕೊಳ್ಳುವ ಕೆಲಸ ಮಾಡಿದರೆ ಅಂತವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುತ್ತೆವೆ. ಗೋಶಾಲೆಗಳಲ್ಲಿ ಮುಖ್ಯವಾಗಿ ಜಾನುವಾರುಗಳಿಗೆ ನೀರು ಮೇವಿನ ಕೊರತೆಯಾಗದಂತೆ ತಹಶೀಲ್ದಾರರು ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಈದೆ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ವೆಂಕಟರಾಜು ಮಾತನಾಡುತ್ತ ತಾಲುಕಿನ ಕೆಲವು ಗ್ರಾಮ ಪಂಚಾಯತಿಗಳು ಉದ್ಯೋಗ ಖಾತ್ರಿಯಲ್ಲಿ ಸರಿಯಾದ ರೀತಿಯಲ್ಲಿ ಕೆಲಸ ನಿವ್ಹಣೆ ಮಾಡಿದ್ದಾರೆ. ಇನ್ನು ಕೆಲವು ಗ್ರಾಮ ಪಂಚಾಯತ ಅಧಿಕಾರಿಗಳು ಉದ್ಯೋಗ ಖಾತ್ರಿಯಡಿಯಲ್ಲಿ ಜರಿಗೆ ಕೂಲಿ ಕೆಲಸ ನೀಡಲು ವಿಳಂಬ ಮಾಡಿದ್ದು ಸರಿಪಡಿಸಿಕೊಳ್ಳಲು ಅವಕಾಸ ನೀಡುತ್ತೆವೆ. ಮತ್ತೆ ಮತ್ತೆ ಪುರ್ನವರ್ತನೆÉಯಾದರೆ ಕಠಿನ ಕ್ರಮ ಜರಗಿಸಿ ಅಮಾನತ್ತು ಮಾಡಲಾಗುವದು ಎಂದು ತಕೀತು ಮಾಡಿದರು. ಇದೆ ವೇಳೆ ಜಿಲ್ಲಾ ಪಂಚಾಯತ ಸದಸ್ಯರಾದ ಕೆ. ಮಹೇಶ, ನೇಮಣ್ಣ ಮೇಲಸಕ್ರಿ ವಿಜಯ ನಾಯಕ ಅವರುಗಳು ಮಾತನಾಡಿ ತಮ್ಮ ಕ್ಷೇತ್ರದಲ್ಲಿನ ಸಮಸ್ಯಗಳ ಬಗ್ಗೆ ಶಿಗ್ರಹದಲ್ಲಿ ಪರಿಹರಿಸಿ. ಕುಡಿಯುವ ನೀರನ ಸಮಸ್ಯೆ ತುಂಬಾ ಇದ್ದಲ್ಲಿ ಟ್ಯಾಂಕರ್ ಮೂಲಕ ನೀರು ಸರಬುರಾಜು ಮಾಡಿ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳೊಣ ಎಂದು ತಿಳಿಸಿದರು.
