ನೀರಿನ ಕೊರತೆ ಬಾರದಂತೆ ರೈತರು ಹನಿ ನೀರಾವರಿ ಪದ್ದತಿಗೆ ಒತ್ತು ನೀಡಿ: ಸಚಿವ ಭೈರೇಗೌಡ

0
42
loading...

ಕನ್ನಡಮ್ಮ ಸುದ್ದಿ-ಕುಷ್ಟಗಿ : ಒಣ ಬೇಸಾಯದ ರೈತರು ಬರಸ್ಥಿತಿಯಲ್ಲೂ ನೀರಿನ ಕೊರತೆ ಬಾರದಂತೆ ನೋಡಿಕೊಂಡು ಉತ್ತಮ ಫಸಲು ಪಡೆಯುವದಕ್ಕಾಗಿ ಹನಿ ನೀರಾವರಿ ಪದ್ಧತಿಗೆ ಒತ್ತು ನೀಡಿ ರಾಜ್ಯ ಸರಕಾರ ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಿಸಿಕೊಂಡು ಸ್ಪ್ರಿಂಕ್ಲರ್ ಅಳವಡಿಸಿಕೊಳ್ಳುವುದರ ಮೂಲಕ ರೈತರು ಸರಕಾರ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ರಾಜ್ಯ ಸರಕಾರದ ಕೃಷಿ ಸಚಿವ ಕೃಷ್ಣ ಭೈರೇಗೌಡ ಹೇಳಿದರು. ಕೃಷಿ ಸಚಿವ ಕೃಷ್ಣ ಭೈರೇಗೌಡ ಹೇಳಿದರು. ಕೃಷಿ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ತಾಲೂಕಿನ ಕಲಕೇರಿ ಪಾರ್ಮನಲ್ಲಿ ಗೋಶಾಲೆಯನ್ನು ವೀಕ್ಷಣೆ ಮಾಡಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಸಧ್ಯ ರಾಜ್ಯಾಧ್ಯಂತ ಬರ ಪರಿಸ್ಥಿತಿ ಗಂಭೀರವಾಗಿದ್ದು ರೈತರು ಹಾಗೂ ಪ್ರಮುಖವಾಗಿ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ತುಂಬಾನೆ ಆಗಿದೆ. ಇಂಥಹ ಪರಿಸ್ಥಿಯನ್ನು ರೈತರು ನಿಭಾಯಿಸಲು ಕೃಷಿಹೊಂಡ ನಿರ್ಮಿಸಿಕೊಂಡು ತಮ್ಮ ಬೆಳೆಗಳಿಗೆ ಎಷ್ಟು ಪ್ರಮಾಣ ನೀರು ಬೇಕೋ ಅಷ್ಟೇ ಪ್ರಮಾಣದ ನೀರನ್ನು ಬಳಕೆ ಮಾಡುವುದಲ್ಲದೇ ರೈತರ ಜಮೀನುಗಳಲ್ಲಿನ ಮಣ್ಣು ಸವಕಳಿ ಆಗದಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ. ಕೃಷಿ ಭಾಗ್ಯದ ಯೋಜನೆಯನ್ನು ಕೇಂದ್ರ ಬರ ಅಧ್ಯಯನ ತಂಡವೂ ಸಹ ಭೇಟಿ ನೀಡಿದಾಗ ಈ ಯೋಜನೆಯನ್ನ್ನು ಒಪ್ಪಿಕೊಂಡಿದ್ದು ಒಣ ಬೆಸಾಯಕ್ಕೆ ಇಂತಹ ಬರಗಾಲದಲ್ಲಿ ಕೆಲವು ಕಡೆ ಅನುಕೂಲವಾಗಿದೆ ಎಂದರು.
