ಫೆ.19ರಂದು ಶಿವಾಜಿ ಜಯಂತಿ

0
85
loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ : ಇದೇ ಪೆ.19ರ ಭಾನುವಾರ ಶಿವಾಜಿ ಜಯಂತಿಯನ್ನುತಾಲೂಕು ಆಡಳಿತವತಿಯಿಂದ ಆಚರಿಸಲು ತೀರ್ಮಾನಿಸಲಾಗಿದೆ. ಆ ದಿನ ಬೆಳಿಗ್ಗೆ 9.30ಕ್ಕೆ ನಗರದ ಮರಾಠಗಲ್ಲಿಯ ಶಿವಾಜಿ ಚೌಕದಿಂದ ಶಿವಾಜಿಯವರ ಭಾವಚಿತ್ರವನ್ನು ಮೆರವಣಿಗೆ ಮೂಲಕ ಮಿನಿವಿಧಾನ ಸೌಧದಲ್ಲಿ ತರಲಾಗುವುದು. ನಂತರ ಮಿನಿವಿಧಾನ ಸೌಧದಲ್ಲಿ ಸಾಂಸ್ಕøತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸಂಪನ್ಮೂಲ ವ್ಯಕ್ತಿಗಳಾದ ಡಾ|| ಮಲ್ಲಿಕಾರ್ಜುನ ಬಾಳಿಕಾಯಿ ಅವರು ಶಿವಾಜಿಯವರ ಜೀವನಚರಿತ್ರೆ ಹಾಗೂ ಸಾಧನೆಕುರಿತಂತೆ ಉಪನ್ಯಾಸ ನೀಡಲಿದ್ದಾರೆ.ಇದೇ ಸಂದರ್ಭದಲ್ಲಿ ಮರಾಠಾ ಸಮಾಜದಲ್ಲಿಅತೀ ಹೆಚ್ಚು ಅಂಕ ಪಡೆದುಕೊಂಡಂತಹ 05 ಜನ ವಿದ್ಯಾರ್ಥಿಗಳನ್ನು ಗುರುತಿಸಿಅವರಿಗೆತಾಲೂಕಾ ಆಡಳಿತದಿಂದ ಸನ್ಮಾನಿಸಲಾಗುವುದುಎಂದು ಹುಬ್ಬಳ್ಳಿ ತಹಶೀಲದಾರರು ಪ್ರಕಟಣೆಯಲ್ಲಿ ತಳಿಸಿದ್ದಾರೆ.ಅಲ್ಲದೆ ಮಿನಿ ವಿಧಾನ ಸೌಧದಲ್ಲಿನಕಾರ್ಯನಿರ್ವಹಿಸುತ್ತಿರುವಎಲ್ಲಾತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಾಗುವಂತೆ ಈ ಮೂಲಕ ಅವರುಕೋರಿದ್ದಾರೆ.

loading...