ಧಾರ್ಮಿಕ ಕೇಂದ್ರ ಮುಂಡರಗಿ ಅನ್ನದಾನೀಶ್ವರ ಮಠ

0
72
loading...

ಶಿಕ್ಷಣ,ಅನ್ನದಾನ,ಸಾಹಿತ್ಯಕ್ಕೆ,ಮೃಡಗಿರಿ ಚೇತನ ಕೊಡುಗೆ ಅಮೂಲ್ಯ
ಕನ್ನಡಮ್ಮ ಸುದ್ದಿ-ಮುಂಡರಗಿ : ಒಂದನ್ನೊಂದು ಕಾಲಕ್ಕೆ ಮೃಡಗಿರಿ ಎಂದು ಕರೆಯುತ್ತಿದ್ದು ಈಗೀನ ಮುಂಡರಗಿ ಬರಗಾಲಕ್ಕೆ ಬಹು ಹೆಸರು ವಾಸಿಯಾದ ನಾಡಾಗಿತ್ತು ಅಂತಹ ಸಂದರ್ಭದಲ್ಲಿ ಸುದೀರ್ಘ ಐತಿಹಾಸಿಕ ಪರಂಪರೆ ಹೊಂದಿದ ಮುಂಡರಗಿಯ ಜ.ಅನ್ನದಾನೀಶ್ವರ ಶಿಕ್ಷಣ ಜ್ಯೋತಿ ಬೆಳೆಗಿಸಿದ ಕೀರ್ತಿ ಶ್ರೀಮಠ ಪ್ರಸ್ತುತ ಪೂಜ್ಯರಾದ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳ ಸಂಸ್ಥಾನ ಮಠ ನಾಡಿನ ಸಾಮಾಜಿಕ ಹಾಗೂ ಧಾರ್ಮಿಕ ಕೇಂದ್ರವಾಗಿದೆ.
ಮುಂಡರಗಿ ಸೇರಿದಂತೆ ಎಲ್‍ಕೆಜಿಯಿಂದ ಪಧವಿ ಹಂತದವರೆಗೆ ಒಟ್ಟು ಸುಮಾರು 40 ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ.ಈ ಭಾಗದ ಗ್ರಾಮೀಣ ಮಕ್ಕಳಿಗೆ ವಿಧ್ಯಾದಾನ ಮಾಡಿದ ಕೀರ್ತಿ ಸಂಸ್ಥೆಗೆ ಸಲ್ಲುತ್ತದೆ. ಅಲ್ಲದೇ ಒಟ್ಟಾರೆ ಶಿಕ್ಷಣ ಸಂಸ್ಥೆಗಳಲ್ಲಿ 400ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುವ ಮೂಲಕ ನೂರಾರು ಕುಟುಂಬಗಳಿಗೆ ಜ.ಅ.ಮಠ ಆರ್ಥಿಕ ಭದ್ರತೆಯನ್ನು ಒದಗಿಸಿದೆ.
ಈಗೀನ 10ನೇ ಪೀಠಾಧಿಪತಿಗಳು:ಮುಂಡರಗಿ ಅನ್ನದಾನೀಶ್ವರ ಮಠದ ಏಳ್ಗೆಗಾಗಿ 1969ರ ಜ.31ರಲ್ಲಿ ಡಾ.ಜಗದ್ಗುರು ಅನ್ನದಾನೀಶ್ವರ ಶ್ರೀಗಳು 10ನೇ ಪೀಠಾಧಿಪತಿಗಳಾಗಿ ಅಧಿಕಾರ ವಹಿಸಿಕೊಂಡರು.ಶ್ರೀಮಠದ ಹಿಂದಿನ ಸಾಧನೆಗಳಿಗಿಂತ ಜಿವಂತಿಕೆ ತುಂಬುವುದರ ಜೊತಗೆ ಈ ನಾಡಿನ ಸಾಮಾಜಿಕ ಮತ್ತು ಆರ್ಥಿಕ ಬದುಕನ್ನು ಸುಧಾರಿಸುವಲ್ಲಿ ಶ್ರೀಗಳ ಕ್ರೀಯಾಶೀಲರಾಗಿದ್ದರು.ಎಲ್ಲ ವರ್ಗದ ಬಡ ವಿಧ್ಯಾರ್ಥಿಗಳ ಅನೂಕುಲಕ್ಕಾಗಿ ಪ್ರಸಾದ ನಿಲಯವನ್ನು ಪ್ರಾರಂಭಿಸಿ ಅವರ ಬದುಕಿಗೆ ಆಶ್ರಯ ನೀಡುವುದರ ಜೊತಗೆ ಶೈಕ್ಷಣಿಕ ಪ್ರಗತಿಗೆ ಕಾರಣರಾಗಿದ್ದಾರೆ.
