ಬಟ್ಟೂರಿನ ಮೃತ ಯುವಕನ ಕುಟುಂಬದವರ ಮನೆಗೆ ಸಚಿವ ಎಚ್.ಕೆ.ಪಾಟೀಲ ಭೇಟಿ

0
26
loading...

ಕನ್ನಡಮ್ಮ ಸುದ್ದಿ-ಶಿರಹಟ್ಟಿ : ನನ್ನ ಮಗನ ಪೋಲೀಸ್ರ ಹೊಡದ ಕೊಂದಾರ್ರಿ, ನಮಗ ಆಧಾರ ಇಲ್ಲದಂಗ ಮಾಡ್ಯಾರ ನಾವು ಎಲ್ಲಾರು ಸೇರಿ ಪೋಲೀಸ್‍ಠಾಣೆಗೆ ಬಂದ ಕುತಗೋತೇವಿ ನಮಗೂ ಶಿಕ್ಷಾ ಕೊಡಿಸಿಬಿಡ್ರಿ ಎಂದು ಬಟ್ಟೂರು ಗ್ರಾಮದ ಮೃತ ಯುವಕ ಶಿವಪ್ಪ ಗೋಣಿಯ ತಂದೆ ದುಂಡಪ್ಪ ಗೋಣಿ ಗ್ರಾಮಿಣಾಭಿವೃದ್ದಿ ಮತ್ತು ಪಂಚಾಯತರಾಜ್ಯ ಸಚಿವ ಎಚ್.ಕೆ.ಪಾಟೀಲ ಅವರ ಮುಂದೆ ಗೋಳು ತೊಡಿಕೊಂಡನು.
ಗುರುವಾರ ತಾಲೂಕಿನ ಬಟ್ಟೂರು ಗ್ರಾಮದ ಮೃತ ಯುವಕನ ಮನೆಗೆ ಬೇಟಿ ನೀಡಿದ ಸಚಿವರ ಮುಂದೆ ದುಂಡಪ್ಪ ನಡೆದ ಘಟನೆಯ ಕುರಿತು ಪೂರ್ತಿಯಾಗಿ ಹೇಳಿ ನನ್ನ ಕುಟುಂಬಕ್ಕೆ ನ್ಯಾಯಾ ಕೊಡಸಿ, ನನ್ನ ಮಗನ ಸಾವಿಗೆ ಕಾರಣರಾದವರ ಮೇಲೆ ಶಿಕ್ಷೆ ಕೊಡಿಸಿ ಎಂದು ತಾಯಿ ಕಣ್ಣೀರಿಡುತ್ತಾ ಸಚಿವರಿಗೆ ವಿನಂತಿಸಿಕೊಂಡಳು. ಅಲ್ಲದೆ ಗ್ರಾಮದಲ್ಲಿ ಅಮಾಯಕರನ್ನು ಬಂಧಿಸದಂತೆ ಆದೇಶ ನೀಡಿ ಗ್ರಾಮಸ್ಥರ ಭಯ ನಿವಾರಿಸಿ ಎಂದು ಸಹ ಸಚಿವರಿಗೆ ಮನವಿ ಮಾಡಿದರು.
ಸಚಿವರು ಕುಟುಂಬವರ್ಗದವರಿಗೆ ಸಾಂತ್ವನ ಹೇಳಿದರು ಯಾವುದಕ್ಕೂ ಉದ್ವೇಗಕ್ಕೆ ಒಳಗಾಗಬೇಡಿ, ಮಗನ ಸಾವಿನ ದುಃಖ ಅಪಾರವಾದುದು, ಸಿಐಡಿ ತನಿಖೆ ನಡೆದಿದೆ, ತಪ್ಪಿತಸ್ಥರು ಯಾರೇ ಆಗಿದ್ದರೂ ಸಹ ಅವರಿಗೆ ಶಿಕ್ಷೆ ಆಗುತ್ತದೆ ಕುಟುಂಬವರ್ಗದವರ ದುಃಖ ಸಹಿಸಿಕೊಳ್ಳುವಂತೆ ಸಲಹೆ ನೀಡಿದರು. ಮತ್ತು ಪೊಲೀಸ್‍ರ ಕ್ರಮ ಕುರಿತು ಹಿರಿಯ ಅಧಿಕಾರಿಗಳ ಜೊತೆ Z್ಪರ್ಚಿಸುವದಾಗಿ ಹೇಳಿದರು.

ಈ ಸಂದರ್ಭದಲ್ಲಿ ಜಲಸಂಪನ್ಮೂಲ ಇಲಾಖೆ ಸಂಸದೀಯ ಕಾರ್ಯದರ್ಶಿ ಶಾಸಕ ರಾಮಕೃಷ್ಣ ದೊಡ್ಡಮನಿ, ಜಿಪಂ ಸದಸ್ಯ ಎಸ್.ಪಿ.ಬಳಿಗಾರ, ಪುರಸಭೆ ಅಧ್ಯಕ್ಷ ವ್ಹಿ.ಜಿ.ಪಡಗೇರಿ, ತಹಶೀಲದಾರ ಎ.ಡಿ.ಅಮರಾವದಗಿ ಹಾಗೂ ಅಧಿಕಾರಿಗಳು ಮುಖಂಡರು ಹಾಜರಿದ್ದರು.

loading...