ಆಯುರ್ವೇದ ಮತ್ತು ಯೋಗದ ಮಹತ್ವ ಅರಿತುಕೊಳ್ಳಬೇಕು

0
130
loading...

ಕನ್ನಡಮ್ಮ ಸುದ್ದಿ-ಧಾರವಾಡ : ಆಧುನಿಕ ಬದುಕಿನಲ್ಲಿಯೂ ಸಹ ಆಯುರ್ವೇದವನ್ನು ನಾವು ಅಳವಡಿಸಿಕೊಂಡಲ್ಲಿ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಡಾ.ಅನಿತ ಕಡಗದ ಹೇಳಿದರು.
ಆರ್.ಎಲ್.ಎಸ್ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ “ವಿಶೇಷ ವಿಕಲಚೇತನರಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ” ಇದಕ್ಕೆ ಪೂರಕವಾಗಿ ವಿಕಲಚೇತನರಿಗೆ ಇರುವ ವ್ಯದ್ಯಕೀಯ ಪರಿಹಾರಗಳ ಕುರಿತು ಮಾತನಾಡಿ, ಆಯುರ್ವೇದ ಮತ್ತು ಯೋಗ ತಜ್ಞರು ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿದ್ದ ವೈದ್ಯ ಪದ್ಧತಿ ಆಯುರ್ವೇದ ಹಾಗೂ ಯೋಗ ಅಳವಡಿಸಿಕೊಂಡಿದ್ದರು. ಆಯುರ್ವೇದ ಮತ್ತು ಯೋಗದ ಮಹತ್ವವನ್ನು ಕುರಿತು ಜನರಿಗೆ ತಿಳಿಸಿಕೊಡಬೇಕು. ಪಾಶ್ಚಾತ್ಯ ರಾಷ್ಟ್ರಗಳು ಭಾರತೀಯ ಆಯುರ್ವೇದ ಪದ್ಧತಿಗೆ ಮಹತ್ವ ನೀಡುತ್ತಿದ್ದಾರೆ ಎಂದರು.
ಡಾ. ಆಕಾಶ ಎಸ್. ಕೆಂಬಾವಿ ಮಾತನಾಡಿ, ಆಯುರ್ವೇದ ವೈದ್ಯರು, ಭಾರತವು ಪ್ರಾಚೀನ ಕಾಲದಿಂದಲೂ ವ್ಯಕ್ತಿತ್ವ ವಿಕಸನ ಮತ್ತು ಆರೋಗ್ಯದಲ್ಲಿ ಮಹತ್ವದ ಸ್ಥಾನವನ್ನು ಹೊಂದಿದೆ. ಆಯುರ್ವೇದದ ಮೂಲಕ ಆಹಾರ ಸೇವನೆ ಮಾಡಿದರೆ ಇಂದು ಬರುವ ವಿವಿಧ ರೋಗಗಳಿಂದ ನಾವು ದೂರಾಗಬಹುದು. ವಿದೇಶಗಳಲ್ಲಿಯೂ ನಮ್ಮ ದೇಶಿಯ ವೈದ್ಯ ಪದ್ಧತಿಯಾದ ಆಯುರ್ವೇದವು ತುಂಬಾ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ ಎಂದರು.
ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಕರಣ ದೊಡ್ಡವಾಡ ಅಧ್ಯಕ್ಷತೆವಹಿಸಿದ್ದರು. ಡಾ. ಆಶಾ ನೆರ್ವಿ, ಅಶೋಕ ಜೆ.ಶಿಂಗೆ ಉಪಸ್ಥಿತರಿದ್ದರು. ವ್ಹಿ.ಪಿ.ಹಿರೇಮಠ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಎಸ್.ಎಸ್.ಜಂಬಗಿ ವಂದಿಸಿದರು. ಶ್ರೀಮತಿ ಯು.ಆಯ್.ಮಠಪತಿ ನಿರೂಪಿಸಿದರು.

loading...