ಶಿರಾಲಿಯ ಸಾರದೊಳೆಯಲ್ಲಿ ನಾಮಧಾರಿ ಮಿತ್ರ ಬಳಗ ಉದ್ಘಾಟನೆ

0
27
loading...

ಕನ್ನಡಮ್ಮ ಸುದ್ದಿ-ಭಟ್ಕಳ : ತಾಲೂಕಿನ ಶಿರಾಲಿಯ ಸಾರದೊಳೆಯಲ್ಲಿ ನಾಮಧಾರಿ ಮಿತ್ರ ಬಳಗವನ್ನು ಗೋವಾ ಸರ್ಕಾರದಡೈರಕ್ಟರ್ ಪಾಕ್ರ್ಸ್ ಮತ್ತುಗಾರ್ಡನ್ ಹಾಗೂ ಡಿ.ಸಿ.ಎಫ್ ದಾಮೋದರ್‍ಎ.ಟಿ. ಉದ್ಘಾಟಸಿದರು.
ನಂತರ ಮಾತನಾಡಿದಅವರು, ಸಮಾಜದ ಬದಲಾವಣೆಗಾಗಿ ನಾಮಧಾರಿ ಸಮುದಾಯದಯುವಕರು ಸಂಘಟಿತರಾಗುತ್ತಿರುವುದುಉತ್ತಮ ಬೆಳವಣೆಯಾಗಿದ್ದು ಈ ಮಿತ್ರರ ಬಳಗ ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಲಿ ಎಂದರು.
ಮುಖ್ಯಅತಿಥಿಯಾಗಿ ಉಪಸ್ಥಿತರಿದ್ದ ಭಟ್ಕಳ ಸರ್ಕಾರಿಆಸ್ಪತ್ರೆಯ ವೈದ್ಯಾಧಿಕಾರಿಡಾ.ಲಕ್ಷ್ಮೀಶ ನಾಯ್ಕ ಮಾತನಾಡಿ ಶಿಕ್ಷಣ, ಸಂಘಟನೆಯಿಂದಲೆ ಸಮಾಜ ಪರಿವರ್ತನೆಗೊಳ್ಳುತ್ತದೆ. ನಾಮಧಾರಿಯುವಕರುಉನ್ನತ ಶಿಕ್ಷಣ ಪಡೆದುದೇಶ ಹಾಗೂ ಸಮಾಜದಅಭಿವೃದ್ಧಿಗೆ ಶ್ರಮಿಸಬೇಕುಎಂದರು.
ಭಟ್ಕಳ ತಾಲೂಕುಕನ್ನಡ ಸಾಹಿತ್ಯ ಪರಿಷತ್‍ಅಧ್ಯಕ್ಷಗಂಗಾಧರ್ ನಾಯ್ಕ ಮಾತನಾಡಿ ನಾಮಧಾರಿ ಸಮುದಾಯ ದೀರ್ಘವಾದಇತಿಹಾಸ ಹೊಂದಿದ್ದು ಸಮುದಾಯದಗತವೈಭವವನ್ನುಯುವಜನಾಂಗಕ್ಕೆ ತಿಳಿಸುವುದು ಅವಶ್ಯಕವಾಗಿದೆಎಂದರು.
ಸಾರದೊಳೆ ನಾಮಧಾರಿಅಭಿವೃದ್ಧಿ ಸಂಘದಅಧ್ಯಕ್ಷ ಬಿ.ಕೆ.ನಾಯ್ಕ ಸಮಾರಂಭದಅಧ್ಯಕ್ಷತೆ ವಹಿಸಿದ್ದರು.
ಶಿರಾಲಿ ಆಸ್ಪತ್ರೆಯ ಮಕ್ಕಳ ತಜ್ಞಡಾ. ಪ್ರಸನ್ನ ನಾಯ್ಕ, ಭಟ್ಕಳ ನಾಮಧಾರಿಅಭಿವೃದ್ಧ ಸಂಘದಅಧ್ಯಕ್ಷ ಡಿ.ಬಿ.ನಾಯ್ಕ, ಸರ್ಕಾರಿ ಪ್ರೌಢಶಾಲೆಯಗೊರಟೆ ಮುಖ್ಯಾಧ್ಯಾಪಕರಾಘವೇಂದ್ರ ನಾಯ್ಕ, ವಿಜಯ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಎಂ.ಆರ್.ನಾಯ್ಕ, ಶಿರಾಲಿ ನಾಮಧಾರಿ ಮಿತ್ರ ಬಳಗದ ಅಧ್ಯಕ್ಷರಾಜುಎಚ್.ನಾಯ್ಕ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

loading...