ಆರ್.ಸಿ.ಯು ಕುಲಸಚಿವರ ಅಮಾನತ್ತಿಗೆ ಬದ್ನೂರ ಆಗ್ರಹ

0
44
loading...

ಬಾಗಲಕೋಟ: ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಕುಲಸಚಿವರು ಖೊಟ್ಟಿ ದಾಖಲೆ ಸೃಷ್ಠಿಸಿ ಹುದ್ದೆಯನ್ನು ಅಲಂಕರಿಸಿದ್ದು ಅವರನ್ನು ಕೂಡಲೇ ಸೇವೆಯಿಂದ ಅಮಾನತು ಗೊಳಿಸಬೇಕೆಂದು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಬದ್ನೂರ ಹೇಳಿದರು.
ಅವರು ಇಂದಿಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತ ನಾಡುತ್ತಾ, ರಾಣಿ ಚನ್ನಮ್ಮ ವಿಶ್ವವಿದ್ಯಾಲ ಯದಲ್ಲಿ ಸೇವೆ ಸಲ್ಲಿಸು ತ್ತಿರುವ ಸಿ.ಎಮ್. ತ್ಯಾಗರಾಜ ಅವರು 2011 ರಲ್ಲಿ ವಿಶ್ವವಿದ್ಯಾಲಯದಲ್ಲಿ ಪ್ರೋಪೆಸರ್ ಆಗಿ ಸೇವೆಗೆ ಹಾಜರಾಗಿರುತ್ತಾರೆ. ವಿಶ್ವವಿದ್ಯಾಲಯಕ್ಕೆ ನೇಮಕಾತಿ ಸಂದರ್ಭದಲ್ಲಿ ವಿಶ್ವವಿದ್ಯಾ ಯಕ್ಕೆ ನೀಡಿದ ದಾಖ ಲಾತಿಯಲ್ಲಿ ನ್ಯೂನತೆಗಳು ಕಂಡು ಬಂದಿದೆ ಎಂದು ಬದನ್ನೂ ತಿಳಿಸಿದರು.
ಎಂಬಿಎ ಮತ್ತು ಎಂಎ (ಅರ್ಥಶಾಸ್ತ್ರ) ಪದವಿ ಆಧಾರದ ಮೇಲೆ ಪ್ರೊಫೇಸರ್ ಹುದ್ದೆಯನ್ನು ಪಡೆ ದುಕೊಂಡಿ ದ್ದಾರೆ. ಆದರೆ ತ್ಯಾಗರಾಜ ಪದವಿ ಪಡೆದ ವಿಶ್ವವಿದ್ಯಾಲಯ ಗುರು ಘಾಸಿದಾಸ ವಿಶ್ವವಿದ್ಯಾಲಯ ಬಿಸ್ಲಾಪುರ ಜಿಲ್ಲೆ ಕೋನಿ (ಚತ್ತೀಸಗಡ). ಮಾಹಿತಿ ತಿಳಿಸಿರುವಂತೆ ಸಿ.ಎಮ್. ತ್ಯಾಗರಾಜ ವಿಶ್ವ ವಿದಾ ್ಯಲಯದಲ್ಲಿ ಎಮ್.ಎ .ಪದ ವಿಯನ್ನು ಪಡೆದಿರು ವುದಿಲ್ಲ ವೆಂದು ಮತ್ತು ಎಂಬಿಎ ಪದವಿಯನ್ನು 2008 ರಲ್ಲಿ ಪಾಸಾಗಿದಾ ್ದರೆಂದು ತಿಳಿಸಿ ರುತ್ತಾರೆ ಎಂದು ಹೇಳಿದರು.
ಸಿ.ಎಮ್.ತ್ಯಾಗರಾಜ 2005 ರಲ್ಲಿ ಎಮ್.ಬಿ.ಎ. ಮತ್ತು ಎಮ್.ಎ (ಅರ್ಥ ಶಾಸ್ತ್ರ) ಪದವಿಯ ದಾಖಲಾತಿಗಳನ್ನು ತಿರುಚಿ ವಿಶ್ವವಿದ್ಯಾಯಲಕ್ಕೆ ಸಲ್ಲಿಸಿ ಪ್ರೋಫೆಸರ್ ಹುದ್ದೆ ಯನ್ನು ಪಡೆದುಕೊಂಡಿದ್ದಾರೆ. ಪ್ರೋಫೆಸರ್ ಹುದ್ದೆಗೆ 5 ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಅನುಭವ ಇರಬೆ ೀಕೆಂದು ನಿಯಮ ವಿದ್ದರೂ ತ್ಯಾಗರಾಜ ಅವರು ಸೇವೆಸಲಿ ್ಲಸಿದ ಅನುಭವ ಇಲ್ಲದಿದ್ದರೂ ಸೇವೆಗೆ ನೇಮಕಾತಿ ಮಾಡಿಕೊಂ ಡಿರುವುದು ವಿಶ್ವ ವಿದ್ಯಾಲ ಯಗಳ ನಿಯಮಗಳ ಪ್ರಕಾರ ಕಾನೂನು ಬಾಹಿರವಾಗಿದೆ ಎಂದು ಆಪಾದಿಸಿದರು.
ಕೂಡಲೇ ಪ್ರೋಫೆಸರ್ ಸಿ.ಎಂ.ತ್ಯಾಗರಾಜ ಅವ ರನ್ನು ಸೇವೆಯಿಂದ ಅಮಾನತ ುಗೊಳಿಸಿ ಮತ್ತು ಖೊಟ್ಟಿ ದಾಖಲೆ ಸೃಷ್ಠಿಸಿದ ಅಪರಾಧದ ಮೇಲೆ ವಿಶ್ವವಿದ್ಯಾಲ ಯಯವರು ಪ್ರಕರಣ ದಾಖಲಿಸಿ ಬಂಧಿ ಸಬೇಕೆಂದು ಆಗ್ರಹಿಸಿದರು.
ತೋಟಗಾರಿಕೆ ವಿವಿ ಯಲ್ಲಿ ನಡೆದಿರುವ ಅಕ್ರಮ ನೇಮಕಾತಿ ಕುರಿತು ಸ್ಥಳೀಯ ಶಾಸಕರು ಸೇರಿ ಜಿಲ್ಲೆಯ ಶಾಸಕರು ಸುಮ್ಮನಿರು ವುದನ್ನು ನೋಡಿದರೆ ಭಾರಿ ಅವ್ಯವಹಾರ ನಡೆದಿರುವುದು ಕಂಡು ಬರುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಪ್ಪಾಲಾಲ ಪಿಂಜಾರ, ಗಿಡ್ಡಪ್ಪ ವಡ್ಡರ, ಆತ್ಮಾರಾಮ ನೀಲನಾಯಕ, ಬಸವರಾಜ ಅಂಬಿಗೇರ ಉಪಸ್ಥಿತರಿದ್ದರು.

loading...