ಮುಂದಿನ ತಿಂಗಳಿಂದ ಹೆಚ್ಚುವರಿ ಅಕ್ಕಿ ವಿತರಣೆ: ಸಚಿವ ಖಾದರ್

0
24
loading...

ಕನ್ನಡಮ್ಮ ಸುದ್ದಿ-ಬೆಳಗಾವಿ:18 ರಾಜ್ಯ ಬಜೆಟ್‍ನಲ್ಲಿ ಅನ್ನಭಾಗ್ಯ ಯೋಜನೆಯಡಿ 2 ಕೆಜಿ ಅಕ್ಕಿಯನ್ನು ಹೆಚ್ಚುವರಿ ಮಾಡಿರುವ ಸರ್ಕಾರದ ಯೋಜನೆಯನ್ನು ಮುಂದಿನ ತಿಂಗಳಿನಿಂದ ಜಾರಿಗೊಳಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಹೇಳಿದರು.
ನ್ಯೂ ಸರ್ಕಿಟ್ ಹೌಸ್‍ನಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಜನರ ಅಪೇಕ್ಷೆಯ ಮೇರೆಗೆ 2 ಕೆಜಿಗೆ ಹೆಚ್ಚಿಸಿದ ಅಕ್ಕಿಯಿಂದ ಆಗುವ ಹೆಚ್ಚುವರಿ ಹಣಕಾಸನ್ನು ರಾಜ್ಯ ಸರ್ಕಾರವೇ ಬರಿಸಲಿದೆ ಎಂದು ಹೇಳಿದ ಅವರು, ಗ್ರಾಮೀಣ ಭಾಗದ ಜನರಿಗೆ ಗ್ಯಾಸ್ ಇಲ್ಲದವರಿಗೆ 3 ಲೀ. ಸೀಮೆಎಣ್ಣೆ ಇನ್ನೂ ಗ್ಯಾಸ್ ಇದ್ದವರಿಗೆ ಸೀಮೆಎಣ್ಣೆ ರದ್ದು ಗೊಳಿಸಬೇಕೆಂದು 1995 ರಲ್ಲಿ ಫಾಲಿಸಿಯಾಗಿದೆ. ಆದರೆ ಕೆರೋಸಿಲ್ ಮುಕ್ತ ರಾಷ್ಟ್ರವನ್ನಾಗಿಸಬೇಕೆಂದು ತಿರ್ಮಾನಿ ಉಜ್ವಲ ಯೋಜನೆ ಜಾರಿ ತಂದು ಇದೀಗ ಗ್ಯಾಸ್ ಇದ್ದವರಿಗೂ ಸಹ 1ಲೀ. ಸೀಮೆಎಣ್ಣೆ ವಿತರಿಸಲಾಗುವುದು ಎಂದರು.
ಮಲೆನಾಡು ಗ್ರಾಮೀಣ ಭಾಗದ ಜನರನ್ನು ಪರಿಗಣಿಸಿ ಈ ಯೋಜನೆ ಜಾರಿ ಗೊಳಿಸಲಾಗಿದೆ. ಅನಿಲ ಭಾಗ್ಯ ಯೋಜನೆಯಡಿ ಗ್ಯಾಸ್ ವಿತರಿಸಲಾಗುವುದು. ಸೀಮೆಎಣ್ಣೆ ಬೇಡವಾದವರಿಗೆ ಉಚಿತವಾಗಿ ಎಲ್‍ಇಡಿ ಬಲ್ಬನ್ನು ಕೊಡಲಾಗುತ್ತದೆ. ಇನ್ನೂ ಕೆರೊಸಿಲ್ ಪಡೆಯದವರು ನ್ಯಾಯಬೆಲೆ ಅಂಗಡಿಯಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.
ಅನ್ನಭಾಗ್ಯ ಯೋಜನೆಯಡಿ ಕೇವಲ ಬಿಪಿಲ್ ಕಾರ್ಡ್‍ನವರಿಗಲ್ಲದೆ ಸಂಘಸಂಸ್ಥೆಗಳು, ವೃದ್ಧಾಶ್ರಮ, ಅನಾಥಾಲಯ, ಎಚ್‍ಐವಿ ಪೀಡಿತ ಸಂಘಸಂಸ್ಥೆಗಳು ಇತರ ಸೇವೆಸಂಸ್ಥೆಗಳಿಗೂ ವಿತರಿಸಲಾಗುವುದು. ಪ್ರತಿ ವ್ಯಕ್ತಿಗೆ ತಿಂಗಳಿಗೆ 15 ಕೆಜಿ ಅಕ್ಕಿಯನ್ನು ಹಾಗೂ ಆರು ತಿಂಗಳಿಗೊಮ್ಮೆ ಉಚಿತವಾಗಿ ದಾಸೋಹ ಯೋಜನೆಯಡಿ ನೀಡಲಾಗುತ್ತದೆ ಎಂದರು.
