ಭೀಮಗಡ ಅರಣ್ಯ ಪ್ರದೇಶ ಪರಿಸರ ಸೂಕ್ಷ್ಮ ವಲಯ ಎಂದು ಘೋಷನೆಯಾಗುತಾ ?

0
63
loading...

ಕಸ್ತೂರಿ ರಂಗನ್ ವರದಿ ಪ್ರಕಾರ ರಾಜ್ಯದಲ್ಲಿ 10 ಜಿಲ್ಲೆಗಳಿಗೆ ಅನ್ವಯ
ಕೆ ಎಮ್ ಪಾಟೀಲ
ಬೆಳಗಾವಿ: ಕೇಂದ್ರ ಸರ್ಕಾರ ಪಶ್ಚಿಮ ಘಟ್ಟ ಅರಣ್ಯ ಪ್ರದೇಶ ಸಂರಕ್ಷಣೆ ಮಾಡುವ ಉದ್ದೇಶದಿಂದ ಪರಿಸರ ಸೂಕ್ಷ್ಮ ವಲಯವೆಂದು ರಾಜ್ಯದ ಕೊಡಗು ಸೇರಿದಂತೆ 10 ಜಿಲ್ಲೆಗಳನ್ನು ಸೂಕ್ಷ್ಮ ವಲಯ ಪ್ರದೇಶವೆಂದು ಘೋಷನೆ ಮಾಡಿದೆ ಇದರಿಂದ ಅರಣ್ಯ ಪ್ರದೇಶದ ಅಂಚಿನಲ್ಲಿರುವ ಜನರಿಗೆ ತೊಂದರೆ ಉಂಟಾಗಲಿದೆ.
ಕೇಂದ್ರ ಸರ್ಕಾರ ಪರಿಸರವನ್ನು ಅಭಿವೃದ್ಧಿ ಪಡಿಸುವುದಕ್ಕೊಸ್ಕರ ಐದು ವರ್ಷಗಳ ಹಿಂದೆ ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳನ್ನು ಸೂಕ್ಷ್ಮ ವಲಯಗಳೆಂದು ಘೋಷನೆಮಾಡಿತ್ತು ಇದರಿಂದ ಆಕ್ರೋಷಗೊಂಡ ಕೊಡಗು ಜಿಲ್ಲೆಯ ನಿಮಾಸಿಗಳು ಈ ವರಿದಿಯನ್ನು ಜಾರಿಮಾಡದಂತೆ ಪ್ರತಿಭಟನೆ ಮಾಡಿ ತಮಗೆ ಈ ವರದಿಯಿಂದ ಅರಣ್ಯ ಪ್ರದೇಶದಲ್ಲಿ ವಾಸಿಸುವ ಬುಡಕಟ್ಟು ಜನಾಂಗ ಸೇರಿದಂತೆ ಇತರೆ ಜನಾಂಗಗಳಿಗೆ ತೊಂದರೆ ಉಂಟ್ಟಾಗುತ್ತದೆ ಎಂದು ಸರ್ಕಾರದ ವಿರುದ್ಧವಾಗಿ ಧ್ವನಿ ಎತ್ತಿದ್ದರು.
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಿಲ್ಲೆಯ ಸಮಸ್ಯೆಗಳು ಯಾವÀವು ಎಂಬುದನ್ನು ಆಲಿಸುವುದಕ್ಕೊಸ್ಕರ ರಾಜ್ಯಮಟ್ಟದ ತಜ್ಞರ ಸಮಿತಿಯನ್ನು ರಚಿಸಿ ವಿರೋಧ ವ್ಯಕ್ತಪಡಿಸುವವರಿಂದ ಮಾಹಿತಿ ಪಡೆದು ಸಮಸ್ಯೆಗಳನ್ನು ಬಗೆಹರಿಸುವುದಾಗಿ ಹೇಳಿದ್ದರು. ಆದರೆ ಇನ್ನು ಕೂಡಾ ಸಮಸ್ಯೆ ಬಗೆ ಹರಿದಿಲ್ಲ.
