ಟಿ.ಎಸ್.ಪಿ. ಯೋಜನೆಯಡಿ ಅಡಿಗೆ ಅನಿಲ ಸಿಲಿಂಡರ್ ವಿತರಣೆ

0
24
loading...

ಕನ್ನಡಮ್ಮ ಸುದ್ದಿ-ಧಾರವಾಡ : ಪರಿಶಿಷ್ಟ ಜಾತಿ-ಜನಾಂಗದ ಕುಟುಂಬಗಳ ವಿಕಾಸಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೊಡಮಾಡುವ ವಿವಿಧ ಯೋಜನೆಗಳ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಕೌಟುಂಬಿಕ ಪ್ರಗತಿಯನ್ನು ಹೊಂದಲು ಶ್ರಮಿಸಬೇಕೆಂದು ತಾಲೂಕು ಪಂಚಾಯತ ಸದಸ್ಯ ಸುಭಾಷ ದೇಸಾಯಿ ಹೇಳಿದರು.
ಅಮ್ಮಿನಬಾವಿ ಗ್ರಾಮದಲ್ಲಿ ತಾಲೂಕು ಪಂಚಾಯತಿಯ ಎಸ್.ಸಿ.ಪಿ. ಹಾಗೂ ಟಿ.ಎಸ್.ಪಿ. ಯೋಜನೆಯ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗದ ಕುಟುಂಬಗಳಿಗೆ ಅಡಿಗೆ ಅನಿಲ ಸಿಲಿಂಡರ್ ಹಾಗೂ ಅದಕ್ಕೆ ಪೂರಕವಾದ ಅಡಿಗೆ ಒಲೆಗಳನ್ನು ವಿತರಿಸಿ ಮಾತನಾಡಿದರು.
ಅರಣ್ಯ ನಾಶ ತಡೆಗಟ್ಟುವಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳನ್ನು ನಿತ್ಯದ ಬದುಕಿನ ಕೆಲಸಗಳಿಗೆ ಬಳಕೆ ಮಾಡಲು ಸಾರ್ವಜನಿಕರು ಆಸಕ್ತಿ ಹೊಂದಬೇಕು. ಹೊಗೆ ರಹಿತ ಗ್ರಾಮಗಳು ನಿರ್ಮಾಣವಾಗಬೇಕೆಂಬ ಕೇಂದ್ರÀ್ರ ಹಾಗೂ ರಾಜ್ಯ ಸರಕಾರಗಳ ಆಶಯಕ್ಕೆ ಜನರು ಸ್ಪಂದಿಸಬೇಕು. ಅಮ್ಮಿನಬಾವಿ ತಾಲೂಕು ಪಂಚಾಯತಿ ಕ್ಷೇತ್ರ ವ್ಯಾಪ್ತಿಯ 29 ಪರಿಶಿಷ್ಟ ಜಾತಿ ಮತ್ತು 29 ಪರಿಶಿಷ್ಟ ಜನಾಂಗದ ಕುಟುಂಬಗಳ ಫಲಾನುಭವಿಗಳಿಗೆ ಉಚಿತವಾಗಿ ಅಡಿಗೆ ಅನಿಲ ಸಿಲಿಂಡರ್ ಹಾಗೂ ಅದಕ್ಕೆ ಪೂರಕವಾದ ಅಡಿಗೆ ಒಲೆಗಳನ್ನು ವಿತರಿಸುತ್ತಿದೆ ಎಂದರು.
ಗ್ರಾಮ ಪಂಚಾಯತಿ ಸದಸ್ಯರುಗಳಾದ ಶಿವಪ್ಪ ರುದ್ರಾಪೂರ, ಪರಮೇಶ್ವರ ಹೂಲಿ, ಜಿನದತ್ತ ದೇಸಾಯಿ, ವಿಠ್ಠಲ ಭೋವಿ, ಗೌರವ್ವ ಮದಗುಣಿಕಿ, ಪ್ರಗತಿಪರ ರೈತ ಮಲ್ಲಪ್ಪ ಮೊರಬದ ಉಪಸ್ಥಿತರಿದ್ದರು. ವಿಜೇತ ದೇಸಾಯಿ ಸ್ವಾಗತಿಸಿದರು. ಶಿವಾನಂದ ತಡಕೋಡ ನಿರೂಪಿಸಿದರು. ಅಸ್ಲಂಖಾನ್ ಸವಣೂರ ವಂದಿಸಿದರು.

loading...