ಅನ್ನದಾನ ಶ್ರೀಗಳ ನಿರಂತರ ಅಧ್ಯಯನ ಜೊತಗೆ 114 ಕೃತಿಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ.
ಅನ್ನದಾನೀಶ್ವರ ಗ್ರಂಥಮಾಲೆಯನ್ನು ಪ್ರಾರಂಬಿಸಿ ಅದರಿಂದ ಶ್ರೀಗಳ ಕೃತಿಗಳನ್ನು ಸೇರಿದಂತೆ 215ಕ್ಕೂ ಹೆಚ್ಚು ಕೃತಿಗಳು ಪ್ರಟಿಸಿದ್ದಾರೆ.ಶ್ರೀಗಳು ರಚಿಸಿದ ಸಾಹಿತ್ಯದ ಮೇಲೆ ಈಗಾಗಲೇ 4 ಪಿ.ಎಚ್.ಡಿ.2ಎಂಫಿಲ್ ಪದವಿ ಪಡೆದಿರುವದು ವಿಶೇಷವಾಗಿದೆ. ಚನ್ನಬಸವಣ್ಣ, ಅಕ್ಕಮಹಾದೇವಿ,ಸಿದ್ದರಾಮ ಬಸವಣ್ಣ,ದ್ಯಾಂಪೂರ ಚನ್ನಕವಿ,ಮುಂತಾದ ಶರಣರ 10 ವಿಚಾರ ಸಂಕೀರಣಗಳನ್ನು ನಡೆಸಿದ್ದಾರೆ.
1967 ಗದುಗಿನ ವಿರೇಶ್ವರ ಪುಣ್ಯಾಶ್ರಮದಿಂದ ಪುರಸ್ಕಾರ.
• 1998 ಧಾರವಾಡ ಮರುಘಾಮಠದಿಂದ’ಧರ್ಮ ಭಾಸ್ಕರ’ ಪ್ರಶಸ್ತಿ.
• ಹುಬ್ಬಳ್ಳಿ ಮೂರುಸಾವಿರ ಮಠದಿಂದ ‘ವೀರಶೈವ ದಾರ್ಶನಿಕ ಸಿದ್ಧಾಂತ’ ಕೃತಿಗೆ ಪುರಸ್ಕಾರ.
• ಶಿರಹಟ್ಟಿ,ಹಾಲಕೆರೆ,ಅನಂದಪುರಂ ಮೊದಲಾದ ಮಠಗಳಿಂದ ಗೌರವ, ಅನೇಕ ಗ್ರಾಮಗಳ ಭಕ್ತರಿಂದ ಗೌರವ ಸನ್ಮಾನಗಳು.
