ಫೆ.20 ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ

0
79
loading...

ಕನ್ನಡಮ್ಮ ಸುದ್ದಿ-ರಾಣೇಬೆನ್ನೂರ : ಛತ್ರಪತಿ ಶಿವಾಜಿ ಮಹಾರಾಜರವರ 390ನೇ ಜಯಂತ್ಯುತ್ಸವವನ್ನು ಸ್ಥಳೀಯ ಮೇಡ್ಲೇರಿ ರಸ್ತೆಯಲ್ಲಿರುವ ಆದಿಶಕ್ತಿ ಸಭಾಭವನದಲ್ಲಿ ಫೆ.20 ರಂದು ಮುಂಜಾನೆ.10.30ಕ್ಕೆ ಅತ್ಯಂತ ವೈಭವದಿಂದ ಆಚರಿಸಲು ನಿರ್ಧರಿಸಲಾಯಿತು. ತಾಲೂಕ ಮರಾಠಾ ಸಮಾಜ ಸಮಿತಿಯ ವತಿಯಿಂದ ಜಯಂತ್ಯುತ್ಸವ ಕುರಿತು ನಗರದಲ್ಲಿ ಏರ್ಪಡಿಸಲಾದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಫೆ.19 ರಂದು ನಗರದ ದೊಡ್ಡಪೇಟೆಯ ತುಕ್ಕಭವಾನಿ ದೇವಸ್ಥಾನದಲ್ಲಿ ಶಿವಾಜಿ ಮಹರಾಜರವರ ತೊಟ್ಟಿಲೋತ್ಸವ ಕಾರ್ಯಕ್ರಮವನ್ನು ನೆರವೇರಿಸಲು ನಿರ್ಧರಿಸಲಾಯಿತು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕ ಕ್ಷತ್ರಿಯ ಮರಾಠ ಸಮಾಜದವತಿಯಿಂದ ಈ ಆಚರಣೆ ಮಾಡಲು ಸಭೆ ನಿರ್ಧರಿಸಿತು.
ತಾಲೂಕಿನ ವಿವಿಧ ಭಾಗಗಳಲ್ಲಿ ಸಮಾಜ ಭಾಂಧವರು ಫೆ.19 ರಂದು ಛತ್ರಪತಿ ಶಿವಾಜಿ ಮಹಾರಾಜರವರ ಜಯಂತ್ಯುತ್ಸವವನ್ನು ಆಚರಿಸಬೇಕು ಹಾಗೂ ಫೆ.20 ರಂದು ನಗರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಅಭಿಮಾನಿಗಳು ಭಾಗವಹಿಸಿ ಯಶಸ್ವಿಗೊಳಿಸಲು ಸಭೆ ನಿರ್ಧರಿಸಿತು.
ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಕಾರ್ಯಕ್ರಮ ಉದ್ಘಾಟನೆಗೆ ಆಗಮಿಸುವರು. ಜೊತೆಗೆ ತಾಪಂ, ನಗರಸಭೆ ಸೇರಿದಂತೆ ಮತ್ತಿತರ ಚುನಾಯಿತ ಸದಸ್ಯರು ತಾಲೂಕ ಮಟ್ಟದ ಹಿರಿಯ ಅಧಿಕಾರಿಗಳು ಕಾರ್ಯಕ್ರಮಕ್ಕೆ ಆಗಮಿಸುವರು.
ತಾಲೂಕ ಅಧ್ಯಕ್ಷ ನಾಗರಾಜ ಮಾಕನೂರ. ನಗರಸಭೆ ಸದಸ್ಯರಾದ ರತ್ನಾ ಪುನೀತ, ರವಿ ಮಾಂಡ್ರೆ, ತಾಪಂ ಸದಸ್ಯ ರಾಜು ಸೂರ್ವೆ, ನಾಗರಾಜ ಪವಾರ, ರಮೇಶ ಮರಾಠೆ, ಪರಶುರಾಮ ಕಾಳೇರ, ಶಿವಾನಂದ ಆರೇರ ಸೇರಿದಂತೆ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

loading...