ವಿಜೃಂಭಣೆಯಿಂದ ಜರುಗಿದ ಪ್ರತಿಷ್ಠಾ ವರ್ಧಂತಿ ಉತ್ಸವ ಮತ್ತು ರಥೋತ್ಸವ

0
37
loading...

ಕನ್ನಡಮ್ಮ ಸುದ್ದಿ-ಭಟ್ಕಳ : ಇಲ್ಲಿನ ಸೋನಾರಕೇರಿಯ ದೈವಜ್ಞ ಬ್ರಾಹ್ಮಣ ಸಮಾಜದ ಶ್ರೀ ಗಣಪತಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ತಾನದ ಪ್ರತಿಷ್ಠಾ ವರ್ಧಂತಿ ಉತ್ಸವ ಮತ್ತು ರಥೋತ್ಸವ ಕಾರ್ಯಕ್ರಮ ಗುರುವಾರದಂದು ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಉತ್ಸವದ ಪ್ರಯುಕ್ತ ಗುರುವಾರದಂದು ಶ್ರೀ ಧೇವರಿಗೆ ಫಲ ಪಂಚಾಮೃತ ಅಬಿಷೇಕ, ಸುಹಾಸಿನಿಯರಿಂದ ಕುಂಕುಮಾರ್ಚನೆ, ಗಣೇಶ ಪೂಜಾ, ಪುಣ್ಯಾಹ ಅಧಿವಾಸ ಪೂಜೆ ಮತ್ತು ಹೋಮ ರಥ ಶುದ್ದಿ ಸಂಸ್ಕಾರ ಹವನ, ಮಹಾಪೂಜೆ ದಂಡಬಲಿ ನಡೆಯಿತು. ಬೆಳಿಗ್ಗೆ 11-30ಕ್ಕೆ ಅಬಿಜಿತ್ ಮಹೂರ್ತದಲ್ಲಿ ರ್ಶರೀ ದೇವರ ರಥಾರೋಹಣ ರಥಕಾಣಿಕೆ,
ಅನ್ನಸಂತರ್ಪಣೆ, ರಥೋತ್ಸವ ಮೃಗಯಾತ್ರೆ ಸಂವಾದ ಪೂಜೆ ನಡೆಯಿತು. ಸಂಜೆ ನಡೆದ ರಥೋತ್ಸವದಲ್ಲಿ ರಥೋತ್ಸವದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಎಸ್.ಪಿ. ಶೇಟ್, ಪ್ರಮುಖರಾದ ಆರ್.ಜಿ.ಕೊಲ್ಲೆ, ದೇವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷ ರತ್ನಾಕರ ಶೇಟ್,,ನಾಗರಾಜ ಶೇಟ್, ವಿನಾಯಕ ಶೇಟ್, ಮಂಜುನಾತ ಶೇಟ್, ಗಜಾನನ ಶೇಟ್, ಮಾರುತಿ ಶೇಟ್, ನಾಗರಾಜ ಶೇಟ್, ಗುರು ರಾಮದಾಸ ಶೇಟ್,, ಭವಾನಿಶಂಕರ ಶೇಟ್, ನಾಗರಾಜ ಶೇಟ್, ಬಾಲಕೃಷ್ಣ ಶೇಟ್, ದೈವಜ್ಞ ಯುವಕ ಮಂಡಳಿಯ ಅಧ್ಯಕ್ಷ ರಾಘವೇಂದ್ರ ಸೇಟ್, ಮಹಿಳಾ ಮಂಡಳಿಯ ಅಧ್ಯಕ್ಷೆ ಪ್ರೇಮಾ ಶೇಟ್, ಸೇರಿದಂತೆ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

loading...