2019ರ ಲೋಕಸಭಾ ಚುನಾವಣೆ: ಸಂವಿಧಾನದ ಅಳಿವು ಉಳಿವಿನ ಹೋರಾಟ

0
25
loading...

ಕನ್ನಡಮ್ಮ ಸುದ್ದಿ-ಭಟ್ಕಳ : 2019 ರ ಲೋಕಸಭಾ ಚುನಾವಣೆಯು ಸಂವಿಧಾನದ ಅಳಿವು ಉಳಿವಿನ ಹೋರಾಟವಾಗಿದ್ದು ಸಂಘ ಪರಿವಾರ ಇದನ್ನು ಗೆದ್ದು ಬಾಬಾ ಸಾಹೇಬರ ಸಂವಿಧಾನ ನಾಶ ಮಾಡಿ ಮನುವಿನ ಸಂವಿಧಾನದೇಶದ ಮೇಲೆ ಹೇರುವ ಹುನ್ನಾರ ನಡೆಸುತ್ತಿದೆಎಂದು ಸಂವಿಧಾನ ಶಿಲ್ಪಿ ಡ.ಬಾಬಾ ಸಾಹೇಬ ಅಂಬೇಡ್ಕರ ಮೊಮ್ಮಗ ಹಾಗೂ ಭರಿಪಾ ಬಹುಜನ ಮಹಾಸಂಘದ ರಾಷ್ಟ್ರೀಯ ಅಧ್ಯಕ್ಷ ಪ್ರಕಾಶ ಯಶವಂತ್ ಅಂಬೇಡ್ಕರ್ ಹೇಳಿದರು.
ಅವರು ರವಿವಾರ ಇಲ್ಲಿನ ಸಾರ್ವಜನಿಕ ಮೈದಾನದಲ್ಲಿ ವೆಲ್ಫೇರ್ ಪಾರ್ಟಿ ಆಫ್‍ ಇಂಡಿಯಾದ ಯುವ ಘಟಕ ಆಯೋಜಿಸಿದ್ದ ಮಂಗಳೂರು ವಲಯದ “ಯುವಜಾಗೃತಿದೇಶದ ಸಮೃದ್ಧಿ’ ಯುವ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಬಹುಸಂಖ್ಯಾತರಾದ ಇಲ್ಲಿನ ಹಿಂದುಳಿದ ವರ್ಗ ಹಾಗೂ ಅವರ ಸಂತರ ಧರ್ಮವನ್ನು ಹೈಜಾಕ್ ಮಾಡಿಕೊಂಡು ಬಲವಂತವಾಗಿ ಆರ್.ಎಸ್.ಎಸ್‍ನ ವೈಧಿಕಧರ್ಮವನ್ನುದೇಶದ ಮೇಲೆ ಹೇರುವ ಪ್ರಯತ್ನಗಳು ನಡೆಯುತ್ತಿದ್ದು ಅದಕ್ಕಾಗಿ ರಾಜಕೀಯ ರಂಗವನ್ನು ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡಿದ್ದಾರೆ ನಾವಿಂದು ಸಾಂಸ್ಕೃತಿಕ ಹಾಗೂ ಸೈದ್ದಾಂತಿಕಯುದ್ದವನ್ನುಎದುರಿಸುತ್ತಿದ್ದೇವೆ, ಸಂತರ ವಿಚಾರಧಾರೆ ವೈಧಿಕರ ಹಿಂದೂಧರ್ಮಕ್ಕಿಂತಲೂ ಭಿನ್ನವಾಗಿದ್ದು ನಮ್ಮ ಮೇಲೆ ಅದನ್ನು ಬಲವಂತವಾಗಿ ಹೇರುತ್ತಿದ್ದಾರೆಎಂದÀರು. ಮುಸ್ಲಿಮರು ಸಮಾನ ನಾಗರೀಕ ಸಂಹಿತೆಯನ್ನು ವಿರೋಧಿಸಬೇಕಾಗಿಲ್ಲ, ಏಕೆಂದರೆ ಮುಸ್ಲಿಮರ ವೈಯುಕ್ತಿ ಕಾನೂನು ಅದು ಸಂವಿಧಾನ ನೀಡಿದ ಹಕ್ಕು ಆದ್ದರಿಂದ ಸಮಾನ ನಾಗರೀಕ ಸಂಹಿತೆಯಿಂದ ತೊಂದರೆಯನ್ನು ಅನುಭವಿಸುವವರು ಇಲ್ಲಿನ ಹಿಂದುಳಿದ ವರ್ಗ ಮತ್ತುದಲಿತರು. ಆರ್.