ಇನ್ನು ಕೊಡಗು ಜಿಲ್ಲೆ ಸಮಸ್ಯೆಗಳ ಬೆನ್ನಲ್ಲೆ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಭೀಮಗಡ ಅರಣ್ಯ ಪ್ರದೇಶದ ಹತ್ತಿರ 61 ಹಳ್ಳಿಗಳ ನಿವಾಸಿಗಳಿಗೆ ಆತಂಕ ಪ್ರಾರಂಭವಾಗಿ ಇಲ್ಲಿರುವ ಹಳ್ಳಿಗರ ನಿದ್ದೆಗೆಡಿಸಿವಂತೆ ಮಾಡಿದೆ. ಕಾರಣ ಎಲ್ಲಿ ರಂಗನ್ ವದರಿಯನ್ನು ರಾಜ್ಯ ಸರ್ಕಾರ ಆದೇಶ ಹೊರಡುಸುತ್ತದೆಯೊ ಎಂದು ಕೆಲವೊಂದು ಬುಡಕಟ್ಟು ಜನಾಂಗಗಳಲ್ಲಿ ನಡುಕು ಹುಟ್ಟುವಂತೆ ಮಾಡಿದೆ.
ಅಲ್ಲದೇ ಕೆಲವೊಂದಿಷ್ಟು ಕಾಮಗಾರಿಗಳಿಗೆ ಈ ವರದಿಯಿಂದ ಹೆದ್ದಾರಿಗಳಾದ ದತ್ತ ಜಾಂಬೋಟಿ ರಾಜ್ಯ ರಸ್ತೆ, ಹೆಮ್ಮಡಗಾ, ಅನುಮೋಡ ರಸ್ತೆ ಈ ರಸ್ತೆಗಳು ವಾಹನಗಳ ಸಂಚಾರ ದೃಷ್ಟಿಯಿಂದ ಅಗಲೀಕರಣ ಉದ್ದೇಶದಿಂದ ತಡೆಯಾಗಲಿದೆ.
ತಂಡದಿಂದ ಮಾಹಿತಿ: ಕೊಡಗು ಜಿಲ್ಲೆಯಲ್ಲಿ ಕಸ್ತೂರಿ ರಂಗನ್ ವರದಿಗೆ ವಿರೋಧ ವ್ಯಕ್ತವಾಗುವ ಹಿನ್ನಲೆಯಲ್ಲಿ ಈ ಹಿಂದೆ ಒಂದು ತಂಡ ರಚಿಸಿ ಅರಣ್ಯ ಪ್ರದೇಶಕ್ಕೆ ಅಂಟಿಕೊಂಡಿರುವ ನಿವಾಸಿಗಳು ಎಷ್ಟು ಇದ್ದಾರೆ, ಯಾವ ಯಾವ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂಬುದನ್ನು ವಲಯ ಅರಣ್ಯಾಧಿಕಾರಿ ನೇತೃತ್ವದಲ್ಲಿ ಪಿಡಿಒ, ವೃತ್ತ ನಿರೀಕ್ಷಕ, ಗ್ರಾಮ ಲೆಕ್ಕಾಧಿಕಾರಿ ಸದಸ್ಯರನ್ನು ನೇಮಕಮಾಡಿ ಇವರಿಂದ ಇಗಾಗಲೇ ವರದಿಯನ್ನು ರಾಜ್ಯ ಸರ್ಕಾರ ಮಾಹಿತಿ ಪಡೆದುಕೊಂಡಿದೆ.
ಎಲ್ಲ ಚಟುವಟಿಕೆಗಳಿಗೆ ಕಡಿವಾಣ: ಕೈಗಾರಿಕೆ, ಮರಳು ಮಾಫಿಯಾ, ಪರಿಸರ ವಿರೋಧಿ ಕೈಗಾರಿಕೆ, ಜಲ ವಿದ್ಯುತ್, ಪವನ ವಿದ್ಯುತ್‍ನಂತಹ ಯೋಜನೆಗಳಿಗೆ ಬ್ರೇಕ್, 20 ಮೀಟರಗಿಂತ ಎತ್ತರ ಬಾರಿ ಪ್ರಮಾಣದ ಕಟ್ಟಡಗಳಿಗೆ ಅನುಮತಿ ನಿಷೇಧಿಸಲಾಗಿದೆ.
