ಪ್ರೇಮಿಗಳು ಬ್ರೇಕಪ್ ಆದ್ರೆ ಎದುರಾಗುವ ಸಮಸ್ಯೆ

0
38
loading...

ಪ್ರೀತಿ ಅನ್ನೋದು ಡ್ರಗ್ಸ್ ಇದ್ದ ಹಾಗೆ ಯಾಕೆಂದರೆ ಒಮ್ಮೆ ಈ ಡ್ರಗ್‍ನ ಮತ್ತು ಏರಿದರೆ ಅಷ್ಟು ಬೇಗ ದೇಹದಿಂದ ಇಳಿಯೋದಿಲ್ಲ. ನಾವೆಷ್ಟು ಪ್ರಯತ್ನ ಮಾಡಿದರೂ ಅದರ ನಶೆ ಇಳಿದು ಹೋಗೋದು ಕಷ್ಟ. ಅದರಲ್ಲೂ ಎರಡು ಮೂರು ವರ್ಷ ಪ್ರೀತಿ ಮಾಡಿದವರ ಪ್ರೀತಿಯಲ್ಲಿ ಅದೇನೊ ಸಮಸ್ಯೆ ಕಾಣಿಸಿಕೊಂಡು ಬ್ರೇಕ್‍ಅಪ್ ಆದರೆ ಮತ್ತೆ ಮಗಿದೇ ಹೋಯಿತು. ಜೀವನವೇ ಮುಗಿದು ಹೋಯಿತು ಎನ್ನುವಂತೆ ವರ್ತಿಸುತ್ತಾರೆ.
ಕೆಲವು ಜನರು ಊಟ ತಿಂಡಿ ತಿನ್ನೋದನ್ನು ಬಿಟ್ಟರೆ, ಮತ್ತೆ ಕೆಲವರು ನಿದ್ರೆಯನ್ನು ಮರೆತು ಬಿಡುತ್ತಾರೆ, ಆತ ನನ್ನ ಪ್ರೀತಿಯಿಂದ ದೂರವಾದ ಅನ್ನೋ ಗುಂಗಿನಲ್ಲಿ ಕೆಲವರು ಸೊರಗಿ ಆತ್ಮಹತ್ಯೆ ಮಾಡಿಕೊಳ್ಳುವುದು ಇದೆ. ಇದೆಲ್ಲಾ ನಿಮಗೆ ಗೊತ್ತೆ ಇದೆ. ಆದರೆ ಇಂದು ನಾವು ಬ್ರೇಕ್‍ಅಪ್ ಆಗೋದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿಸುತ್ತೇವೆ…
ನಡೆದಾಡಲು ಕಷ್ಟವಾಗುತ್ತದೆ : ಸಂಶೋಧನೆಯೊಂದರ ಪ್ರಕಾರ ಬ್ರೇಕ್‍ಅಪ್ ಆದ ನಂತರ ಸ್ವಲ್ಪ ನಡೆದರೂ, ಮೆಟ್ಟಿಲುಗಳನ್ನು ಹತ್ತಿದರೂ ಕಾಲು ನೋವು ಕಾಣಿಸಿಕೊಳ್ಳುತ್ತದೆಯಂತೆ. ಈ ನೋವು ಆಕ್ಸಿಡೆಂಟ್‍ನಿಂದ ಉಂಟಾಗುವ ನೋವಿನಂತೆ ಇರುತ್ತದೆ.
ಕಣ್ಣುಗಳು ಊದಿಕೊಳ್ಳುತ್ತದೆ : ಇದು ಇರಿಟೇಶನ್‍ನಿಂದ ಉಂಟಾಗುತ್ತದೆ. ಬ್ರೇಕ್‍ಅಪ್‍ನ ನೋವಿನಿಂದ ಬಿಟ್ಟು ಬಿಡದೆ ಅಳುತ್ತೀರಿ. ಅದೆಷ್ಟು ಕಣ್ಣೀರು ಸುರಿಸುತ್ತೀರಿ ಗೊತ್ತೇ ಇರೋದಿಲ್ಲ. ಹೆಚ್ಚು ಸಮಯದವರೆಗೂ ಅತ್ತಾಗ ಕಣ್ಣುಗಳು ಬತ್ತಿಹೋಗುತ್ತವೆ, ಇದರಿಂದ ಕಣ್ಣುಗಳು ಊದಿಕೊಳ್ಳುತ್ತದೆ.
ತೂಕ ಹೆಚ್ಚಾಗುತ್ತದೆ ಅಥವಾ ತೂಕ ಕಳೆದುಕೊಳ್ಳಬಹುದು : ಬ್ರೇಕ್‍ಅಪ್‍ನ ಸಡನ್ ಶಾಕ್‍ನಿಂದಾಗಿ ಹಾರ್ಮೋನ್ ಅಸಮತೋಲನವಾಗುವುದರಿಂದ ಕೆಲವರಲ್ಲಿ ತೂಕ ಹೆಚ್ಚಾದರೆ ಇನ್ನೂ ಕೆಲವರಲ್ಲಿ ತೂಕ ಕಡಿಮೆಯಾಗುತ್ತದೆ. ಇದಕ್ಕೆ ಆ ಸಮಯದಲ್ಲಿ ಸರಿಯಾಗಿ ಆಹಾರ ಸೇವನೆ ಮಾಡದೆ ಇರೋದು ಸಹ ಕಾರಣವಾಗಿರಬಹುದು.
ಹೃದಯದಲ್ಲಿ ನೋವು ಕಾಣಿಸಿಕೊಳ್ಳುತ್ತದೆ : ಬ್ರೇಕ್‍ಅಪ್‍ನಿಂದಾಗಿ ತುಂಬಾ ಎಫೆಕ್ಟ್ ಆಗೋದು ಹೃದಯಕ್ಕೆ. ತುಂಬಾ ಸ್ಟ್ರೆಸ್ ಆದರೆ ಛಿoಡಿಣisoಟ ಮತ್ತು ಚಿಜಡಿeಟಿಚಿಟiಟಿe ಎಂಬ ಹಾರ್ಮೋನ್‍ಗಳು ದೇಹದಿಂದ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗುತ್ತದೆ. ಇದರಿಂದ ಹೃದಯದಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
ಸ್ಕಿನ್ ಸಮಸ್ಯೆ ಉಂಟಾಗುತ್ತದೆ : ಬ್ರೇಕ್‍ಅಪ್ ಸಮಯದಲ್ಲಿ ಬಿಡುಗಡೆಯಾಗುವ ಛಿoಡಿಣisoಟ ಮತ್ತು ಚಿಜಡಿeಟಿಚಿಟiಟಿe ಹಾರ್ಮೋನ್‍ಗಳು ಸ್ಕಿನ್ ಮೇಲೆ ಸಹ ಗಂಭೀರ ಪರಿಣಾಮವನ್ನು ಉಂಟುಮಾಡುತ್ತದೆ. ಇದರಿಂದ ಹಲವಾರು ತ್ವಚೆಯ ಸಮಸ್ಯೆಗಳು ಸಹ ಕಾಣಿಸಿಕೊಳ್ಳುತ್ತವೆ.

loading...