[ ಬಾಕ್ಸ್] ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಕೆ. ಮಹೇಶ ª, ವಿಜಯ ನಾಯಕ, ನೇಮಣ್ಣ ಮೇಲಸಕ್ರಿ, ಶರಣಮ್ಮ ಜೈನರ್, ಅವರುಗಳು ಜಿಲ್ಲಾ ಪಂಚಾಯತ್ ಅದ್ಯಕ್ಷರಿಗೆ ಮತ್ತು ಸಿಓಗೆ ವಿವರಿಸುತ್ತ ನಮ್ಮ ತಾಲೂಕಿನ ಕೆಲವು ಗ್ರಾಮಗಳ ಜಮೀನಿನಲ್ಲಿ ಪೈಪ್ ಮೂಕಾಂತರ ಜಿಂದಾಲ ಕಂಪನಿಯವರು ಮೂಕಾಂತರ ನಿರು ತೆಗೆದುಕೋಂಡು ಹೊಗಿರುವದರಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಲು ಪತ್ರ ವ್ಯವಹಾರದ ಮೂಲಕ ಮನವಿ ಮಾಡಿ ಕೆಲವು ಗ್ರಾಮಗಳಿಗೆ ನೀರು ಪಡೆಯೋಣ ಎಂದು ತಿಳಿಸುತಿದ್ದಂತೆ. ಕುಡಿಯುವ ನೀರು ಹಾಗೂ ನೈರ್ಮಲ್ಯ ಉಪವಿಭಾಗದ ಎಇಇ ಅರವಿಂದ ಜೋಷಿ ವಿವರಣೆ ನೀಡುತ್ತ ಕೆವಲ ನಾಲ್ಕೂ ಗ್ರಾಮಗಳಿಗೆ ಮಾತ್ರ ನೀರು ಕೊಡಲು ಒಪ್ಪಂದ ವಿದೆ. ಪ್ರತಿಯೋಂದು ಗ್ರಾಮಕ್ಕೆ ನೀರು ಕೊಟ್ಟರೆ ಪ್ಯಾಕ್ಟರಿ ಬಂದಮಡುವ ಪರಸ್ಥಿತಿ ಬರುತ್ತದೆ ಎಂದು ಜಿಂದಾಲ ಪರವಾಗಿ ಮಾತನಾಡತ್ತಿದ್ದಂತೆ ಜಿಲ್ಲಾ ಪಂಚಾಯತ್ ಸದಸ್ಯರಾದ ನೇಮಣ್ಣ ಮೇಲಸಕ್ರಿ ಕೆ.ಮಹೇಶ ವಿಜಯ ನಾಯಕ ಅರವಿಂದ ಜೋಷಿಯನ್ನು ತರಾಟೆಗೆ ತೆಗೆದುಕೊಂಡು ನೀವು ಹೇಳಿದ ಕೆಲಸ ಮಾಡಿ ವಕಾಲತ ವಹಿಸುವದು ಸರಿಯಲ್ಲ ನಾವೇಲ್ಲರು ಸೇರಿ ಜಿಲ್ಲಾಢಳಿತ ಮೂಕಾಂತರ ಸರಕಾರಕ್ಕೆ ಪತ್ರ ಬರೆದು ಬೆಸಗೆಯಘಾಲದ ನೀರಿನ ಬವಣೆ ನಿಗಿಸೋಣ ಎಂದು ತರಾಟಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯರಾದ ಭೀಮಣ್ಣ ಅಗಸಿಮುಂದಿನ್, ಹನಮನಗೌಡ ಪಾಟೀಲ, ವಿಜಯಲಕ್ಷ್ಮೀ ಪಲ್ಲೇದ್ ಶರಣಮ್ಮ ಜಯನರ್, ತಾಲೂಕಾ ಪಂಚಾಯತ ಅಧ್ಯಕ್ಷೆ ಮಹಾಂತಮ್ಮ ಕೆ. ಪೂಜಾರ, ಉಪಾದ್ಯಕ್ಷೆ ಮಂಜುಳು ಪಾಟೀಲ, ಅಧಿಖಾರಿಗಳಾದ ನರೇಂದ್ರನಾಥ ತೋರವಿ, ರವಿ ಬಿಸರಳ್ಳಿ, ತಹಶೀಲ್ದಾರ ಗಂಗಪ್ಪ ಎಂ, ತಾಲೂಕಾ ಪಂಚಾಯತ ಕಾರ್ಯನಿವಾಹಕ ಅಧಿಕಾರಿ ಡಾ|| ಮೊಹನ್, ಅರವಿಂದ ಜೋಷಿ, ಜಿಲ್ಲಾ ಪಂಚಾಯತ್ ಎಇಇ ವಾಸಣ್ಣ, ಸಿಡಿಪಿಓ, ತಾಲುಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

loading...