ಬಿ ಎಸ್ ಯಡಿಯೂರಪ್ಪನವರಿಗೆ ಅದ್ದೂರಿಯ ಸ್ವಾಗತ, ಸನ್ಮಾನ

0
23
loading...

ಕನ್ನಡಮ್ಮ ಸುದ್ದಿ-ಶಿಗ್ಗಾವಿ : ಕರ್ನಾಟಕ ರಾಜ್ಯದ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪನವರನ್ನು ಇಂದು ಬೆಳಗ್ಗೆ ಪಟ್ಟಣದ ಪ್ರವಾಸಿ ಮಂದಿರದ ಬಳಿ ಶಾಸಕ ಬಸವರಾಜ ಬೊಮ್ಮಾಯಿ ನೆತೃತ್ವದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು.
ಹಾವೇರಿಯಲ್ಲಿ ನಡೆಯುವ ಪಕ್ಷದ ಕಾರ್ಯಕ್ರಮಕ್ಕೆ ಹುಬ್ಬಳ್ಳಿಯಿಂದ ಹಾವೇರಿಗೆ ಹೊಗುವ ಮಾರ್ಗದಲ್ಲಿ ಯಡಿಯೂರಪ್ಪನವರನ್ನು ನೂರಾರು ಕಾರ್ಯರ್ತರು ಸ್ವಾಗತಿಸಿ ಸನ್ಮಾಸಿದರು.
ಜಿ.ಜೆ.ಪಿ ಮುಖಂಡರಾದ ಸಿ,ಎಮ್.ಉದಾಸಿ, ಶಿವರಾಜ ಸಜ್ಜನ, ನೆಹರು ಓಲೆಕಾರ, ಸುರೇಶಗೌಡ ಪಾಟೀಲ್, ಯು.ಬಿ.ಬಣಕಾರ, ತಾಲೂಕಾ ಅಧ್ಯಕ್ಷ ದೇವಣ್ಣ ಚಾಕಲಬ್ಬಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಮ್ಯಾಗೇರಿ,ಜಿ.ಪಂ ಸದಸ್ಯೆ ಶೋಭಾ ಗಂಜಿಗಟ್ಟಿ, ತಾ,ಪಂ ಸದಸ್ಯ ಯಲ್ಲಪ್ಪ ನರಗುಂದ, ಎ.ಪಿಎಮ್.ಸಿ ನೂತನ ಅಧ್ಯಕ್ಷ ತಿಪ್ಪಣ್ಣ ಸಾತಣ್ಣವರ, ಪುರಸಭೆ ಅಧ್ಯಕ್ಷ ಶಿವಪ್ರಸಾದ ಸುರಗಿಮಠ, ಉಪಾಧ್ಯಕ್ಷ ಪರಶುರಾಮ ಸೋನ್ನದ, ಸದಸ್ಯರಾದ ಶ್ರೀಕಾಂತ ಬುಳ್ಳಕ್ಕನವರ ಫಕ್ಕಿರೇಶ ಶಿಗ್ಗಾವಿ, ಸುಭಾಷ ಚೌವಾಣ ಜಿಲ್ಲಾ ರೈತ ಮೊರ್ಚಾ ಅಧ್ಯಕ್ಷ ಶಿದ್ದಲಿಂಗಪ್ಪ ಕಾರಡಗಿ ಸೇರಿದಂತೆ ತಾಲೂಕಿನ ಎಲ್ಲ ಬಿ,ಜೆ,ಪಿ ಮುಖಂಡರು ವಿವಿದ ಸಂಘಟನೆಗಳ ಪದಾಧಿಕಾರಿಗಳು ನೂರಾರು ಅಭಿಮಾನಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.

loading...