ಒಟ್ಟಾರೆಯಾಗಿ ಈ ವರದಿಯು ಅರಣ್ಯ ಪ್ರದೇಶದ ಅಂಚಿನಲ್ಲಿರುವವರಿಗೆ ಸಮುದಾಯಗಳಿಗೆ ಮಾರಕವಾಗಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಆದೇಶವನ್ನು ಅನುಷ್ಠಾನಕ್ಕೆ ತರುತ್ತೊ ಇಲ್ಲವೊ ಎಂಬುದನ್ನು ನೋಡಬೇಕಾಗಿದೆ.
ಬಾಕ್ಸ್
ಪಶ್ವಿಮ ಘಟ್ಟದ ಅರಣ್ಯ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಮಾಡಬೇಕು ಎಂದು ರಾಜ್ಯ ಸರ್ಕಾರದಿಂದ ಯಾವುದೇ ಅಧಿಸೂಚನೆ, ಆದೇಶ ನಮಗೆ ಬಂದಿಲ್ಲ.
ಬಸವರಾಜ ಪಾಟೀಲ ಉಪ ಅರಣ್ಯ ಸಂರಕ್ಷಣಾಧಿಕಾರಿ
ಏನಿದು ವರದಿ : ಪಶ್ಚಿಮಘಟ್ಟ ಸಂರಕ್ಷಣೆ ಬಗ್ಗೆ ಮಾಧವ ಗಾಡ್ಗೀಳ್ ವರದಿ ಬಂದ ನಂತರ ಕೇಂದ್ರ ಸರ್ಕಾರ 2012 ಆಗಸ್ಟ್ 17ರಂದು ಬಾಹ್ಯಾಕಾಶ ವಿಜ್ಞಾನಿ ಡಾ. ಕೆ. ಕಸ್ತೂರಿ ರಂಗನ್ ಅಧ್ಯಕ್ಷತೆಯಲ್ಲಿ ಉನ್ನತ ಹಂತದ ಸಮಿತಿ ರಚಿಸಿತ್ತು. ಆದರೆ, ಈ ವರದಿಯನ್ನು ಜಾರಿಗೊಳಿಸಬಾರದು ಎಂದು ಕೊಡಗಿನಲ್ಲಿ ಜನರು ಒತ್ತಾಯಿಸುತ್ತಿದ್ದಾರೆ.
ಪಶ್ಚಿಮಘಟ್ಟದಲ್ಲಿ ಗಣಿಗಾರಿಕೆ ನಿಷೇಧಿಸುವುದು, ಪರಿಸರದ ಮೇಲೆ ಹಾನಿಯುಂಟು ಮಾಡುವ ಕೈಗಾರಿಕೆಗಳನ್ನು ನಿಷೇಧಿಸುವುದು, ನಗರೀಕರಣ ಮತ್ತು ಅಭಿವೃದ್ಧಿ ಕಾಮಗಾರಿಗಳ ಮೇಲೆ ನಿಯಂತ್ರಣ, ಕೃಷಿಯಲ್ಲಿ ರಾಸಾಯನಿಕ ಕೀಟನಾಶಕ ಬಳಸದಂತೆ ನಿಷೇಧ ಮುಂತಾದ ಪ್ರಸ್ತಾವನೆಗಳಿವೆ.
ಸಮಿತಿ ಪಶ್ಚಿಮ ಘಟ್ಟದಲ್ಲಿ ಹಲವು ಪ್ರದೇಶಗಳನ್ನು ಸೂಕ್ಷ್ಮ ವಲಯ ಎಂದು ಗುರುತಿಸಿದೆ. ಕೊಡಗು ಸೇರಿದಂತೆ ರಾಜ್ಯದ ಹತ್ತು ಜಿಲ್ಲೆಗಳು ಈ ಸೂಕ್ಷ್ಮ ವಲಯದಲ್ಲಿವೆ. ಒಟ್ಟು 1,550 ಗ್ರಾಮಗಳು ಇದರ ವ್ಯಾಪ್ತಿಯೊಳಗೆ ಬರುತ್ತವೆ. ಕೊಡುಗು ಜಿಲ್ಲೆಯ 53 ಗ್ರಾಮಗಳ ಇದರಲ್ಲಿವೆ.

loading...