ನಾಟಕಗಳು ಸಮಾನತೆಯ ಪರಿಕಲ್ಪನೆ ಹಾಗೂ ವೈಚಾರಿಕತೆ ಭಿತ್ತುತ್ತವೆ

0
39
loading...

ಕನ್ನಡಮ್ಮ ಸುದ್ದಿ-ಧಾರವಾಡ : ನಾಟಕ ಪ್ರಾಚೀನ ಕಲೆ. ಒಂದು ಕಾಲ ಘಟ್ಟದಲ್ಲಿ ಗ್ರಾಮೀಣ ಭಾಗದ ಜನರಿಗೆ ಮನರಂಜನೆ ನೀಡುತ್ತಾ ಬಂದಿರುವದು ವೃತ್ತಿ ರಂಗಭೂಮಿಯ ನಾಟಕಗಳು ಎಂದು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಡಾ. ಅರ್. ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಡಾ. ಧನವಂತ ಹಾಜವಗೋಳ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘ ವತಿಯಿಂದ ಡಾ.ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಾರ್ಗದರ್ಶನದಲ್ಲಿ ಶಿವಕುಮಾರ ಕಲಾ ಸಂಘ ಶಿವಸಂಚಾರ-2016-17 ಸಾಣೇಹಳ್ಳಿ ಅವರಿಂದ ಆಯೋಜಿಸಿದ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಕಾಲಮಾನದ ವೈಪರಿತ್ಯ ಹಾಗೂ ಸಿನೆಮಾದಿಂದ ವೃತ್ತಿ ಹಾಗೂ ಹವ್ಯಾಸಿ ರಂಗಭೂಮಿ ಕಲೆ ಕಡಿಮೆಯಾಗಿದ್ದನ್ನು ಕಾಣುತ್ತೇವೆ. `ಸಂಪತ್ತಿಗೆ ಸವಾಲ’ ನಾಟಕ ಚಲನಚಿತ್ರವಾಗಿ ಮೂಡಿ ಬಂದು 70 ರ ದಶಕದಲ್ಲಿ ಪ್ರಜಾಪ್ರಭುತ್ವದ ಸಮಾನತೆಯ ಪರಿಕಲ್ಪನೆ ಹಾಗೂ ವೈಚಾರಿಕತೆ ಭಿತ್ತುವಲ್ಲಿ ಯಶಸ್ವಿಯಾಗಿದೆ ಎಂದರು.
ಡಾ. ಡಿ. ಎಂ. ಹಿರೇಮಠ ಅಧ್ಯಕ್ಷತೆವಹಿಸಿ ಮಾತನಾಡಿ, ಸಂಘವು ಕಲೆ, ಕಲಾವಿದರನ್ನು ಪ್ರೋತ್ಸಾಹಿಸುವುದರ ಜೊತೆಗೆ ಸಮಾಜಕ್ಕೆ ಮೌಲಿಕವಾದ ಸಂದೇಶ ನೀಡುವ ಉತ್ತಮ ನಾಟಕಗಳನ್ನು ಪ್ರದರ್ಶಿಸುತ್ತಿದೆ ಎಂದರು. ವೇದಿಕೆಯಲ್ಲಿ ಶಿವಸಂಚಾರ ಕಲಾ ಸಂಘದ ಮುಖ್ಯಸ್ಥ ಬಿ.ಆರ್.ಮಂಜುನಾಥ ಉಪಸ್ಥಿತರಿದ್ದರು

loading...