3ನೇ ಶಾಲಾ ವಾರ್ಷಿಕೋತ್ಸವ ಹಾಗೂ ಪಾಲಕರ ಸಮಾವೇಶ ಯಶಸ್ವಿ

0
21
loading...

ಕನ್ನಡಮ್ಮ ಸುದ್ದಿ-ಗಂಗಾವತಿ : ಪಿ.ಆರ್.ಎ (ಆರ್) ಸಂಸ್ಥೆಯ ಶ್ರೀ ಗುರು ಪುಟ್ಟರಾಜ ಕಿರಿಯ ಪ್ರಾಥಮಿಕ ಶಾಲೆಯ 3ನೇ ವಾರ್ಷಿಕೋತ್ಸವವನ್ನು ಇತ್ತೀಚಿಗೆ ಸಂಭ್ರಮದಿಂದ ಆಚರಿಸಲಾಯಿತು.
ಶಾಲೆಯ ಅಧ್ಯಕ್ಷರಾದ ಮಹಾಬಳೇಶ್ವರ ಹಾಸಿನಾಳ ಖ್ಯಾತ ವಕೀಲರು ಸಲಹೆ ಮೇರೆಗೆ ಈ ಕೆಳಗಿನಂತೆ ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪಿ.ಆರ್.ಎ ಸಂಸ್ಥೆಯ ಕಾರ್ಯದರ್ಶಿಗಳಾದ ಎಸ್.ಬಿ ರೆಡ್ಡಿ ಖ್ಯಾತ ವಕೀಲರು ಕಾರ್ಯಕ್ರಮ ಉದ್ಘಾಟಿಸುತ್ತಾ ಶಾಲೆಯ ಗುಣಾತ್ಮಕ ಬೆಳವಣಿಗೆಗಾಗಿ ಮಾರ್ಗದರ್ಶನವನ್ನು ನೀಡಿದರು ಹಾಗೂ ಶಾಲೆಯಲ್ಲಿ ಉತ್ತಮ ಮೈದಾನ, ನೀರಿನ ಸೌಲಭ್ಯ ಇದ್ದು, ಶಿಕ್ಷಕರು ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕೆಂದು ಹೇಳಿದರು. ಮುಖ್ಯೋಪಾಧ್ಯಾಯರಾದ ಶ್ರೀಮತಿ ಮೇಘನಾ/ರಾಘವೇಂದ್ರ ದೇಸಾಯಿಯವರು ವರದಿವಾಚನ ಮಾಡಿದರು. ವರ್ಷದುದ್ದಕ್ಕೂ ಮಾಡಿದ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆ ಬಗ್ಗೆ ಹಾಗೂ ಶೈಕ್ಷಣಿಕ ಪ್ರವಾಸದ ಬಗ್ಗೆ ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀಮತಿ ಸುವರ್ಣಲತಾ ಮೆಣಸಿಗಿ ಇವರು ಶಾಲೆಯ ಪ್ರಗತಿ ಬಗ್ಗೆ ಶಿಕ್ಷಕರು, ಸಿಬ್ಬಂದಿ, ಪಾಲಕರು ಆಡಳಿತ ಮಂಡಳಿ ಕೊಡುವ ಸಲಹೆ ಸೂಚನೆ ಮೇರೆಗೆ ಶಾಲೆಯ ಛಾಪನ್ನು ಮೂಡಿಸಲು ಕರೆಕೊಟ್ಟರು. ಮಕ್ಕಳ ಏಳ್ಗಿಯೇ ಶಾಲೆಯ ಏಳ್ಗೆ ಎಂದು ಹೇಳಿದರು. ಅತಿಥಿಗಳಾಗಿ ಆಗಮಿಸಿದ್ದ ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳಾದ ಛತ್ರಪ್ಪನವರು ಇಂದಿನ ಶಿಕ್ಷಣದ ಗುಣಮಟ್ಟಕ್ಕೆ ತಕ್ಕಂತೆ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಧೈರ್ಯವಂತ ಸತ್ಪ್ರಜೆಯನ್ನಾಗಿ ಮಾಡಲು ತಿಳಿಸಿದರು. ವೇದಿಕೆಯಲ್ಲಿ ಶಾಲಾ ಸುಧಾರಣಾ ಸಮಿತಿಯ ಹಾಗೂ ಪಿ.ಆರ್.ಎ ಸಂಸ್ಥೆಯ ನಿರ್ದೇಶಕರಾದ ಜಗನ್ನಾಥರಾವ್ ಮತ್ತು ಕೆ. ಶಿವರಾಮ್ ಸಲಹೆ ಸೂಚನೆ ಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಜಲಿಂಗಪ್ಪ ಮೆಣಸಗಿ ಇವರು ವಹಿಸಿದ್ದರು. ನಿರೂಪಣೆಯನ್ನು ಕು|| ರಮೀಜಾ ಮಾಡಿದರು. ಸ್ವಾಗತ ಮತ್ತು ವಂದನಾರ್ಪಣೆಯನ್ನು ಶ್ರೀಮತಿ ಶಶಿರೇಖಾ ಮಾಡಿದರು. ಈ ಸಂದರ್ಭದಲ್ಲಿ ಶಾಲಾ ಸಿಬ್ಬಂದಿ ವರ್ಗ, ಆಯಾ ಶಕುಂತಲಾ ಇದ್ದರು.

loading...