ಹಿರಿಯ ಸಾಹಿತಿ ಡಾ.ಜಿ.ಎಸ್.ಆಮೂರ ಅವರನ್ನು ಡಾ.ವ್ಹಿ.ಕೆ.ಹೆಬಸೂರ ಪ್ರತಿಷ್ಠಾನದ ವತಿಯಿಂದ ಗೌರವ

0
35
loading...

ಕನ್ನಡಮ್ಮ ಸುದ್ದಿ-ಶಿರಹಟ್ಟಿ : ಶಿರಹಟ್ಟಿ ತಾಲೂಕಿನ ಸೂರಣಗಿ ಗ್ರಾಮದವರರಾಗಿರುವ ಸದ್ಯ ಧಾರವಾಡದಲ್ಲಿ ವಿಶ್ರಾಂತ ಜೀವನ ನಡೆಸುತ್ತಿರುವ ಹಿರಿಯ ಸಾಹಿತಿ ಡಾ.ಜಿ.ಎಸ್.ಆಮೂರ ಅವರನ್ನು ಅವರ ನಿವಾಸದಲ್ಲಿ ಸೂರಣಗಿ ಗ್ರಾಮದ ಡಾ.ವ್ಹಿ.ಕೆ.ಹೆಬಸೂರ ಪ್ರತಿಷ್ಠಾನದ ವತಿಯಿಂದ ಗೌರವಿಸಲಾಯಿತು.
ಹೆಬಸೂರು ಪ್ರತಿಷ್ಠಾನದ ದಶಮಾನೋತ್ಸವ ಕಾರ್ಯಕ್ರಮದ ನಿಮಿತ್ಯ ಹಿರಿಯ ಚೇತನವನ್ನು ಗ್ರಾಮದ ಹಾಗೂ ಸಂಸ್ಥೆಯವತಿಯಿಂದ ಗೌರವಿಸಿ ಕಾರ್ಯಕ್ರಮಕ್ಕೆ ಆಶೀರ್ವಾದವನ್ನು ಪಡೆದುಕೊಳ್ಳಲಾಯಿತು. ಈ ಸಂದರ್ಭದಲ್ಲಿ ಡಾ.ಆಮೂರ ಅವರು ನನ್ನ ಹುಟ್ಟುಗ್ರಾಮ ಸೂರಣಗಿಯಲ್ಲಿ ಹೆಬಸೂರು ಪ್ರತಿಷ್ಠಾನದವರು ಶೈಕ್ಷಣಿಕ ಕಾರ್ಯವನ್ನು ಉತ್ತಮವಾಗಿ ನಡೆಸುತ್ತಿರುವದು ತಿಳಿದು ಬಹಳ ಹೆಮ್ಮೆ ಎನಿಸಿತು. ದಶಮಾನೋತ್ಸವ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ನಾರಾಯಣ ಹೆಬಸೂರ, ಸಹಕಾರ್ಯದರ್ಶಿ ನಾರಾಯಣ ಕುಲಕರ್ಣಿ, ನಾಗರಾಜ ಪೂಜಾರ, ಶಿಕ್ಷಕ ಹುಲಕೋಟಿ ಮತ್ತಿತರು ಇದ್ದರು.

loading...