ಮುಂದುವರೆದು ಮಾತನಾಡುತ್ತಾ ಬರಗಾಲದಲ್ಲಿ ಕೃಷಿ ಹೊಂಡದ ನೀರಿನಿಂದ ಬೆಳೆ ತಗೆದುಕೊಳ್ಳಲು ಅವಕಾಶವಿದೆ. ಯಾರಿಗೆ ನೀರು ಇಲ್ಲ ಅವರು ಕೃಷಿ ಹೊಂಡವನ್ನು ಮಾಡಿಕೊಂಡು ಹನಿ ನೀರಾವರಿಯನ್ನು ಮಾಡಿಕೊಳ್ಳಬೇಕು. ಹೊಂಡದ ಮೂಲಕ ನೀರನ್ನು ಹಿಡಿದಿಟ್ಟುಕೊಂಡು ಮಳೆ ಆಧಾರಿತ ಪ್ರದೇಶಗಳಿಗೆ ಸ್ಪಂದನೆ ನೀಡುವಂತದ್ದು ಆಗಿದೆ. ನೀರು ಉಳಿಸುವಂತ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಹೆಚ್ಚಿನ ಫಸಲು ಪಡೆಯಬೇಕು. ಪ್ರಸಕ್ತ ಸಾಲಿನಲ್ಲಿ ಹನಿ ನೀರಾವರಿಗೆ ನಮ್ಮ ಇಲಾಖೆಯಿಂದ ಸುಮಾರು 320 ಕೋಟಿ ಸಹಾಯಧನವನ್ನು ಕೊಡುತ್ತಾ ಇದ್ದೇವೆ. ಸಾಮಾನ್ಯವಾಗಿ ಹನಿ ನೀರಾವರಿಗೆ ಪ್ರತಿ ವರ್ಷ ಸರಕಾರ ವ್ಯಯ ಮಾಡುವಂತ ಹಣ 100 ಅಥವಾ 120 ಕೋಟಿ ಮಾತ್ರ ಇರುತ್ತಿತ್ತು. ಈ ವರ್ಷ ಹೆಚ್ಚು ಹಣವನ್ನು ವ್ಯಯ ಮಾಡಿದ್ದೇವೆ. ಗೋಶಾಲೆಗಳಲ್ಲಿ ದನಕರುಗಳ ಮುಂದೆ ಮೇವು ಕೊರೆಯುವ ಯಂತ್ರವನ್ನು ತಂದು ದನಗಳಿಗೆ ಹಂಚಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ಭೀಕರ ಬರಗಾಲ ಉಂಟಾದ ಪರಿಣಾಮ ಪ್ರತಿ ಹೋಬಳಿ ಮಟ್ಟಕ್ಕೆ ತುರ್ತುಗತಿಯಲ್ಲಿ ಗೋಶಾಲೆಗಳನ್ನು ತೆರೆಯುವಂತೆ ಅಧಿಕಾರಿಗಳಿಗೆ ಆದೇಶಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಅಮರೇಗೌಡ ಪಾಟೀಲ ಭಯ್ಯಾಪೂರ, ತಾಲೂಕು ದಂಡಾಧಿಕಾರಿ ಎಂ.ಗಂಗಪ್ಪ, ತಾಲೂಕು ಕಾರ್ಯನಿರ್ವಕ ಅಧಿಕಾರಿ ಡಾ.ಮೋಹನ, ತಾಲೂಕು ಕೃಷಿ ನಿರ್ದೇಶಕ ಅಧಿಕಾರಿ ಈರಣ್ಣ ಕಮತರ, ಪಿಎಸ್.ಐ ವಿಶ್ವನಾಥ ಹಿರೇಗೌಡ್ರ, ಜಿಲ್ಲಾ ಪಂಚಾಯತ ಸದಸ್ಯರಾದ ನೇಮಣ್ಣ ಮೇಲಸಕ್ರಿ, ವಿಜಯ ನಾಯಕ, ತಾಲೂಕು ಪಶು ವೈಧಿಕಾರಿಗಳು, ಜಿಲ್ಲಾ ಕೃಷಿ ಇಲಾಖೆ ಅಧಿಕಾರಿಗಳು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

loading...