ಸಾಹಿತ್ಯ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಪ್ರತಿಭೆಗಳಿಗೆ ಅವಕಾಶವಿದೆ

0
39
loading...

ಕನ್ನಡಮ್ಮ ಸುದ್ದಿ-ಧಾರವಾಡ : ಗಾಯನ ಕ್ಷೇತ್ರದಲ್ಲಿ ಆಧುನಿಕತೆಯ ಹಾವಳಿಯ ನಡುವೆಯೂ ಸುಗಮ, ಶಾಸ್ತ್ರೀಯ ಸಂಗೀತದ ಪ್ರಯತ್ನಗಳು ಗಮನಾರ್ಹ ರೀತಿಯಲ್ಲಿ ನಡೆಯುತ್ತಿವೆ ಎಂದು ಶಿಕ್ಷಕರ ಸಂಘದ ಧುರೀಣರಾದ ಎಸ್.ಬಿ. ಕೇಸರಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಕಲಾ ಮಂಟಪವು ಹಮ್ಮಿಕೊಂಡಿದ್ದ ಗಾಯಕ ಶರಣಬಸಪ್ಪ ಮೇಡೆದಾರ ಅವರ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿ, ಕರ್ನಾಟಕ ಪ್ರದೇಶವು ಆದಿಕಾಲದಿಂದಲೂ ಕಲೆ ಸಂಸ್ಕøತಿಯ ತವರೂರಾಗಿದೆ. ಲಲಿತಕಲೆ, ಸುಗಮ ಸಂಗೀತ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಪ್ರತಿಭೆಗಳಿಗೆ ಜನ್ಮ ನೀಡಿದ ಧಾರವಾಡ ಗಾಯಕರಿಗೆ ವಿಶೇಷ ಸ್ಥಾನ ನೀಡಿದೆ. ಹೊಸ ತಲೆಮಾರಿನ ಗಾಯಕÀರು ಸಾಂಪ್ರದಾಯಿಕ ಘರಾಣೆಗಳ ಕಡೆಗೆ ಒಲಿಯುತ್ತಿದ್ದು, ಶರಣಬಸಪ್ಪ ಸೇರಿದಂತೆ, ಇನ್ನಿತರರೂ ಭರವಸೆ ಮೂಡಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಸಂಗೀತ ಕೇಂದ್ರವೆಂದೆ ಗುರುತಿಸಿಕೊಂಡ ಧಾರವಾಡದಲ್ಲಿ ಇನ್ನೊಂದು ಸಂಗೀತ ವಿಶ್ವವಿದ್ಯಾಲಯ ಸ್ಥಾಪನೆ ಅಗತ್ಯವಿದೆ ಎಂದರು.
ಡಾ. ವಿ.ಆರ್. ಹೂಗಾರ, ಜಯಶ್ರೀ ಗವಳಿ, ಮೋಹನ ನಾಗಮ್ಮನವರ, ಮಹೇಶ ಪರಸಣ್ಣವರ, ಶ್ರೀಧರ ಕುಲಕರ್ಣಿ ಉಪಸ್ಥಿತರಿದ್ದರು.

loading...