ವಿದ್ಯಾಭಾರತಿ ಶಿಕ್ಷಣ ಪ್ರಸಾರ ಟ್ರಸ್ಟ್‍ನ ಪೂರ್ವಪ್ರಾಥಮಿಕ ಶಾಲೆಯ ಪ್ರಥಮ ವಾರ್ಷಿಕೋತ್ಸವ

0
24
loading...

ಕನ್ನಡಮ್ಮ ಸುದ್ದಿ-ಶಿರಹಟ್ಟಿ : ಮಗುವಿನ ಪ್ರಾರಂಭ ಹಂತದ ಶಿಕ್ಷಣ ಪ್ರಗತಿಗೆ ಶಿಕ್ಷಕರಿಗಿಂತ ತಾಯಂದಿರ ಕರ್ತವ್ಯ ಅಧಿಕವಾಗಿರುತ್ತದೆ. ಮಗುವಿನ ಮೊದಲ ಗುರು ತಾಯಿಯಾಗಿದ್ದು, ಅವರು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಆಸಕ್ತಿ ನೀಡಬೇಕಾಗುತ್ತದೆ ಎಂದು ಹಿರಿಯ ಮುಖಂಡ ಸೋಮಣ್ಣ ಮುಳಗುಂದ ಅಭಿಪ್ರಾಯಪಟ್ಟರು.

ಅವರು ತಾಲೂಕಿನ ಲಕ್ಷ್ಮೇಶ್ವರ ಪಟ್ಟಣದ ವಿದ್ಯಾಭಾರತಿ ಶಿಕ್ಷಣ ಪ್ರಸಾರ ಟ್ರಸ್ಟ್‍ನ ಪೂರ್ವಪ್ರಾಥಮಿಕ ಶಾಲೆಯ ಪ್ರಥಮ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸಮಾಜದಲ್ಲಿ ಶಿಕ್ಷಣ ಇಲ್ಲದೆ ಜೀವನ ನಡೆಸುವದು ದುಸ್ತರವಾಗಿದೆ, ಅದಕ್ಕಾಗಿ ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು, ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಬೇಕೆಂಬ ಇಚ್ಚೆ ಇರುತ್ತದೆ ಅದಕ್ಕೆ ತಕ್ಕಂತೆ ಮಗುವಿನ ಶಿಕ್ಷಣ ಪ್ರಗತಿಯ ಕಾಳಜಿಯನ್ನು ಸಹ ಮಾಡಬೇಕಾಗುತ್ತದೆ ಎಂದು ಹೇಳಿದ ಅವರು ಈ ಟ್ರಸ್ಟ್‍ನ ಶಾಲೆಯು ಉತ್ತಮ ಶಿಕ್ಷಣ ನೀಡುತ್ತಿದ್ದು ಇನ್ನೂ ಹೆಚ್ಚಿನ ಪ್ರಗತಿ ಹೊಂದಲಿ ಎಂದು ಹಾರೈಸಿದರು.

ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಚಂಬಣ್ಣ ಬಾಳಿಕಾಯಿ ವಹಿಸಿದ್ದರು. ಅತಿಥಿಗಳಾಗಿ ಆಯ್.ಕೆ.ಹೊಸಮಠ, ಬಸವರಾಜ ವಡಕಣ್ಣವರ, ಎಂ.ಸಿದ್ದಲಿಂಗಯ್ಯ, ಉಮೇಶ ಬೆಳವಿಗಿ, ಎಸ್.ಸಿ.ಕಳ್ಳಿಮನಿ ಮುಂತಾದವರಿದ್ದರು. ಶಿಕ್ಷಕಿ ನೀಲಮ್ಮ ಅಂಬಿಗೇರ, ರಾಜೇಶ್ವರಿ ಪಾಸ್ತೆ ನಿರೂಪಿಸಿದರು.

loading...