ಇಂದು ಶ್ರೀ ಕಟ್ಟಿ ದುರ್ಗಾದೇವಿ ಹಾಗೂ ನಾಗದೇವತೆ ಮೂರ್ತಿ ಪುನರ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ

0
43
loading...

ಕನ್ನಡಮ್ಮ ಸುದ್ದಿ-ಕುಷ್ಟಗಿ : ಪಟ್ಟಣದ ಪುರವಾಸಿ ಆರಾಧ್ಯ ದೇವಿ ಶ್ರೀ ಕಟ್ಟಿ ದುರ್ಗಾದೇವಿಯ ಹಾಗೂ ನಾಗದೇವತೆ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಬುಧವಾರ ಮಾ.22 ರಂದು ನಡೆಯಲಿದೆ.
ಬೆಳಗಿನಜಾವ ಬುಧವಾರ ಬೆಳಿಗ್ಗೆ 5 ರಿಂದ 6-30 ರ ಸಮಯದಲ್ಲಿ ಬ್ರಾಹ್ಮಿ ಮೂಹೂರ್ತದಲ್ಲಿ ಶ್ರೀ ದೇವಿಯ ಪ್ರತಿಷ್ಠಾಪನೆ, ಪೀಠಪೂಜೆ, ಪ್ರಾಣ ಪ್ರತಿಷ್ಠಾಪನೆ, ನೇತ್ರ ಪ್ರತಿಷ್ಠಾಪನೆ, ಕುಷ್ಮಾಂಡ ಕುಂಭಾಭಿಷೇಕ, ಹೋಮ, ಪಂಚಾಭೃತ ಅಭಿಷೇಕÀ, ಅಲಂಕಾರ ಪೂಜೆ, ದುರ್ಗಾಹೋಮ, ಚಂಡಿ ಹೋಮ, ಗಾಯಿತ್ರಿ ಹೋಮ, ಅಗ್ನಿ ದರ್ಶನ, ಪುರ್ಣಾಹುತಿ, ಮಂಗಳಾರತಿ ನೆರವೇರಿಸಲಾಗುವುದು.
ಸಕಲ ಪೂಜಾ ಕಾರ್ಯಕ್ರಮದ ನೇತೃತ್ವವನ್ನು ಶ್ರೀ ವೀರಭ್ರಹ್ಮೇಂದ್ರ ಸ್ವಾಮಿಗಳು ವಿಶ್ವಕರ್ಮ ಗುರುಪೀಠ ಲೇಬಗಿರಿಶ್ರೀಗಳು, ನಾಗಲಿಂಗಾಚಾರ, ದಿವಾಕರ ಸ್ವಾಮಿಗಳು, ಶ್ರೀ ಕುಮಾರಸ್ವಾಮಿಗಳು ವಹಿಸಲಿದ್ದು, ಸಾನಿಧ್ಯವನ್ನು ಶ್ರೀ ಕರಿಬಸವಶಿವಾಚಾರ್ಯ ಸ್ವಾಮಿಗಳು ಮದ್ದಾನಿ ಹಿರೇಮಠ, ಶ್ರೀ ಶಿವಸಿದ್ದೇಶ್ವರ ಶ್ರೀಗಳು ಕನಕಗುರುಪೀಠ ಬಾದಿಮನಾಳ ಶಾಖಾಮಠ, ಶಿವಾನಂದಯ್ಯ ಗುರುವಿನ ಕೊರಡಕೇರಿ, ಶರಣಯ್ಯ ಗುರುವಿನ ವಹಿಸುವರು. ನಂತರ ಸಕಲ ಸದ್ಭಕ್ತರಿಗೆ ತೀರ್ಥ ಪ್ರಸಾದ ಕಾರ್ಯಕ್ರಮವು ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಸದ್ಬಕ್ತರು ಆಗಮಿಸಿ ಶ್ರೀ ದೇವಿಯ ಅನುಗ್ರಹಕ್ಕೆ ಎಲ್ಲಾ ಸಕಲ ಭಕ್ತರು ಪಾಲ್ಗೊಂಡು ಕಟ್ಟಿ ದುರ್ಗಾದೇವಿ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಸಮಿತಿಯ ಸಂಗಪ್ಪ ಪಂಚಮ, ಕೊಳ್ಳಪ್ಪ ಬೂದ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...