ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

0
72
loading...

ಕನ್ನಡಮ್ಮ ಸುದ್ದಿ-ಹಾನಗಲ್ಲ : ನಾನು ಎಂಬ ಅಹಂ ತೊರೆದು ಸಮಾನತೆಯ ದೃಷ್ಠಕೋನ ಬೆಳೆಸಿಕೊಂಡಾಗ ಜೀವನ ನೆಮ್ಮದಿಯಾಗಿರಲು ಸಾಧ್ಯವಿದೆ. ಎಂದು ಕೇಂದ್ರ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪುರಸ್ಕøತೆ ಅಂಕೋಲಾದ ಜಾನಪದ ಕಲಾವಿದೆಯಾದ ಸುಕ್ರಿ ಬೊಮ್ಮಗೌಡ ಅಭಿಪ್ರಾಯಪಟ್ಟರು.
ಶನಿವಾರ ಇಲ್ಲಿನ ರೋಶನಿ ಸಮಾಜ ಸೇವಾ ಸಂಸ್ಥೆ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಹಾವೇರಿಯ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಹೇಮಾ ಸಜ್ಜನರ ಮಾತನಾಡಿ, ಇಡೀ ಕುಟುಂಬದ ಸ್ವಾಸ್ಥ್ಯಕ್ಕೆ ಸಮಯ ಇಲ್ಲದಂತೆ ದುಡಿಯುವ ನಮಗೆ ಪ್ರತಿ ದಿನವೂ ಮಹಿಳಾ ದಿನಾಚರಣೆ ಎಂದರು.
ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಸರಳಾ ವಿ. ಜಾಧವ ಮಾತನಾಡಿ, ಹೆಣ್ಣು ಜನಿಸಿತೆಂದು ವೇದನೆ ಪಡುವ ಕಾಲವೀಗ ದೂರಾಗಿದೆ. ಹೆಣ್ಣುಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉತ್ಸಾಹವು ಕಾಣುತ್ತಿರುವುದು ಸಂತಸದ ಸಂಗತಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಇಲ್ಲಿನ ಪುರಸಭೆಯ ಅಧ್ಯಕ್ಷೆ ಯಲ್ಲಮ್ಮ ಕಂಚಿಗೊಲ್ಲರ, ಭಯ, ಹಿಂಜರಿಕೆಯು ಮಹಿಳೆಯರನ್ನು ಅವಕಾಶದಿಂದ ದೂರ ಮಾಡುತ್ತಿದೆ. ಆತ್ಮವಿಶ್ವಸವಿದ್ದಲ್ಲಿ ಯಾವ ಕ್ಷೇತ್ರವೂ ಕಠಿಣವಲ್ಲ ಎಂದರು.
ಸಂಸ್ಥೆಯ ನಿರ್ದೆಶಕಿ ಸಿ.ಡಿಂಪಲ್ ಡಿಸೋಜಾ ಮಾತನಾಡಿ, ಮಹಿಳೆ ಮತ್ತು ಮಕ್ಕಳ ಹಕ್ಕುಗಳ ಜಾಗೃತಿ ಪರಿಣಾಮಕಾರಿಯಾಗಿ ಮೂಡಬೇಕಾಗಿದೆ. ಇದಕ್ಕೆ ಸಂಘ-ಸಂಸ್ಥೆಗಳು ಅರ್ಪಣಾ ಭಾವದಿಂದ ಕೆಲಸ ಮಾಡಬೇಕಾಗಿದೆ ಎಂದರು.
ಆದರ್ಶ ತಾಲೂಕು ಒಕ್ಕೂಟದ ಅಧ್ಯಕ್ಷೆ ಗಮನವ್ವ ಗಿರಿಸಿನಕೊಪ್ಪ ಅಧ್ಯಕ್ಷತೆ ವಹಿಸಿದ್ದರು, ಮಂಗಳೂರ ಶಾಂತಿ ಸಂದೇಶ ಟ್ರಸ್ಟನ ನಿರ್ದೆಶಕಿ ಸಿ.ದುಲ್ಫಿನ್ ಕ್ರಾಸ್ತ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಇದಕ್ಕೂ ಮುನ್ನ ಇಲ್ಲಿನ ಗಾಂಧಿವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಆದರ್ಶ ಮಹಿಳಾ ಒಕ್ಕೂಟದ ನೂರಾರು ಮಹಿಳೆಯರಿಂದ ಜಾಥಾ ನಡೆಯಿತು.

loading...