ತಾಲೂಕು ಮುಖ್ಯೋಪಾಧ್ಯರ ಸಂಘದಿಂದ ಸನ್ಮಾನ ಸಮಾರಂಭ ಹಾಗೂ ಮುಖ್ಯೋಪಾಧ್ಯಾಯರ ಕಾರ್ಯಗಾರ ಕಾರ್ಯಕ್ರಮ

0
39
loading...

ಕನ್ನಡಮ್ಮ ಸುದ್ದಿ-ಕುಷ್ಟಗಿ : ತಾಲೂಕು ಮಟ್ಟದ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದದಿಂದ ನಿವೃತ್ತ ಮುಖ್ಯೋಪಾಧ್ಯಾಯರಿಗೆ ಹಾಗೂ ವರ್ಗಾವಣೆಗೊಂಡವರಿಗೆ ಸನ್ಮಾನ ಸಮಾರಂಭ ಮತ್ತು ಮುಖ್ಯೋಪಾಧ್ಯಾಯರ ಕಾರ್ಯಗಾರ ಕಾರ್ಯಕ್ರಮ ಸ್ಥಳೀಯ ಪ್ರಥಮ ದರ್ಜೆ ಕಾಲೇಜನಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಎಸ್.ವ್ಹಿ ಡಾಣಿ ಭಾಗವಹಿಸಿ ಮಾತನಾಡಿ ಮುಖ್ಯೋಪಾಧ್ಯಾಯರು ಒಬ್ಬ ನಾಯಕನಾಗಿ ಕೆಲಸ ನಿರ್ವಹಿಸಬೇಕಾಗಿದೆ. ಈ ರೀತಿ ರಚನ್ಮಾತ್ಮಕ ಕಾರ್ಯಕ್ರಮಗಳಿಂದ ಸಂಘದ ಬೆಳವಣಿಗೆಗೆ ಪೂರಕವಾಗಲಿದೆ. ಈ ತಾಲೂಕಿನ ಮುಖ್ಯೋಪಾಧ್ಯಾಯರ ತುಂಬಾ ಕ್ರೀಯಾಶೀಲವುಳ್ಳವರಾಗಿದ್ದು ಶೈಕ್ಷಣಿಕ ಚಟುವಟಿಕೆಯಲ್ಲಿ ಮಹತ್ತರ ಸಾಧನೆ ಮಾಡುತ್ತಿದ್ದು ಶಿಕ್ಷಣ ಮಟ್ಟ ಹೆಚ್ಚಳಕ್ಕೆ ಕ್ರಮಕೈಗೊಳ್ಳಲು ಎಲ್ಲರ ಶ್ರಮವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಎಂ. ಬಿ. ಮೊರಟಗಿ ಮಾತನಾಡಿ ತಾಲೂಕಿನ ಎಲ್ಲಾ ಮುಖ್ಯ ಶಿಕ್ಷಕರು ಉತ್ತಮವಾದ ಪಲಿತಾಂಶವನ್ನು ಪಡೆಲು ಮಕ್ಕಳಿಗೆ ಹೆಚ್ಚು ಹೆಚ್ಚು ಪರೀಕ್ಷೆಯನ್ನು ನಡೆಸಿ ಎಸ್.ಎಸ್.ಎಲ್.ಸಿ ಪಲಿತಾಂಶದಲ್ಲಿ ಉತ್ತಮ ಸಾಧನೆ ಮಾಡುವಂತೆ ತಿಳಿಸಿದರು. ಈ ಕಾರ್ಯಕ್ರಮದ ಸಂದರ್ಭದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬಿ.ಆರ್.ಸಿ ಸಮನ್ವಯಧಿಕಾರಿ ಶ್ರೀಶೈಲ ಸೋಮನಕಟ್ಟೆ, ವಿ.ಬಿ ದಾಮ್ಮಿ, ಜಿಲ್ಲಾ ಮುಖ್ಯೋಪಾಧ್ಯಾಯ ಸಂಘದ ಅಧ್ಯಕ್ಷ ಬಸವಂತಗೌಡ ಮೇಟಿ, ತಾಲೂಕು ಅಧ್ಯಕ್ಷ ಈಶಪ್ಪ ತಳವಾರ, ತಾಲೂಕು ಕಾರ್ಯಧರ್ಶಿ ಜಿ.ಎಂ ಹಿರೇಮಠ, ಆರ್.ಎಲ್ ಉಲ್ಲೂರ, ಮದ್ದಾನೆಪ್ಪ ಕೆ, ಶಿವಪುತ್ರಪ್ಪ ತಗ್ಗಿ, ಎಸ್.ಟಿ ಪಾಟೀಲ, ಬಾಲಚಂದ್ರ, ವಿ.ಮಲ್ಲಪ್ಪ, ವೈ.ಆರ್.ಅಂಗಡಿ, ಕಾರ್ಯಕ್ರಮವನ್ನು ಅರವಿಂದ ಕುಮಾರ ದೇಸಾಯಿ ನಿರ್ವಹಿಸಿದರು. ಕೊನೆಯಲ್ಲಿ ಎಂ.ಕೆ ಬಂಡಿಹಾಳ ವಂದಿಸಿದರು.

loading...