ಮಕ್ಕಳ ಜ್ಞಾನವೃದ್ದಿಗೆ ಪೂರಕ ಕಾರ್ಯಕ್ರಮ ಆಯೋಜಿಸಬೇಕು

0
19
loading...

ಕನ್ನಡಮ್ಮ ಸುದ್ದಿ-ಧಾರವಾಡ : ನಾವು ವೈಜ್ಞಾನಿಕವಾಗಿ ಬಹಳ ಮುಂದುವರೆದಿದ್ದು ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಅಭಿರುಚಿ ಮೂಡಿಸುವುದು ತುಂಬಾ ಅವಶ್ಯವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ ಕರೀಕಟ್ಟಿ ಹೇಳಿದರು.
ಮುಮ್ಮಿಗಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪ ಆಶ್ರಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಆಯೋಜಿಸಿದ ‘ನಿತ್ಯ ಜೀವನದಲ್ಲಿ ವಿಜ್ಞಾನದ ತಿಳುವಳಿಕೆಯೊಂದಿಗೆ ಮಕ್ಕಳಿಗೆ ವಿಜ್ಞಾನ ಕ್ವಿಜ್’ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಘದ ಶಿಕ್ಷಣ ಮಂಟಪವು ಗ್ರಾಮೀಣ ಮಟ್ಟದಲ್ಲಿ ವಿಜ್ಞಾನ ವಿಷಯ ಕುರಿತು ಪ್ರಶ್ನಾ ಕಾರ್ಯಕ್ರಮ ಆಯೋಜಿಸಿ ಜ್ಞಾನ ವಿಜ್ಞಾನದ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ತಾಲೂಕ ಪಂಚಾಯತ ಉಪಾಧ್ಯಕ್ಷ ಮುತ್ತಪ್ಪ ಭೀ ನಾಯ್ಕರ ಮಾತನಾಡಿ, ಮಕ್ಕಳಿಗೆ ವಿಜ್ಞಾನದ ಬಗ್ಗೆ ಅರಿವು ಮೂಡಿಸುವುದು ಅವಶ್ಯಕವಾಗಿವೆ. ಮಕ್ಕಳ ಜ್ಞಾನವೃದ್ದಿಗೆ ಪೂರಕವಾದ ಕಾರ್ಯಕ್ರಮ ಆಯೋಜಿಸಿ ಎಲ್ಲಾ ಮಕ್ಕಳಿಗೂ ತಿಳುವಳಿಕೆ ನೀಡುವುದು ಉತ್ತಮ ಕಾರ್ಯ ಎಂದರು.
ಶಿಕ್ಷಣ ಮಂಟಪದ ಸಂಚಾಲಕ ಗುರು ತಿಗಡಿ ಮಾತನಾಡಿ, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು ಅವಶ್ಯ ದಿನನಿತ್ಯ ಜೀವನದಲ್ಲಿ ವಿಜ್ಞಾನದ ಉಪಯುಕ್ತತೆಯನ್ನು ನಾವೆಲ್ಲರೂ ಅರಿಯಬೇಕು. ಇಂಥ ಕಾರ್ಯಗಳನ್ನು ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪದಿಂದ ಮಾಡುತ್ತಿದೇವೆ ಇದರ ಸದುಪಯೋಗ ಪಡಿಸಿಕೊಳ್ಳಲು ಶಾಲೆಗಳು ಸಹಕಾರ ನೀಡಬೇಕು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಶ್ರೀಮತಿ ಆರ್. ಡಿ. ಅಮಲಝರಿ, ಶಿವರುದ್ರಗೌಡ ಪಾಟೀಲ ಉಪಸ್ಥಿತರಿದ್ದರು. ಚಂದ್ರು ತಿಗಡಿ ಸ್ವಾಗತಿಸಿದರು. ಎಮ್. ಕೆ.ಕಟ್ಟಿಮನಿ ನಿರೂಪಿಸಿದರು. ಶ್ರೀಮತಿ ಗೀತಾ ಬೆಟಗೇರಿ ವಂದಿಸಿದರು.

loading...