ಜಮುರಾ ನಾಟಕೋತ್ಸವ ಹಾಗೂ ಜಾನಪದ ಕಾರ್ಯಕ್ರಮದ ಸಮಾರೋಪ ಸಮಾರಂಭ

0
29
loading...

ಕನ್ನಡಮ್ಮ ಸುದ್ದಿ-ಕುಷ್ಟಗಿ : ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಹಾಗೂ ಸಮೃದ್ಧಿ ವಿವಿದೋದ್ದೇಶಗಳ ಅಭಿವೃದ್ಧಿ ಸೇವಾ ಸಂಸ್ಥೆ(ರಿ) ಕುಷ್ಟಗಿ ಇವರುಗಳ ಸಹಯೋಗದಲ್ಲಿ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ‘ಜಮುರಾ ನಾಟಕೋತ್ಸವ ಕಾರ್ಯಕ್ರಮ’ ಹಾಗೂ ಜಾನಪದ ಕಾರ್ಯಕ್ರಮದ ಸಮಾರೋಪ ಸಮಾರಂಭವು ದೋಟಿಹಾಳ ಗ್ರಾಮದ ಶ್ರೀ ಅವಧೂತ ಸುಖಮುನಿ ದೇವಸ್ಥಾನದ ಆವರಣದಲ್ಲಿ ಶನಿವಾರದಂದು ನೆರವೇರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ.ಪಂ. ಸದಸ್ಯ ಕೆ. ಮಹೇಶ ನೆರವೇರಿಸಿ ಮಾತನಾಡಿ ಮಠ-ಮಾನ್ಯಗಳು ಶ್ರೇಷ್ಠ ಶರಣರ ಸಂದೇಶಗಳನ್ನು ನಾಟಕ ಪ್ರದರ್ಶನದ ಮೂಲಕ ಜನತೆಗೆ ಸಾದರಪಡಿಸುತ್ತಿರುವ ಮುರುಘಾಮಠದ ಕಾರ್ಯ ಶ್ಲಾಘನೀಯ. ಟಿವಿ ಮಾದ್ಯಮದಿಂದ ಜನತೆ ಇಂದು ತಮ್ಮ ಮನುಷತ್ವದ ಜೊತೆಗೆ ಸ್ವಾತಂತ್ರವನ್ನು ಕಳೆದುಕೊಳ್ಳುತ್ತಿದ್ದಾರೆ. ಕೇವಲ ಟಿವಿಯಲ್ಲಿ ಬರುವ ದಾರವಾಹಿಗಳಿಂದ ಇಂದಿನ ಸ್ತ್ರೀಯರು ಮಾರುಹೋಗುತ್ತಿರುವುದು ವಿಷಾಧನೀಯ. ಟಿವಿ ಪರದೆಗೆ ಅಂಟಿಕೊಳ್ಳದೇ ಇಂಥಹ ಸಾಮರಸ್ಯ ಸಾರುವ ನಾಟಕಗಳನ್ನು ನೋಡುವತ್ತ ಇಂದಿನ ಸ್ತ್ರೀ ಪುರುಷರು ಮನಸು ಮಾಡಬೇಕು. ಮಾನವೀಯತೆಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಅಲ್ಲದೇ ಇಲಾಖೆಯವರು ಇಂಥಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಂಘ ಸಂಸ್ಥೆಗಳಿಗೆ ಸಹಾಯಧನ ನೀಡುತ್ತಾ ನಮ್ಮ ನಾಡಿನ ಕಲೆ ಸಂಸ್ಕøತಿಯನ್ನು ಎತ್ತಿ ಹಿಡಿಯುತ್ತಿರುವುದು ಸ್ವಾಗತಾರ್ಹವಾಗಿದೆ ಎಂದು ತಿಳಿಸಿದರು.
ಕುಷ್ಟಗಿ ಪಟ್ಟಣ ಸಹಕಾರಿ ಬ್ಯಾಂಕ್ ಮಾಜಿ ಅಧ್ಯಕ್ಷ ಲಾಡಸಾಬ ಕೊಳ್ಳಿ ಮಾತನಾಡಿ ಎರಡು ದಿನಗಳ ಕಾಲ ಸಮಾನತೆಯ ನಾಟಕವನ್ನು ಪ್ರದರ್ಶನ ಮಾಡಿ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ. ದೋಟಿಹಾಳ ಗ್ರಾಮವು ಜಾತ್ಯಾತೀತ ಮನೋಭಾವವುಳ್ಳ ಗ್ರಾಮವಾಗಿದ್ದು ಇಂಥಹ ಪ್ರದೇಶದಲ್ಲಿ ನೂರಾರು ಸಂಖ್ಯೆಯಲ್ಲಿ ಜನತೆ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಮಾನತೆಗೆ ಹಾಗೂ ಭಾವೈಕ್ಯತೆಗೆ ಹಿಡಿದ ಕನ್ನಡಿಯಾಗಿದೆ. ಇಂಥಹ ಅನೇಕ ಕಾರ್ಯಕ್ರಮಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಹಮ್ಮಿಕೊಳ್ಳಬೇಕೆಂದು ಆಶಯ ವ್ಯಕ್ತ ಪಡಿಸಿದರು. ಇದೇ ಸಂದರ್ಭದಲ್ಲಿ ನಿ. ಉಪನ್ಯಾಸಕ ಕೆ.ವೈ ಕಂದಕೂರ ಮಾತನಾಡಿದರು.
ಈ ಸಂದರ್ಭದಲ್ಲಿ ಸಮೃದ್ಧಿ ಸಂಸ್ಥೆಯ ಕಾರ್ಯದರ್ಶಿ ನಬಿಸಾಬ ಕುಷ್ಟಗಿ, ಗ್ರಾ.ಪಂ. ಸದಸ್ಯ ಗುರುಸಿದ್ದಯ್ಯ ಮಳಿಮಠ, ಪಿಡಿಓ ರಾಮಣ್ಣ, ಶಿವನಗೌಡ, ಶಂಕರ ವಿಎಸ್.ಎಸ್.ಎನ್, ಮೋಹನಲಾಲ ಜೈನ್, ಅಡಿವೆಪ್ಪ ಕುಷ್ಟಗಿ, ಹರೀಶ ಸಮತಾ, ದೊಡ್ಡನಗೌಡ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಇದೇ ವೇಳೆ ಕಲಾವಿದ ಬಸವರಾಜ ಉಪ್ಪಲದಿನ್ನಿಯವರಿಂದ ಜಾನಪದ ಕಾರ್ಯಕ್ರಮ ನೆರವೇರಿಸಿದರು. ಸ್ವಾಗತವನ್ನು ಹೆಚ್.ಕೆ.ದೋಟಿಹಾಳ, ವಂದನಾರ್ಪಣೆ ಮೈಬೂಬಸಾಬ ನೆರವೇರಿಸಿದರು.
ನಂತರ ಜಮುರಾ ಕಲಾಲೋಕ ಮುರುಘಾಮಠ ಚಿತ್ರದುರ್ಗ ಇವರಿಂದ ‘ಹಳ್ಳಿ ಚಿತ್ರ’ ನಾಟಕ ಪ್ರದರ್ಶನಗೊಂಡು ಜನಮನ ರಂಜಿಸಿತು. ಕಾರ್ಯಕ್ರಮದಲ್ಲಿ ಸಾವಿರಾರು ಗ್ರಾಮಸ್ಥರು ಭಾಗವಹಿಸಿದ್ದರು.

loading...