ಜಿ.ಪಂ ಚುನಾವಾಣೆ: ಅಧ್ಯಕ್ಷರಾದ ರಮೇಶ ಕವಲೂರ

0
41
loading...

ಕನ್ನಡಮ್ಮ ಸುದ್ದಿ-ಮುಂಡರಗಿ : ತಾಲೂಕಿನ ಬಾಗೇವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೀರನಗೌಡ ಪಾಟೀಲ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರುವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಿತು.
ಸಾಮಾನ್ಯ ಮೀಸಲಾತಿಯ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ರಮೇಶ ಕವಲೂರ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಸುಮಂಗಲಾ ಪಾಟೀಲ ಮತ್ತು ಮಲ್ಲಪ್ಪ ತಳವಾರ ನಾಮಪತ್ರ ಸಲ್ಲಿಸಿದ್ದರು. ಮಲ್ಲಪ್ಪ ತಳವಾರ ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ರಮೇಶ ಹಾಗೂ ಸುಮಂಗಲಾ ಅವರ ನಡುವೆ ಚುನಾವಣೆ ಜರುಗಿತು. ಬಿಜೆಪಿ ಬೆಂಬಲತ ಅಭ್ಯರ್ಥಿ ರಮೇಶ ಕವಲೂರ 6 ಮತ ಪಡೆದು ಅಧ್ಯಕ್ಷರಾಗಿ ಚುನಾಯಿತರಾದರು. ಸುಮಂಗಲಾ ಪಾಟೀಲ 3 ಮತ ಪಡೆದು ಪರಾಭವಗೊಂಡರು.
ತಾಲೂಕು ಪಂಚಾಯಿತಿ ಇಒ ಸಿ.ಆರ್.ಮುಂಡರಗಿ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಪಿಡಿಒ ಮಂಜುಳಾ ಪಾಟೀಲ ಇದ್ದರು.
ಕಾರ್ಯಕರ್ತರ ಸಂಭ್ರಮ: ರಮೇಶ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರೇಲ್ಲ ಪಟಾಕಿ ಸಿಡಿಸಿ ಸಹಿ ಹಂಚುವುದರ ಮೂಲಕ ಸಂಭ್ರಮಿಸಿದರು.
ಈ ವೇಳೆ ಮಾಜಿ ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ಸಾರ್ವಜನಿಕರಿಗೆ ಮುಖ್ಯವಾಗಿ ಬೇಕಾಗುವಂತ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಜನಪ್ರತಿನಿಧಿಗಳು ಶ್ರಮಿಸಬೇಕು. ಚುನಾವಣೆ ನಂತರ ಎಲ್ಲರೂ ಹೊಂದಿಕೊಂಡು ಒಗ್ಗಟ್ಟಿನಿಂದ ಗ್ರಾಮಗಳ ಅಭಿವೃದ್ಧಿ ಪಡಿಸುವಲ್ಲಿ ಮುಂದಾಗಬೇಕು ಎಂದು ಸಲಹೆ ನೀಡಿದರು.
ಮುಖಂಡ ಕರಬಸಪ್ಪ ಹಂಚಿನಾಳ ಮಾತನಾಡಿ, ಜನರಿಗೆ ಉಪಯುಕ್ತ ಕೆಲಸಗಳನ್ನು ಮಾಡುವುದರ ಮೂಲಕ ಪಂಚಾಯಿತಿಯನ್ನು ರಾಜ್ಯಮಟ್ಟದತ್ತ ಹೆಸರಿಸುವಂತ ಕಾರ್ಯಗಳನ್ನು ಜನಪ್ರತಿನಿಧಿಗಳಾದವರು ಮಾಡಬೇಕು ಎಂದು ತಿಳಿಸಿದರು.
ಯುವ ಮುಖಂಡ ಡಾ.ಕುಮಾರಸ್ವಾಮಿ ಹಿರೇಮಠ ಮಾತನಾಡಿ, ಬಾಗೇವಾಡಿ ಪಂಚಾಯಿತಿ ಬಿಜೆಪಿ ಪಾಲಾಗಿದ್ದು, ಮುಂಬರುವ ಎಂಎಲ್‍ಎ ಚುನಾವಣೆಯಲ್ಲಿ ರಾಮಣ್ಣ ಲಮಾಣಿಯವರಿಗೆ ಎಲ್ಲರೂ ಉತ್ತಮ ಬೆಂಬಲ ನೀಡುವುದರ ಮೂಲಕ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡುವಲ್ಲಿ ಎಲ್ಲ ಕಾರ್ಯಕರ್ತರು ಶ್ರಮಿಸೋಣ ಎಂದು ಕರೆ ನೀಡಿದರು.
ಎಪಿಎಂಸಿ ಸದಸ್ಯ ರವೀಂದ್ರ ಉಪ್ಪಿನಬೇಟಗೇರಿ ಮಾತನಾಡಿದರು.
ಉಪಾಧ್ಯಕ್ಷೆ ಶಿವಕ್ಕ ಉಪ್ಪಾರ, ಸದಸ್ಯರಾದ ಜ್ಯೋತಿ ಕಂತಿ, ವೀರನಗೌಡ ಪಾಟೀಲ, ರಮೇಶ ಲಮಾಣಿ, ಗಂಗಮ್ಮ ಈಟಿ, ಮುಖಂಡರಾದ ಆರ್.ಎಂ.ತಪ್ಪಡಿ, ಪರುಶುರಾಮ ರಾಠೋಡ, ನಾಗಪ್ಪ ವಾರದ, ಸಿದ್ದೇಶ ತಳವಾರ, ನಾಗರಾಜ ಹೊಸೂರ, ಕೃಷ್ಣ ರಾಠೋಡ, ಬಸವರಾಜ ಡಂಬಳ, ಸೇರಿದಂತೆ ಇತರರು ಇದ್ದರು.

loading...