ಮಹಿಳೆಯ ಮೇಲೆ ದೌರ್ಜನ್ಯ: ತಹಶೀಲ್ದಾರರಿಗೆ ಮನವಿ

0
28
loading...

ಕನ್ನಡಮ್ಮ ಸುದ್ದಿ-ಶಿಗ್ಗಾವಿ : ಕುಂದೂರ ಗ್ರಾಮದ ಮಹಿಳೆಯ ಮೇಲೆ ದೌರ್ಜನ್ಯ ನಡೆದಿದೆ. ದೌರ್ಜನ್ಯಯುತ ಮಹಿಳೆ ದೂರು ನೀಡಲು ಹೋದರೆ ಬಂಕಾಪೂರ ಪಿ.ಎಸ್.ಐ ಶಿಧ್ದಾರೂಡ ಬಡಿಗೇರ ಮಹಿಳೆಗೆ ಅವಾಚ್ಯ ಶಬ್ದಗಳಿಂದ ಬೈದುದಲ್ಲದೆ ಜಾತಿ ನಿಂದನೆ ಮಾಡಿದ್ದಾನೆ ಎಂದು ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಹಿತಾಭಿವೃದ್ದಿ ಸಂಘದ ತಾಲೂಕ ಅಧ್ಯಕ್ಷ ಡಾ|| ಬಿ.ಎಚ್. ವೀರಣ್ಣ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಹಾಗೂ ಮಹಿಳೆ ತಹಶೀಲ್ದಾರ ಕಚೇರಿಗೆ ತೆರಳಿ ಶಿರಸ್ತೆದಾರ ರವಿ ಕೊರವರ ಮೂಲಕ ತಹಶೀಲ್ದಾರರಿಗೆ ಮನವಿ ಅರ್ಪಿಸಿದರು.
ಘಟನೆಯ ಹಿನ್ನೆಲೆ – ದೌರ್ಜನ್ಯಕ್ಕೊಳಗಾದ ಮಹಿಳೆ ವಿವಾಹಿತ ಮಹಿಳೆಯಾಗಿದ್ದು ಇವಳ ಮೇಲೆ ದಿ-01-03-2017 ರಂದು ಲೈಂಗಿಕ ದೌರ್ಜನ್ಯ ನಡೆದ ಬಗ್ಗೆ, ದಿ-02-03-2017 ರಿಂದ ಸುಮಾರು ಒಂದು ವಾರಗಳ ಕಾಲ ಅಂದರೆ ದಿ-09-03-2017 ರವರೆಗೆ ಬಂಕಾಪೂರ ಪೋಲಿಸ್ ಠಾಣೆಗೆ ಅಲೆದಾಡಿದರೂ ಶಿದ್ದಾರೂಢ ಬಡಿಗೇರ ಪಿ.ಎಸ್.ಐ ಇವರು ಇತಳ ಕಂಪ್ಲೇಟ್ ತೆಗೆದುಕೊಳ್ಳದೆ ಜಾತಿ ನಿಂದನೆಯನ್ನು ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಹೆದರಿಸಿ ಬೆದರಿಸಿ ಬಿಳಿ ಹಾಳೆಯ ಮೇಲೆ ಇವಳ ಸಹಿ ತೆಗೆದುಕೊಂಡು ಪೋಲಿಸ್ ಸ್ಟೇಶನ್ನಿನಿಂದ ಹೊರಹಾಕಿದ್ದಾರೆ. ಇನ್ನೊಮ್ಮೆ ಇಲ್ಲಿಗೆ ಬಂದರೆ ನಿನ್ನ ಕಥೆ ಮುಗಿಸುತ್ತೇನೆ ಎಂದು ಜೀವ ಬೆದರಿಕೆ ಕೂಡಾ ಹಾಕಿದ್ದಾರೆ. ಈ ಕಾರಣದಿಂದಾಗಿ ಈ ಖಾಸಗಿ ದೂರನ್ನು ಶಿಗ್ಗಾಂವ ಜೆ.ಎಮ್.ಎಫ್.ಸಿ. ಕೋರ್ಟಿನಲ್ಲಿ ಸಿ.ಆರ್.ಪಿ.182/17 ಹಾಗೂ ಪಿ.ಸಿ.50/2017 ರ ಪ್ರಕಾರ ದೂರನ್ನು ದಾಖಲಿಸಲಾಗಿದೆ.
ಅನ್ಯಾಯಕ್ಕೊಳಗಾದ ಮಹಿಳೆ ಪ್ರಾಥಮಿಕ ದೂರನ್ನು ನೀಡುವ ಸಂದರ್ಭದಲ್ಲಿ ಪಿ.ಎಸ್.ಐ ಹಾಗೂ ಅವರ ಸಿಬ್ಬಂದಿಯವರು ಯಾವುದೇ ರೀತಿ ಮರ್ಯಾದೆ ಕೊಡದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರಿಂದ ಇಲ್ಲಿ ಇವಳಿಗೆ ಯಾವುದೇ ನ್ಯಾಯ ಸಿಗುವ ನಂಬಿಕೆ ಇಲ್ಲ. ಕಾರಣ ಈ ಕೇಸನ್ನು ಬೇರೆ ಸರ್ಕಲಿಗೆ (ಶಿಗ್ಗಾಂವ ಸರ್ಕಲಿಗೆ ಹೊರತು ಪಡಿಸಿ) ವರ್ಗಾಯಿಸಬೇಕು ಮತ್ತು ಬಂಕಾಪೂರ ಪಿ.ಎಸ್.ಐ ಮೇಲೆ ಎಸ್.ಸಿ/ಎಸ್.ಟಿ ಕಾಯ್ದೆಯಡಿ ಮೊಕದ್ದಮೆ ಹೂಡಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಜೈ ಕರ್ನಾಟಕ ಸಂಘಟನಾ ತಾಲೂಕಾಧ್ಯಕ್ಷ ದುರಗಪ್ಪ ವಡ್ಡರ, ಕ.ರ.ವೇ ಜಿಲ್ಲಾ ಯುವ ಸಂಘಟನಾ ಅಧ್ಯಕ್ಷ ಬಸವರಾಜ ಜೇಕಿನಕಟ್ಟಿ, ಕರವೇ ತಾಲೂಕಾಧ್ಯಕ್ಷ ನಿಂಗಪ್ಪ ಬೆಂಚಳ್ಳಿ, ಶಿವಪ್ಪ ನೀಲಮ್ಮನವರ, ಮಾಜಿ ಪುರಸಭೆ ಅಧ್ಯಕ್ಷ ಕರೀಮ ಮೊಗಲಲ್ಲಿ, ಭ್ರಷ್ಠಾಚಾರ ನಿರ್ಮೂಲನಾ ಸಂಸ್ಥೆ ಅಧ್ಯಕ್ಷ ಬಸವರಾಜ ಹಂಚಿನಮನಿ.

loading...