ಜಿಲ್ಲೆಯಲ್ಲಿ 8.58 ಸಾವಿರ ಬಿಪಿಎಲ್ ಕಾರ್ಡ್‍ನವರಿದ್ದಾರೆ. ಬಿಪಿಎಲ್ ಹೆಸರಲ್ಲಿ ಅನ್ನಭಾಗ್ಯ ಯೋಜನೆಯಲ್ಲಿ ಮೋಸವಾಗುತ್ತಿರುವುದನ್ನು ತಡೆಯುವ ಸಲುವಾಗಿ ಕೂಪನ್ ಸಿಸ್ಟಂನ್ನು ಜಾರಿಗೆ ತರಲಾಗುತ್ತಿದೆ. ಈ ಕೂಪನ್ ಸಿಸ್ಟಂ ನಿಂದ ಜಿಲ್ಲೆಯಲ್ಲಿ 15 ರಿಂದ 20 ಸಾವಿರ ಬಿಪಿಲ್ ಕಾರ್ಡ ದಾರರು ಹೆಚ್ಚಲಿದ್ದಾರೆ. ಕೂಪನ್ ಬಳಕೆಯಿಂದ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲಾಗುತ್ತದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಪ್ರತಿಯೊಂದು ನ್ಯಾಯಬೆಲೆ ಅಂಗಡಿಯನ್ನು ಸೇವಾಸಿಂಧು ಕೇಂದ್ರವನ್ನಾಗಿಸಲಾಗುತ್ತಿದೆ. ಜನಸಾಮಾನ್ಯರು ತೊಂದರೆಯದಲ್ಲಿ ನ್ಯಾಯಬೆಲೆ ಅಂಗಡಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ದಿನಗೂಲಿ ಕಾರ್ಮಿಕರು, ಆಟೋರಿಕ್ಷಾದವರು, ಗ್ರಾಮೀಣ ಭಾಗದಿಂದ ಬಂದು ಶಿಕ್ಷನ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ, ರಸ್ತೆ ಬದಿಯ ವ್ಯಾಪಾರಿಗಳಿಗೆ ಉತ್ತಮ ಮಟ್ಟದ ಆಹಾರ ನೀಡುವ ಸಲುವಾಗಿ ಸರ್ಕಾರ ಕಡಿಮೆ ದರದಲ್ಲಿ ಅಮ್ಮ ಕ್ಯಾಂಟೀನ್ ಮಾದರಿಯಲ್ಲಿ ನಮ್ಮ ಕ್ಯಾಂಟೀನ್‍ನ್ನು ಜಾರಿಗೆ ತರಲಾಗುತ್ತಿದೆ. ಪ್ರಥಮವಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ 198 ವಾರ್ಡ್‍ಗಳಲ್ಲಿ 100 ಕೋಟಿ ಅನುದಾನ ನೀಡಲಾಗುತ್ತಿದೆ ಎಂದರು.
ಸಭೆಯಲ್ಲಿ ಶಾಸಕ ರಾಜು, ಮುಖಂಡರಾದ ಕಾಸೆಪ್ಪನರ್, ಜಿಲ್ಲಾಧ್ಯಕ್ಷ ವಿನಯ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

 

loading...