“ವೀರ ಅಭಿಮನ್ಯು ಕಾಳಗ” ಬಯಲಾಟ ಪ್ರದರ್ಶನ

0
43
loading...

ಕನ್ನಡಮ್ಮ ಸುದ್ದಿ-ಗಂಗಾವತಿ : ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಬೆಂಗಳೂರು, ಬಳ್ಳಾರಿ ನಗರದ ಡಾ|| ಜೋಳದ ರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಆಯೋಜಿಸಿರುವ ಉತ್ತರ ಕರ್ನಾಟಕ ಜಿಲ್ಲೆಗಳ ಬಯಲಾಟ (ದೊಡ್ಡಾಟ) ಸಪ್ರಾಹದ ಚಿತ್ರೀಕರಣಗೊಂಡ “ವೀರ ಅಭಿಮನ್ಯು ಕಾಳಗ” ಬಯಲಾಟ ಪ್ರಸಂಗ ನೆರೆದಿದ್ದ ಬಯಲಾಟ ಪ್ರಿಯರನ್ನು ಆಕರ್ಷಿಸಿತು.
ಗಂಗಾವತಿಯ ಶ್ರೀ ನೀಲಕಂಠೇಶ್ವರ ಸಾಂಸ್ಕøತಿಕ ಕಲಾವೇದಿಕೆ (ರಿ) ಸದಸ್ಯರು ಪ್ರಸ್ತುತಪಡಿಸಿದ ಬಯಲಾಟ ಪ್ರಸಂಗವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಕಾಡೆಮಿಯ ಅಧ್ಯಕ್ಷ ನಾಡೋಜ ಬೆಳಗಲ್ಲು ವೀರಣ್ಣನವರು ಮಾತನಾಡಿ, ಕಲಾವಿದರ ಮನೋಜ್ಞ ಅಭಿನಯ, ಹಾಗೂ ಒಬ್ಬರಿಗಿಂತ ಒಬ್ಬರು ಉತ್ತಮವಾಗಿ ನಟಿಸಿದರು. ಇನ್ನೂ ಸ್ವಲ್ಪ ಪರಿಷ್ಕರಣೆಗೊಂಡರೆ ವಿದೇಶಗಳಲ್ಲೂ ಪ್ರದರ್ಶನ ಕಾಣುವ ಅರ್ಹತೆಯನ್ನು ಈ ತಂಡ ಹೊಂದಿದೆ ಎಂದು ಮುಕ್ತ ಕಂಠದಿಂದ ಪ್ರಶಂಶಿಸಿದರು.
ನಾಟಕದಲ್ಲಿ ಅಂಚೆ ಇಲಾಖೆ ನೌಕರರ ಸಂಘದ ಪಿ-4 ವಿಭಾಗದ ಗದಗ ವಿಭಾಗದ ಅಧ್ಯಕ್ಷರಾದ ಹಾಗೂ ಅನುಭವಿ ಕಲಾವಿದರಾದ ಶಿರವಾರ ವಿರುಪಾಕ್ಷಪ್ಪ ದ್ರೋಣಾಚಾರ್ಯ ಪಾತ್ರದಲ್ಲಿ ಹಾಗೂ ಪಿ.ಡಬ್ಲ್ಯೂ.ಡಿ ಇಲಾಖೆಯ ನೌಕರರು ಹಾಗೂ ಹಿರಿಯ ಕಲಾವಿದರಾದ ಶ್ಯಾವಿ ಮೈಲಾರಪ್ಪ ಭೀಮನಪಾತ್ರ, ಹಾಗೂ ಶ್ರೀ ಕೃಷ್ಣನ ಪಾತ್ರ ಐಲಿ ಮಾರುತಿ, ಅರ್ಜುನನ ಪಾತ್ರದಲ್ಲಿ ಶೆಡ್ಡಿ ರಮೇಶ (ನೇತ್ರ), ಧರ್ಮರಾಜನ ಪಾತ್ರದಲ್ಲಿ ಚನ್ನಬಸಯ್ಯಸ್ವಾಮಿ, ಜಯದ್ರಥನ ಪಾತ್ರ ಯಮನೂರಪ್ಪ ಶಿರಿಗೇರಿ, ಅಭಿಮನ್ಯುವಿನ ಪಾತ್ರ ಮೌಲಪ್ಪ, ಕೌರವನ ಪಾತ್ರದಲ್ಲಿ ಗಿರಿರಾಜ ಹಾಗೂ ಕರ್ಣನ ಪಾತ್ರದಲ್ಲಿ ರವಿ ಬಿ. ಐಲಿ ಹಾಗೂ ಸುಭದ್ರಿ ಪಾತ್ರ ಅಂಜನಮ್ಮ ಹಾಗೂ ಸಾರಥಿಯಾಗಿ ಜಡಿಯಪ್ಪ ಮತ್ತು ಹಾರ್ಮೊನಿಯಂ ಮಾಸ್ಟರ್‍ಆಗಿ ಜಿ. ವೀರನಗೌಡ ಮುದ್ದಟನೂರು ತಮ್ಮ ತಮ್ಮ ವಿಭಾಗದಲ್ಲಿ ಮೆರೆದರು. ಈ ಕಾರ್ಯಕ್ರಮಕ್ಕೆ ನಮ್ಮ ತಂಡ ವಿದೇಶಕ್ಕೆ ಹೋಗಲು ಅನುವು ಮಾಡಿಕೊಡುವುದಾಗಿ ಹೇಳಿದ ಅಕಾಡೆಮಿ ಅಧ್ಯಕ್ಷರಾದ ನಾಡೋಜ ಬೆಳಗಲ್ಲು ವೀರಣ್ಣ ಗುರುಗಳಿಗೆ ಹಾಗೂ ಈ ಕಾರ್ಯಕ್ರಮದ ಸಂಘಟಕರಾದ ಹೆಚ್. ತಿಪ್ಪಸ್ವಾಮಿಯವರಿಗೆ ಹಾಗೂ ಸಂಗೀತ ವಿಧ್ವಾಂಸಕರಾದ ದೊಡ್ಡಯ್ಯ ಕಲ್ಲೂರು ಗವಾಯಿಗಳು ಮತ್ತು ಶ್ರೀಮತಿ ರತಿ ಬಾಲಾಜಿ ಅವರು ಬಯಲಾಟ ಪ್ರಸಂಗಗಳ ಸಂಗೀತ ರಾಗಗಳನ್ನು ದಾಖಲಿಸಿದ್ದಕ್ಕಾಗಿ ಶ್ರೀ ನೀಲಕಂಠೇಶ್ವರ ಸಾಂಸ್ಕøತಿಕ ಕಲಾವೇದಿಕೆ (ರಿ) ಗಂಗಾವತಿಯ ಪ್ರಧಾನ ಕಾರ್ಯದರ್ಶಿ ವಿರುಪಾಕ್ಷಪ್ಪ ಶಿರವಾರ ಹಾಗೂ ಎಲ್ಲಾ ಸದಸ್ಯರು ಧನ್ಯವಾದಗಳನ್ನು ಸಮರ್ಪಿಸಿದರು.

loading...