ಭಗವಂತನ ಸ್ಮರಣೆಗಾಗಿಯೇ ಹಬ್ಬಗಳನ್ನು ಆಚರಿಸಲಾಗುವುದು: ಬ್ರಹ್ಮಕುಮಾರಿ ಪದ್ಮಾಜೀ

0
29
loading...

ಕನ್ನಡಮ್ಮ ಸುದ್ದಿ-ಮುಂಡಗೋಡ : ಭಗವಂತನ ಸ್ಮರಣೆಗಾಗಿಯೇ ಹಬ್ಬಗಳನ್ನು ಆಚರಿಸಲಾಗುತ್ತದೆ. ಶ್ರದ್ದೆ ಭಕ್ತಿಯಿಂದ ಹಬ್ಬಗಳನ್ನು ಆಚರಿಸುವುದರಿಂದ ಭಗವಂತನ ಸನೀಹವಾಗುತ್ತೇವೆ ಎಂದು ಹಳಿಯಾಳ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದ ರಾಜಯೋಗಿನಿ ಬ್ರಹ್ಮಕುಮಾರಿ ಪದ್ಮಾಜೀ ಹೇಳಿದರು.
ಅವರು ಮಹಾ ಶಿವರಾತ್ರಿ ಪ್ರಯುಕ್ತ ಇಲ್ಲಿಯ ಬಸವಣ್ಣ ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಲ್ಕು ದಿನಗಳ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದರು. ಭಕ್ತಿ, ಶ್ರದ್ದೆ, ಸ್ನೇಹ, ಪ್ರೀತಿ ಭಾಂದವ್ಯ ಬೆಸೆಯುವಂತಹದ್ದೇ ಹಬ್ಬಗಳ ವಿಶೇಷ. ಎಲ್ಲ ಅಂದಕಾರಗಳನ್ನು ದೂರಪಡಿಸುವ ಉದ್ದೇಶವೇ ಹಬ್ಬ ಸಮಾರಂಭಗಳು. ನಮ್ಮ ನುಡಿಗಳು ಉತ್ತಮವಾಗಿರಬೇಕು. ಶರಣರು, ಸಂತರು ಹಿತವಚನಗಳಿಂದಲೇ ಜಗತ್ತನ್ನು ಗೆದ್ದಿದ್ದಾರೆ. ಸದ್ಗುಣಗಳ ಕೊರತೆಯಿಂದಾಗಿ ಅನಾಥಾಶ್ರಮ ಹಾಗೂ ವೃದ್ದಾಶ್ರಮಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹಿರಿಯರ ಆಶೀರ್ವಾದವಿಲ್ಲದ ಕಾರಣ ಮಾನವನ ಜೀವನ ಮೌಲ್ಯ ಕುಸಿಯುತ್ತಿದೆ. ಅದ್ಯಾತ್ಮದ ಅರ್ಥ ಕಳೆದುಕೊಳ್ಳುತ್ತಿದೆ. ನಮಸ್ಕಾರದ ಬದಲು ಹಾಯ್ ಬಾಯ್ ಸಂಸ್ಕøತಿಗೆ ವಾಲಿದ್ದೇವೆ. ಇದರಿಂದ ನಮ್ಮ ಸನಾತನ ಸಂಸ್ಕøತಿ ಅದೋ ಗತಿಯತ್ತ ಸಾಗುತ್ತಿದೆ. ಪೂಜ್ಯ ಮನೋಭಾವನೆ ಹೊಂದುವುದರಿಂದ ದುಷ್ಟ ಗುಣಗಳನ್ನು ದೂರಮಾಡಬಹುದು ಮನುಷ್ಯನಲ್ಲಿ ಹಣ ಸಂಪತ್ತಿಗಿಂತ ಗುಣ ಸಂಪತ್ತು ಹೆಚ್ಚಬೇಕು ಎಂದರು. ಈಶ್ವರಿ ವಿದ್ಯಾಲಯ ಸ್ಥಳಿಯ ಮುಖ್ಯಸ್ಥೆ ಗಂಗಾಬಾಯಿ ಉಪಸ್ಥಿತರಿದ್ದರು. ನೇತ್ರಾವತಿ ನಿರೂಪಿಸಿದರು.

loading...