ಎಸ್.ಎಸ್ ಯಾವತ್ತೂ ಕೂಡ ಸಮಾನ ನಾಗರೀಕ ಸಂಹಿತೆ ಜಾರಿಯಾಗುವುದನ್ನು ಇಷ್ಟಪಟ್ಟಿಲ್ಲ. ಆದ್ದರಿಂದ ಅದು ಜಾರಿಯಾಗುವುದು ಕನಸಿ ಮಾತಾಗಿದೆ ಎಂದರು.ಈ ದೇಶದದಲಿತ ಹಾಗೂ ಮುಸ್ಲಿಮರ ಮಾನಸಿಕತೆ ಒಂದೇತೆರನಾಗಿದ್ದು ಬಹಿರಂಗವಾಗಿ ತಾವು ಕಾಂಗ್ರೇಸ್ ನ್ನು ಬೆಂಬಲಿಸುವುದಿಲ್ಲ ಎಂದೂ ಘೋಷಿಸಬೇಕು. ಭಾರತದ ಭವಿಷ್ಯಕ್ಕಾಗಿ ಜಾತ್ಯಾತೀತ ಆಂದೋಲನವನ್ನು ಬಲಪಡಿಸಬೇಕು ಎಂದು ಅವರು ಕರೆ ನೀಡಿದರು.
ಸಮಾರಂಭದಲ್ಲಿಆಶಯ ನುಡಿಯನ್ನಾಡಿದ ವೆಲ್ಫೇರ್ ಪಾರ್ಟಿಆಫ್‍ಇಂಡಿಯಾರಾಜ್ಯಧ್ಯಕ್ಷೆ ಹಿರಿಯ ಲೇಖಕಿ ಬಿ.ಟಿ.ಲಲಿತಾ ನಾಯಕ್, ಕೇಂದ್ರ ಹಾಗೂ ರಾಜ್ಯ ಸರ್ಕಾರಜನರದನಿಯನ್ನುಅಡಗಿಸು ಪ್ರಯತ್ನ ಮಾಡುತ್ತಿದ್ದುಜನರ ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಳ್ಳುತ್ತಿವೆ. ಕಪ್ಪಕಾಣಿಕೆಯಡೈರಿಯನ್ನು ಬಿಡುಗಡೆಗೊಳಿಸುವ ನಾಟಕನ್ನಾಡುವಎರಡೂ ಪಕ್ಷದವರು ಕಳ್ಳರೇ ಆಗಿದ್ದು ಬಡಜನರ ಪಾಪದ ಹಣದಿಂದಗದ್ದುಗೆ ಅಲಂಕರಿಸಿದ್ದಾರೆ.ನೋಟ್ ಬ್ಯಾನ್ ಮಾಡುವುದರ ಮೂಲಕ ಬಡವರ ಶಾಪಕ್ಕೆ ಗುರಿಯಾಗಿರುವಮೋದಿ ಕ್ಷಮಿಸಲುಅನರ್ಹ ವ್ಯಕ್ತಿಯಾಗಿದ್ದಾರೆಎಂದು ಹರಿಹಾಯ್ದ ನಾಯಕ್, ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ಜನರುಅವರನ್ನು ಏನು ಮಾಡುತ್ತಾರೆ ಎನ್ನುವುದನ್ನು ಕಾದು ನೋಡಿ ಎಂದರು. ತಿರುಪತಿ ತಿಮ್ಮಪ್ಪನಿಗೆ ಚಿನ್ನದ ಕಿರಿಟ ನೀಡುವವರು ಅನ್ನ ಆಹಾರವಿಲ್ಲದೆ ಸಾಯುತ್ತಿರುವ ಬಡಜನರಿಗೆ ಉಳಿಸಿಕೊಳ್ಳಿ ನಮ್ಮ ದೇಶದಲ್ಲಿ ಭ್ರಷ್ಟಚಾರ, ಜಾತಿಯತೆ ಹೆಂಡ, ಕಳ್ಳದಂಧೆಗಳು ಅವ್ಯಾಹತವಾಗಿದ್ದು ಇದರಿಂದ ದೇಶವನ್ನು ಮುಕ್ತಗೊಳಿಸುವ ಪಣತೊಡಲು ಕರೆ ನೀಡಿದರು.
