ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯ: ಹೊಸಮನಿ

0
41
loading...

ಕನ್ನಡಮ್ಮ ಸುದ್ದಿ
ಬೆಳಗಾವಿ: ಜೀವನ ಒಂದು ಪಿರ್ಯಾಮಿಡ್ ಇದ್ದಂತೆ ಮೇಲೆ ಹೋದಂತೆ ಮೆಟ್ಟಿಲುಗಳು ಕಿರಿದಾಗುತ್ತಾ ಹೋಗುತ್ತವೆ ಹಾಗೇ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸತತ ಪ್ರಯತ್ನ ಹಾಗೂ ಉತ್ತಮ ಗುರಿ ಹೊಂದಿದರೆ ಮಾತ್ರ ಒಳ್ಳೆಯ ಉದ್ಯೋಗ ಪಡೆಯಲು ಸಾಧ್ಯ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ಬಿ ಹೊಸಮನಿ ಹೇಳಿದರು.
ಇತ್ತೀಚೆಗೆ ನಗರದ ಗೊಗಟೆ ಪದವಿ ಪೂರ್ವ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ವಿದ್ರ್ಯಾಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು. ವಿದ್ಯಾರ್ಥಿಗಳ ಪೋಷಕರು ಮಕ್ಕಳಿಗೆ ಡಾಕ್ಟರ, ಇಂಜನಿಯರ ಆಗಬೇಕೆಂದು ಒತ್ತಡ ಹಾಕುತ್ತಿದ್ದಾರೆ. ಇದರ ಹಿಂದಿನ ಉದ್ದೇಶ ಹಣಗಳಿಕೆಯ ಪ್ರಧಾನ ಕಲಿಕೆಯಾಗಿ ಶಿಕ್ಷಣ ಮುಂದುವರೆಯುತ್ತಿದೆ. ಮಕ್ಕಳಿಗೆ ಅವರ ಆಸಕ್ತಿಯ ಕ್ಷೇತ್ರದ ಪದವಿ ಪಡೆಯಲು ಬಿಡಬೇಕೆಂದು ಪೋಷಕರಿಗೆ ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ ಗೊಗಟೆ ಪದವಿ ಪೂರ್ವ ಮಹಾವಿದ್ಯಾಲಯದ ಅಧ್ಯಕ್ಷ ವಿ.ಎಮ್ ದೇಶಪಾಂಡೆ ಮಾತನಾಡಿ, ನಮ್ಮ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಸಹಾಯ ಸಹಕಾರವನ್ನು ನೀಡುತ್ತೇವೆ. ವಿದ್ಯಾರ್ಥಿಗಳು ಸತತ ಅಭ್ಯಾಸ ಪರಿಶ್ರಮದೊಂದಿಗೆ ಗುರಿ ಸಾಧಿಸಬೇಕು. ಮಹಾವಿದ್ಯಾಲಯದ ಸದುಪಯೋಗ ಪಡೆದುಕೊಂಡು ನಿರಂತರ ಓದಿನ ಕಡೆಗೆ ಹೆಚ್ಚು ಗಮನಹರಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಕಳೆದ ವರ್ಷದಲ್ಲಿ ವಾಣಿಜ್ಯ ಮತ್ತು ವಿಜ್ಞಾನÀ ವಿಭಾಗಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಾದ ಸೋನಿಯಾ ಕೋಸಂದಲ ಹಾಗೂ ಪ್ರಾಣೇಶ ಪಾರ್ವತಿಕರರವರಿಗೆ ತಲಾ ರೂ. 5 ಸವಿರ ಬಹುಮಾನ ನೀಡಿ ಗೌವರವಿಸಿದರು. ಹಾಗೂ ಪ್ರತಿ ವರ್ಷದಂತೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಿಲ್ಡು ಬಹುಮಾನವಾಗಿ ನೀಡಿದರು.
ಕಾರ್ಯಕ್ರಮದಲ್ಲಿ ಎಸ್.ಎನ್ ಮುತಗೇಕರ, ಪಿ.ವಿ ಸೋನಶೇಟ, ಎಲ್.ಡಿ ರತ್ನಾಕರ, ಎಸ್.ಡಿ ಪವಾರ, ವಿ.ಜಿ ಹಿರಾಪಾಚೆ, ಎಸ್.ಎಮ್ ಮಾಳಿ, ಅಮಿತ ಜಡೇ ಸೇದಂತೆ ಹಲವರು ಇದ್ದರು.
ಕಾರ್ಯಕ್ರಮವನ್ನು ಡಾ.ಎ.ಎಸ್ ಕೆರೂರ ಸ್ವಾಗತಿಸಿದರು. ಎಲ್.ಎನ್ ದೇಶಪಾಂಡೆ ನಿರೂಪಿಸಿದರು. ವರ್ಷಾ ಕುಲಕರ್ಣಿ ವಂದಿಸಿದರು.

loading...