ಲಕ್ಷ್ಮೇಶ್ವರದ ಪೋಲೀಸ್‍ಠಾಣೆಗೆ ಬೆಂಕಿ ಹಚ್ಚಿದ ಹಿನ್ನಲೆಯಲ್ಲಿ ಸಚಿವ ಎಚ್.ಕೆ.ಪಾಟೀಲ ಠಾಣೆಗೆ ಭೇಟಿ

0
29
loading...

ಕನ್ನಡಮ್ಮ ಸುದ್ದಿ-ಶಿರಹಟ್ಟಿ : ರವಿವಾರ ಬಟ್ಟೂರು ಗ್ರಾಮದ ಯುವಕನೋರ್ವ ಮೃತಪಟ್ಟ ಹಿನ್ನಲೆಯಲ್ಲಿ ಪೋಲೀಸ್ ದೌರ್ಜನ್ಯ ಕಾರಣ ಎಂದು ಆರೋಪಿಸಿ ನೂರಾರು ಜನರು ಪೋಲೀಸ್ ಠಾಣೆಗೆ ನುಗ್ಗಿ ವಾಹನಗಳಿಗೆ ಮತ್ತು ಠಾಣೆಗೆ ಬೆಂಕಿ ಹಚ್ಚಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಮತ್ತು ದಾSಲೆ ಪತ್ರಗಳನ್ನು ಸುಟ್ಟು ಹಾಕಿರುವ ಘಟನೆ ನಡೆದ ಹಿನ್ನಲೆಯಲ್ಲಿ ಗುರುವಾರ ಗ್ರಾಮಿಣಾಭಿವೃದ್ದಿ ಮತ್ತು ಪಂಚಾಯತ ರಾಜ್ಯ ಸಚಿವ ಎಚ್.ಕೆ.ಪಾಟೀಲ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಗುರುವಾರ ಮದ್ಯಾಹ್ನ ಠಾಣೆಗೆ ಆಗಮಿಸಿದ ಸಚಿವರು ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಮತ್ತು ಠಾಣೆ ಹಾಗೂ ಸುತ್ತಮುತ್ತ ಬೆಂಕಿಗೆ ಆಹುತಿಯಾಗಿರುವ ಭಾಗಗಗಳನ್ನು ವೀಕ್ಷಿಸಿದರು. ಆಗಿರುವ ಅಪಾರ ಪ್ರಮಾಣದ ಹಾನಿಗೆ ವಿಷಾದ ವ್ಯಕ್ತಪಡಿಸಿದ ಸಚಿವರು, ಠಾಣೆಯ ದುರಸ್ಥಿ ಕಾರ್ಯವನ್ನು ಸಹ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಶಾಸಕ ರಾಮಕೃಷ್ಣ ದೊಡ್ಡಮನಿ, ತಹಸೀಲ್ದಾರ ಎ.ಡಿ.ಅಮರಾವದಗಿ, ಎಸ್.ಪಿ. ಸಂತೋಷಬಾಬು, ಡಿವಾಯ್‍ಎಸ್‍ಪಿ ವಿಜಯಕುಮಾರ ವ್ಹಿ.ಟಿ., ಗುರು ಮತ್ತೂರ, ಸಿಪಿಐ ಗಳಾದ ಶ್ರೀನಿವಾಸ ಮೇಟಿ, ಜುಟ್ಟಲ್ ಪ್ರಭಾರಿ ಠಾಣಾಧಿಕಾರಿ ಬಸವರಾಜ ಬಿಸಲಕೊಪ್ಪ, ಎಸ್.ಪಿ.ಬಳಿಗಾರ, ವ್ಹಿ.ಜಿ.ಪಡಗೇರಿ, ಅಶೋಕ ಮುಳಗುಂದಮಠ, ಜಯಕ್ಕ ಕಳ್ಳಿ, ಚನ್ನಪ್ಪ ಜಗಲಿ, ಮುಂತಾದವರಿದ್ದರು.

loading...