ಮಹಿಳೆ ಸಮಾಜದಲ್ಲಿ ತಾನು ಜಾಗೃತಳಾಗದಿದ್ದರೆ ಕಳಂಕ ತಪ್ಪಿದಲ್ಲ: ಶಾರದಾ ಕಟ್ಟಮನಿ

0
46
loading...

ಕನ್ನಡಮ್ಮ ಸುದ್ದಿ-ಕುಷ್ಟಗಿ : ಸಮಾಜದಲ್ಲಿ ನಡೆಯುತ್ತಿರುವ ದುರ್ಘಟನೆಗಳು, ಮಹಿಳೆಯರ ದೌರ್ಜನ್ಯ, ಅತ್ಯಾಚಾರದಂತಹ ಪ್ರಕರಣಗಳು ನಡೆಯದಂತೆ ಮಹಿಳೆ ತಾನು ಜಾಗೃತಳಾಗದಿದ್ದರೆ ಮಹಿಳೆಗೆ ಕಳಂಕ ತಪ್ಪಿದಲ್ಲ ಎಂದು ತಾಲೂಕು ಮಹಿಳಾ ಸಬಲಿಕರಣ ಅಧ್ಯಕ್ಷೆ ಶಾರದಾ ಕಟ್ಟಿಮನಿ ಹೇಳಿದರು.
ಇಲ್ಲಿನ ಪಟ್ಟಣದ ಕೊಪ್ಪಳ ರಸ್ತೆಯ ಮಾತಾಶ್ರೀ ಹೊಳಿಯಮ್ಮ ಮಹಿಳಾ ಕಲಾ ಪದವಿ ಮಾಹಾವಿದ್ಯಾಲಯ ಹಾಗೂ ತಾಲೂಕ ಮಹಿಳಾ ಸಬಲೀಕರಣ ಇವರ ಸಯುಂಕ್ತ ಆಶ್ರಯದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಮಹಿಳಾ ಜಾಗೃತಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು ಮಹಿಳೆಗೆ ಒಂದಲ್ಲ ಒಂದು ರೀತಿಯಲ್ಲಿ ಪ್ರತಿನಿತ್ಯ ದೌರ್ಜನ್ಯ, ಅತ್ಯಾಚಾರ ದಬ್ಬಾಳಿಕೆ, ಕಿರುಕುಳ ನಡೆಯುತ್ತಲೆ ಇವೆ. ಇಂತಹ ಪ್ರಕರಣಗಳಲ್ಲಿ ಮಹಿಳೆಯು ಸಬಲತೆಯಿಂದ ಹೋರಾಡುವ ಶಕ್ತಿಯನ್ನು ಪಡೆಯಬೇಕಿದ್ದು ಮುಖ್ಯವಾಗಿ ಕಾನೂನಾತ್ಮಕ ಹಾಗೂ ಶೈಕ್ಷಣಿಕವಾಗಿ ಮಹಿಳೆ ತಾನು ಜಾಗೃತಳಾಗಬೇಕಾಗಿದೆ. ಈ ಸಮಾಜದಲ್ಲಿ ಮಹಿಳೆಗೆ ಸರಕಾರ ಪುರುಷನಷ್ಟೆ ಸಮಾನವಾದ ಹಕ್ಕನ್ನು ಮಹಿಳೆಗೂ ನೀಡಿದ್ದು ಈ ಸಮಾಜದಲ್ಲಿ ಯಾವ ವಿಷಯದಲ್ಲೂ ತಾನು ಕಡಿಮೆ ಇಲ್ಲ ಎನ್ನುವದನ್ನು ಈ ಜಗತ್ತಿಗೆ ತೋರಿಸಿಕೊಡಬೇಕು. ಅನೇಕ ಮಹಿಳಾ ಸಾಧಕರನ್ನು ಪ್ರೇರಕರನ್ನಾಗಿಟ್ಟುಕೊಂಡು ಬೆಳೆಯಬೇಕು ಎಂದರು.
ನಂತರ ಮಾತಾಶ್ರೀ ಹೊಳಿಯಮ್ಮ ಮಹಿಳಾ ಕಲಾ ಪದವಿ ಕಾಲೇಜು ಪ್ರಾಚಾರ್ಯ ಎಸ್.ವಾಯ್.ತಳವಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಮಹಿಳೆಯು ಪುರುಷನಗಿಂತ ಒಂದು ಕೈ ಮೇಲಾಗಿದ್ದಾಳೆ ಮತ್ತು ಶಿಕ್ಷಣ ರಂಗದಲ್ಲಿ ಹೆಣ್ಣುಮಕ್ಕಳೆ ಹೆಚ್ಚು ಅಂಕವನ್ನು ಗಳಿಸುತ್ತಿದ್ದು ಮಹಿಳೆ ಸಮಾಜದ ಸರಿ ತಪ್ಪುಗಳನ್ನು ತಿದ್ದುವಲ್ಲಿ ಮುಂದಾಗಿದ್ದಾಳೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪದವಿ ಮಾಹಾ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಸ್ವಚ್ಚ ಭಾರತದಲ್ಲಿ ಮಹಿಳೆಯರ ಪಾತ್ರ ಬಹು ಮುಖ್ಯ ಎಂಬ ಭಾಷಣ ಸ್ಪರ್ದೆಯನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣ ಪ್ರೌಢ ಶಾಲೆ ಮುಖ್ಯ ಗುರುಗಳಾದ ಸಂಗಣ್ಣ ಗಿರಿಸಾಗರ, ಶ್ರೀಮತಿ ಶುಶಿಲಾ ಮೂಲಿಮನಿ, ಸವಿತಾ ಎಸ್.ಚೌಡ್ಕಿ, ಜಾಹೀದಾ ಅಸ್ಲಾಂ, ಸುಪೀಯಾ, ಸಲ್ಮಾ, ಪೂರ್ಣಿಮಾ ಎಲ್. ಚವ್ಹಾಣ, ಕೇದರನಾಥ ತುರಕಾಣಿ ಸೇರಿದಂತೆ ಕಾಲೇಜ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

loading...