ಲಕ್ಷ್ಮೇಶ್ವರದ ವಾರ್ಡ್ ನಂ-9 ರಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

0
18
loading...

ಕನ್ನಡಮ್ಮ ಸುದ್ದಿ-ಶಿರಹಟ್ಟಿ : ತಾಲೂಕಿನ ಲಕ್ಷ್ಮೇಶ್ವರ ಪಟ್ಟಣದ ಬಸ್ತಿಬಣದ ಅಂಭಾಭವಾನಿ ದೇವಸ್ಥಾನದ ಹತ್ತಿರದ ವಾರ್ಡ್ ನಂ-9 ರಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಮಂಗಳವಾರ ಪುರಸಭೆ ಅಧ್ಯಕ್ಷ ವಿರುಪಾಕ್ಷಪ್ಪ ಪಡಗೇರಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ಮತ್ತು ವಿವಿಧ ಯೋಜನೆಯಡಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳು ಪ್ರಗತಿ ಹಂತದಲ್ಲಿದ್ದುಸ್ವಚ್ಚ ಸುಂದರ ಪಟ್ಟಣಕ್ಕೆ ಪುರಸಭೆ ಆಡಳಿತ ಮಂಡಳಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಪಟ್ಟಣದ ಅಭಿವೃದ್ಧಿಗಾಗಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರು ವಿಶೇಷ ಆಸಕ್ತಿ ಹೊಂದಿದ್ದು ಹೆಚ್ಚಿನ ಅನುದಾನ ಕಲ್ಪಿಸುವ ಭರವಸೆ ನೀಡಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.
ಈ ಸಂದರ್ಭದಲ್ಲಿ ವಾರ್ಡ್ ಸದಸ್ಯ ಹಾಗೂ ಉಪಾಧ್ಯಕ್ಷ ಗುರುಪುತ್ರ ಮೆಡ್ಲೇರಿ, ಸದಸ್ಯರಾದ ಎಂ.ಆರ್.ಪಾಟೀಲ, ಮಹೇಶ ಹೊಗೆಸೊಪ್ಪಿನ, ಗಂಗಾಧರ ಮ್ಯಾಗೇರಿ, ಗಣೇಶ ಕುಂಬಾರ, ಲೆಂಕೆಪ್ಪ ಶರಸೂರಿ, ಮಹೇಶ ಸೋಮಕ್ಕನವರ, ಮುಖ್ಯಾಧಿಕಾರಿ ಬಿ.ಆರ್.ಶಿಡೇನೂರ, ಪ್ರವೀಣ ಗ್ವಾರಿ, ಗಂಗಾಧರ ಅರಳಿ,ಮಲ್ಲನಗೌಡ ಪಾಟೀಲ, ರಾಜು ಧರ್ಮದಾಸ ಅನೇಕರಿದ್ದರು.

loading...