• ಕ.ವಿ.ವಿ. ಧಾರವಾಡ ದಿಂದ “ಗೌರವ ಡಿಲಿಟ್”

ಶ್ರೀಮಠದ ಸಾಮಾಜಿಕ ಕಳಕಳಿ:ವಿವಿಧ ಸಾಮಾಜಿಕ ಮತ್ತು ವಿದಾಯಕ ಕಾರ್ಯಕ್ರಮಗಳಿಗೆ ಶ್ರೀಮಠದ ಸುಮಾರು 130ಕ್ಕೂ ಹೆಚ್ಚು ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದಲ್ಲದೇ ಲಕ್ಷಾಂತರ ರೂಪಾಯಿಗಳನ್ನು ದೇಣಿಗೆ ರೂಪದಲ್ಲಿ ನೀಡಿದ್ದಾರೆ.ಅಲ್ಲದೇ ಸರಕಾರದ ವತಿಯಿಂದ ಶ್ರೀಮಠದ ಆವರಣದಲ್ಲಿ ಜಗದ್ಗುರು ಅನ್ನದಾನೀಶ್ವರ ಯಾತ್ರಿ ನಿವಾಸದ ಲೋಕಾರ್ಪಣೆ ಮಾಡಲಾಗಿದ್ದು ಬಹು ಅನುಕೂಲಕರವಾಗಲಿದ್ದು ಜನೋಪಯೋಗಿ ಕಾರ್ಯವನ್ನು ಶ್ರೀಮಠದಿಂದ ಸಾಮಾಜಿಕ ಕಾಳಜಿಯನ್ನು ಎತ್ತಿ ತೋರಿಸಿದೆ.
ಶ್ರೀ ಜಗದ್ಗುರು ಅನ್ನದಾನೀಶ್ವರ ಮಹಾಶಿವಯೋಗಿಗಳು ಸಾಹಿತ್ಯಕ್ಕೆ ನಾಡಿಗೆ ಹೆಸರಾದ ಪೂಜ್ಯರು ಬರದ ನಾಡಿನಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ತಾಲೂಕಿನಲ್ಲಿ ಶಿಕ್ಷಣದ ಹಸಿವು ನೀಗಿಸಿದ ಕೀರ್ತಿ ಸಲ್ಲುತ್ತದೆ. ಶ್ರೀಗಳ ಅಮೃತ ಮಹೋತ್ಸವ ಕಳೆದ ವರ್ಷವೇ ಆಚರಿಸಬೇಕೆಂದು ಭಕ್ತು ತೀರ್ಮಾನಿಸಿದ್ದರು.ಆದರೆ ಬರಗಾಲ ಶ್ರೀಗಳು ಮನಸ್ಸು ಮಾಡಲಿಲ್ಲ.ಇಂದು ಕೂಡಾ ಬರಗಾಲದಲ್ಲಿಯೂ ಅಮೃತ ಮಹೋತ್ಸವ ಆಚರಣೆ ಅದ್ದೂರಿಯಾಗಿ ಆಚರಣೆ ಮಾಡುತ್ತಿರುವದು ವಿಶೇಷ.
ನಾಡಿಗೆ ಪುಸ್ತಕದ ಜಗದ್ಗುರು ಮಾತನಾಡದೇ ಪುಸ್ತಕದ ರೂಪದಲ್ಲಿ ಮಾಡಿ ತೋರಿಸುವುದೇ ಶ್ರೀಗಳ ವಿಶೇಷ ಯಾಕೆಂದರೆ ಸದಾ ಲಿಂಗಪೂಜೆ ನಿಷ್ಠರಾಗಿರುವ ಪೂಜ್ಯರು ಅನೇಕ ಕೃತಿಗಳು ಬದುಕಿಗೆ ಅರ್ಥವನ್ನು ತಿಳಿಸುತ್ತದೆ.
ಪ್ರತಿ ವರ್ಷ ಜಾತ್ರಾ ಮಹೋತ್ಸವದಲ್ಲಿ ಕೃಷಿ ಸಮಾವೇಶ, ಸಾಮೂಹಿಕ ವಿವಾಹ, ಸರ್ವಧರ್ಮ ಸಮ್ಮೇಳನ, ಮಹಿಳಾ ಸಬಲೀಕರಣ, ಸೇರಿದಂತೆ ಅಮೃತ ಮಹೋತ್ಸವ ನಿಮಿತ್ಯ ಈ ವರ್ಷ 101 ಜಂಗಮ ಪಾದ ಪೂಜೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅದೂ ಕೂಡಾ ಯಶಸ್ವಿಯಾಗಿ ನಡೆಯಿತು.

loading...