ಮಕ್ಕಳು ಪರೀಕ್ಷೆಯಿಂದ ಭಯ ಪಡುವ ಅಗತ್ಯವಿಲ್ಲ: ತೆಮ್ಮಿನಾಳ

0
28
loading...

ಕನ್ನಡಮ್ಮ ಸುದ್ದಿ-ಕುಷ್ಟಗಿ : ವರ್ಷಗಟ್ಟಲೆ ಓದಿ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಿಂದ ವಿಧ್ಯಾರ್ಥಿಗಳು ಭಯ ಪಡುವ ಅಗತ್ಯವಿಲ್ಲ. ವಿದ್ಯಾರ್ಥಿಗಳು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಮುಂದಿನ ಹೆಜ್ಜೆಗಾಗಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದರಿಸಬೇಕಾಗುತ್ತದೆ ಹೆಚ್ಚಿನ ಅಂಕ ಗಳಿಸಲು ನಿವುಗಳು ಮುಂದಾಗಬೇಕು ಎಂದು ಚಿಕ್ಕ ಮುಕರ್ತಿನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪದ್ಯಾಯ ಎಸ್.ಎಸ್. ತಮ್ಮೀನಾಳ ಹೇಳಿದರು.
ಪಟ್ಟಣದ ಶ್ರೀ ಬುತ್ತಿಬಸವೃಶ್ವರ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಠಾಚಾರ ನಿರ್ಮೂಲನಾ ಸಮಿತಿ (ರಿ) ಕುಷ್ಟಗಿ ಇವರ ಸಯುಂಕ್ತ ಆಶ್ರಯದಲ್ಲಿ ನಡೆದ ಪಿ.ಯು.ಸಿ ಮತ್ತು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಒಂದು ದಿನದ ವಾರ್ಷಿಕ ಪರೀಕ್ಷಾ ಉಚಿತ ಕಾರ್ಯಗಾರ ಕಾರ್ಯಕ್ರಮದ ಸಂಪಮ್ಮೂಲ ವ್ಯಕ್ತಗಳಾಗಿ ಮಾತನಾಡಿದ ಅವರು ಶಾಲೆಯಲ್ಲಿ ಶಿಕ್ಷಕರು ದಿನಂ ಪ್ರತಿ ಮಕ್ಕಳ ಹಾಜರಾತಿಯಿಂದ ಹಿಡಿದು ಮಕ್ಕಳ ಬಹುಶವನ್ನು ನೋಡಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
ಮಕ್ಕಳ ತಂದೆ ತಾಯಿಗಳು ಕೂಡ ನಮ್ಮ ಮಕ್ಕಳ ಬಹುಶ ಒಳ್ಳೆಯದಾಗಲೆಂದು ಸಾಕಷ್ಟು ಹಣವನ್ನು ಖರ್ಚು ಮಾಡಿ ಶಾಲೆಗಳಿಗೆ ಕಳುಸುತ್ತಾರೆ. ಆದರೆ ನೀವುಗಳು ಪರೀಕ್ಷೆಯಲ್ಲಿ ಸರಿಯಾದ ರೀತಿಯಿಂದ ಓದಿ ಸರಳವಾಗಿ ಪರೀಕ್ಷೆಯನ್ನು ಬರೆದು ಮುಂದಿನ ಹೆಚ್ಚಿನ ಅಭ್ಯಾಸಕ್ಕಾಗಿ ಹೆಚ್ಚಿನ ಅಂಕವನ್ನು ತಗೆಯಬೇಕು.
ವಿಧ್ಯಾರ್ಥಿಗಳು ಓದಲಾರದೇ ಪರೀಕ್ಷೆಯನ್ನು ಬರೆಯಲು ಸಾಧ್ಯವಿಲ್ಲ ಮನೆಯಲ್ಲಿ ಪ್ರತಿ ದಿನ 6 ರಿಂದ 8 ತಾಸು ಪಾಠ ಶಾಲೆಯ ಪುಸ್ತಕವನ್ನು ಹಿಡಿದು ಓದಲು ಮುಂದಾಗಬೇಕು ಶಾಲೆಯಲ್ಲಿನ ಶಿಕ್ಷಕರು ಹೇಳಿದ ಪಾಠವನ್ನು ಕೇಳಿ ಅರ್ಥವನ್ನು ಮಾಡಿಕೊಳ್ಳುವ ಅಗತ್ಯ ಪ್ರತಿ ಒಬ್ಬ ವಿಧ್ಯಾರ್ಥಿ ವಿಧ್ಯಾರ್ಥಿನಿಯರು ಅರ್ಥ ಮಾಡಿಕೊಂಡು ಓದಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ 6 ಪ್ರೌಡ ಶಾಲೆ, 5 ಪಿ.ಯು.ಸಿ ಕಾಲೇಜ ವಿಧ್ಯಾರ್ಥಿ ವಿಧ್ಯಾರ್ಥಿನಿಯರು ಉಚಿತ ಕಾರ್ಯಗಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಠಾಚಾರ ನಿರ್ಮೂಲನಾ ಸಮಿತಿ ಅಧ್ಯಕ್ಷ ಹುಲಗಪ್ಪ ಚೂರಿ, ಜಮಗದ್ನಿ ಗುರಿಕಾರ, ಶರಣು ಜೋಗಿನ, ಶಿವು ಈಳಿಗೇರ, ಅಬ್ದುಲ್, ಜಮದಗ್ನಿ ಸೇರಿದಂತೆ ವಿಧ್ಯಾರ್ಥಿಗಳ ಶಾಲಾ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.

loading...