ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ವಿಶ್ವಾಸದಿಂದ ಪರೀಕ್ಷೆಗಳನ್ನು ಎದುರಿಸಿ: ಶಿಕ್ಷಕಿ

0
40
loading...

ಕನ್ನಡಮ್ಮ ಸುದ್ದಿ-ಮುಂಡರಗಿ : ಎಸ್‍ಎಸ್‍ಎಲ್‍ಸಿಯು ವಿದ್ಯಾರ್ಥಿ ಜೀವನದ ಒಂದು ನಿರ್ಣಾಯಕ ಹಂತವಾಗಿದ್ದು, 10ನೇ ತರಗತಿಯಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳು ತುಂಬಾ ವಿಶ್ವಾಸದಿಂದ ವಾರ್ಷಿಕ ಪರೀಕ್ಷೆಗಳನ್ನು ಎದುರಿಸಬೇಕು ಎಂದು ಬಿದರಳ್ಳಿ ಸರಕಾರಿ ಪ್ರೌಢ ಶಾಲೆಯ ಶಿಕ್ಷಕಿ ಭಾಗ್ಯಲಕ್ಷ್ಮಿ ಇನಾಮತಿ ಸಲಹೆ ನೀಡಿದರು.
ತಾಲ್ಲೂಕಿನ ಬಿದರಳ್ಳಿ ಸರಕಾರಿ ಪ್ರಾಢ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಹಾಗೂ ಆಪ್ತ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಎಸ್‍ಎಸ್‍ಎಲ್‍ಸಿ ಮುಗಿದ ನಂತರ ವಿದ್ಯಾರ್ಥಿಗಳಿಗೆ ಹಲವಾರು ವೃತ್ತಿಯಾದಾರಿತ ಕೋರ್ಸುಗಳು ಲಭ್ಯವಿವೆ. ವಿದ್ಯಾರ್ಥಿಗಳು ಹಾಗೂ ಪಾಲಕರು ವಿವೇಚನೆಯಿಂದ ಕೋರ್ಸುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಜೀವನದಲ್ಲಿ ಸರಕಾರಿ ನೌಕರಿಯೆ ದೊರೆಯಬೇಕು ಎಂದು ಕಾಯದೆ ಸ್ವತಂತ್ರ ಉದ್ಯೋಗವನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಶಿಕ್ಷಕ ಆರ್.ಆರ್.ಅಥಣಿ ಮಾತನಾಡಿ, ಜೀವನದಲ್ಲಿ ಎಲ್ಲರಿಗೂ ಹಲವಾರು ಕಷ್ಟ ಕೊಟಲೆಗಳು ಬರುತ್ತವೆ. ವಿದ್ಯಾರ್ಥಿಗಳು ಕಷ್ಟ ಸುಖಗಳನ್ನು ಸಮಚಿತ್ತದಿಂದ ಎದುರಿಸುವುದನ್ನು ಕಲಿಯಬೇಕು. ಸುಖಃ ಬಂದಾಗ ಹಿಗ್ಗದೆ, ದುಖಃ ಬಂದಾಗ ಕುಗ್ಗದೆ ಜೀವನದಲ್ಲಿ ಮುನ್ನುಗ್ಗುವುದನ್ನು ಕಲಿಯಬೇಕು. ಅಂತಹ ವಿದ್ಯಾಥಿಗಳು ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧಿಸುತ್ತಾರೆ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಕಲಿಕೆಗೆ ಕೊನೆ ಎಂಬುವುದಿಲ್ಲ. ನಿರಂತರವಾಗಿ ಕಲಿಕೆಯಲ್ಲಿ ತೊಡಗುವ ವಿದ್ಯಾರ್ಥಿಗಳು ಮಾತ್ರ ಜೀವನದಲ್ಲಿ ಮುಂದೆ ಬರುತ್ತಾರೆ. ಆದ್ದರಿಂದ ವಿದ್ಯಾರ್ಥಿ ಜೀವನದಲ್ಲಿ ಮಕ್ಕಳು ಸೋಮಾರಿಗಳಾಗದೆ ಸದಾ ಅಧ್ಯಯನ ಶೀಲರಾಗಿರಬೇಕು ಎಂದು ತಿಳಿಸಿದರು.
ಮುಖ್ಯೋಪಾಧ್ಯಾಯ ಎಸ್.ವಿ.ಚೌದರಿ ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಶಿಕ್ಷಕರಾದ ಎಚ್.ಶಶಿರೇಖಾ, ವೀರೇಶ ಅಡರಗಟ್ಟಿ, ಬಸವರಾಜ ನೀಲಗಾರ ಮೊದಲಾದವರು ಹಾಜರಿದ್ದರು. ಶಿಕ್ಷಕರಾದ ವಿ.ಎಫ್.ಮೆಣಸಿನಕಾಯಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು

loading...