ವೆಲ್ಫೇರ್ ಪಾರ್ಟಿಆಫ್‍ಇಂಡಿಯಾದ ನಿಕಟಪೂರ್ವರಾಷ್ಟ್ರೀಯಅಧ್ಯಕ್ಷ ಮುಜ್ತಬಾ ಫಾರೂಖ್ ಸಮಾರಂಭದಅಧ್ಯಕ್ಷತೆ ವಹಿಸಿದ್ದರು.
ಮುಖಂಡರಾದಅಕ್ಬರ್ ಅಲಿ ಉಡುಪಿ, ಪ್ರಗತಿಪರ ಚಿಂತಕ ಕೆ. ಎಂ. ಕುನ್ನಿ ಅಬ್ದುಲ್ಲಾ ಮಡಿಕೇರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ತಾಹೀರ್ ಹುಸೇನ್, ಯುವಘಟಕದರಾಜ್ಯಾಧ್ಯಕ್ಷತಾಜುದ್ದೀನ್ ಷರೀಫ್ ಈ ಸಂದರ್ಭದಲ್ಲಿ ಮಾತನಾಡಿದರು.
ವೇದಿಕೆಯಲ್ಲಿ ಕರ್ನಾಟಕ ತಾಂಡ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷೆ ಜಯಲಕ್ಷ್ಮಿಚೌಹಾಣ್, ಜೆ.ಟಿ.ಪಟ್ಟನ್ಕರ್, ನಾಗರಾಜ್ ಶೇಟ್, ಅನ್ವರ್ ಅಲಿ ಕಾಪು, ಉ.ಕ.ಜಿಲ್ಲಾಧ್ಯಕ್ಷ ಯೂನೂಸ್ ರುಕ್ನುದ್ದೀನ್, ಅಬ್ದುಲ್ ಮಜೀದ್ ಕೋಲಾ, ಝಾಹಿದ್ದ ಹುಸೇನ್, ಅಬ್ದುಲ್‍ಅಝೀಝ್, ಸೈಯ್ಯದ್‍ಅಬ್ದುಲ್‍ಕಾದಿರ್‍ರಬ್ಬಾನಿ, ಸೈಯ್ಯದ್‍ಅಬುಲ್ ಆಲಾ ಬರ್ಮಾವರ್ ಮತ್ತಿತರರು ಉಪಸ್ಥಿತರಿದ್ದರು.
ರಿಯಾಝ್‍ಆಹ್ಮದ್ ಹಾಗೂ ಖಮರುದ್ದೀನ್ ಮಷಾಯಿಕ್‍ಕಾರ್ಯಕ್ರಮ ನಿರೂಪಿಸಿದರು. ಉ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೌಕತ್‍ಖತೀಬ್ ಸ್ವಾಗತಿಸಿದರು.

loading...