ಮನುಷ್ಯನ ಬದುಕಿನ ನೆಮ್ಮದಿಗೆ ಆಧ್ಯಾತ್ಮ ಅತಿ ಅವಶ್ಯ: ಅಮರೇಶ ಪಿಳ್ಳಿ

0
52
loading...

ಕನ್ನಡಮ್ಮ ಸುದ್ದಿ-ಶಿರಹಟ್ಟಿ : ದುಗುಡ, ಧಾವಂತದ ಈ ಸಮಾಜದಲ್ಲಿ ಅಲ್ಪ ಸ್ವಲ್ಪ ನೆಮ್ಮದಿಗೆ ಆಧ್ಯಾತ್ಮ ಅತಿ ಅವಶ್ಯವಾಗಿದೆ. ಆಧ್ಯಾತ್ಮಚಿಂತನೆಯಲ್ಲಿ ತೊಡಗಿದರೆ ಮನಸ್ಸು ಸ್ವಲ್ಪಮಟ್ಟಿಗೆ ಶಾಂತಿಯನ್ನು ಪಡೆಯುವಂತಾಗುತ್ತದೆ ಎಂದು ಸರಕಾರಿ ಪ.ಪೂ.ಮಹಾವಿದ್ಯಾಲಯದ ಪ್ರೊ.ಅಮರೇಶ ಪಿಳ್ಳಿ ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಲಕ್ಷ್ಮೇಶ್ವರ ಪಟ್ಟಣದ ಸೃಜನ ಬಳಗದ ವತಿಯಿಂದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಇತ್ತೀಚಿಗೆ “ಆಧ್ಯಾತ್ಮ ಅಂದು-ಇಂದು” ಕುರಿತ ಚಿಂತನ ಗೋಷ್ಠಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
ಆಧ್ಯಾತ್ಮ ಮನುಷ್ಯನ್ನು ಸನ್ಮಾರ್ಗದತ್ತ ಸಾಗಿಸುವ ಅಂತಃಶಕ್ತಿಯಾಗಿದೆ. ಬದುಕಿನ ನೆಮ್ಮದಿ, ಸಂತೋಷಕ್ಕಾಗಿ ಆಧ್ಯಾತ್ಮದ ಅನುಭೂತಿ ಅವಶ್ಯವಾಗಿದೆ. ಇಂದಿನ ತಾಂತ್ರಿಕ ಬದುಕಿನಲ್ಲೂ ಪ್ರತಿಯೊಬ್ಬರೂ ನಿತ್ಯ ಬದುಕಿನಲ್ಲಿ ಆಧ್ಯಾತ್ಮ ಚಿಂತನೆ, ಧರ್ಮ ಮತ್ತು ಸಮಾಜಿಕ ಕಾರ್ಯಕ್ಕಾಗಿ ಸ್ವಲ್ಪ ಸಮಯವನ್ನಾದರೂ ಮೀಸಲಿರಿಸಬೇಕು ಎಂದು ಹೇಳಿದರು. ಆಧ್ಯಾತ್ಮ ಹಿಂದೆ, ಇಂದು ಹಾಗೂ ಮುಂದೆಯೂ ಹಾಗೆ ಇರುತ್ತದೆ ಆದರೆ ನಮ್ಮ ಸಾಮಾಜಿಕ ಚಿಂತನೆಗಳು ಮಾತ್ರ ಬದಲಾಗುತ್ತಿವೆ. ನೆಮ್ಮದಿಗೆ ಉತ್ತಮ ಮಾರ್ಗವೆಂದರೆ ಆಧ್ಯಾತ್ಮ ಮಾತ್ರ ಎಂದು ಹೇಳಿದರು.
ಬಿ.ಎಸ್. ಹರ್ಲಾಪುರ ಅಧ್ಯಕ್ಷತೆ ವಹಿಸಿದ್ದರು. ಎನ್.ಆರ್.ಸಾತಪುತೆ, ಎ.ಎಂ.ಮಠದ ಮಾತನಾಡಿದರು. ಸೃಜನ ಬಳಗದ ಜಿ.ಎಂ. ಪೂಜಾರ, ಆರ್.ಟಿ. ನೆಗಳೂರ, ಎಸ್.ಕೆ. ಅಮ್ಮಿನಬಾವಿ, ಎಸ್.ವಿ. ಕನೋಜ್, ಗಿರೀಶ ಸಜ್ಜನ, ವಿ.ಎಂ. ಹೂಗಾರ, ಎಸ್.ಬಿ. ಉಪ್ಪಿನ. ಎನ್.ಎನ್.ಕಳಸಾಪುರ ಹಾಜರಿದ್ದರು. ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕ ಹೆಚ್.ಎಂ. ಸೊಪ್ಪಿನ ಅವರನ್ನು ಸನ್ಮಾನಿಸಲಾಯಿತು.

loading...