ಮೈಲಾರ ಲಿಂಗ ದೇವರ ಜಾತ್ರಾ ಉತ್ಸವ

0
51
loading...

ಕನ್ನಡಮ್ಮ ಸುದ್ದಿ-ಮುಂಡಗೋಡ ; ಖಡ್ಗಂ ಕಪಾಲಂ, ಡಮರಂ ತ್ರಿಶೂಲಂ ಭುಜೈಶ್ಚ ತುರ್ಬಿ ಚತುರಂ, ವಹಂತಂ. ಆಶೇಷು ಸಂಪತ್ಸು ಖದಾಯಕಾಕ್ಷಂ, ಮಲ್ಲಾರನಾಥಂ. ನಮಸಾಸರಾಮಿ, ಏಳಿ ಕೋಟಿ, ಏಳು ಕೋಟ್ಗೋ, ಚಾಂಗಮಲೋ… ಎಂಬ ಜಯಘೋಷ ದೊಂದಿಗೆ ತಾಲೂಕಿನ ಚವಡಳ್ಳಿ ಹಾಗೂ ಕ್ಯಾಸನಕೇರಿ ಎರಡು ಗ್ರಾಮಗಳ ಮದ್ಯವಿರುವ ಮೈಲಾರ ಲಿಂಗ ದೇವರ ಜಾತ್ರಾ ಉತ್ಸವ (ಶಸ್ತ್ರ) ಸರಪಳಿ ಪವಾಡ ದೊಂದಿಗೆ ಸೋಮವಾರದಂದು ವಿಜೃಂಬಣೆಯಿಂದ ನಡೆಯಿತು.
ಪ್ರತಿ ವರ್ಷದಂತೆ ಈ ಭಾರಿಯು ತಾಲೂಕಿನ ಚವಡಳ್ಳಿ ಹಾಗೂ ಕ್ಯಾಸನಕೇರಿ ಎರಡು ಗ್ರಾಮಗಳ ಮಧ್ಯವಿರುವ ಬೃಹತಾಕಾರದ ಆಲದ ಮರದ ಕೆಳಗೆ ಇರುವ ಮೈಲಾರ ಲಿಂಗ ದೇವರ ಜಾತ್ರಾ ಉತ್ಸವ ಮಾ;5 ರವಿವಾರದಿಂದ ಪ್ರಾರಂಭವಾಗಿ ರಾತ್ರಿ ಜಾಗರಣೆಯೊಂದಿಗೆ ಎರಡು ಗ್ರಾಮಗಳಿಂದ ಡೊಳ್ಳಿನ ಮಜಲು ಹಾಗೂ ಶಹನಾಯಿ ಇತ್ಯಾದಿ ವಾದ್ಯ ವೈಭವಗಳೊಂದಿಗೆ ಏಳುಕೋಟಿ ಏಳುಕೋಟಿ ಏಳುಕೋಟಿಗ್ಯೋ ಛಾಂಗಮಲೋ ಎಂಬ ಘೋಷಣೆಯೊಂದಿಗೆ ಮೈಲಾರಲಿಂಗೇಶ್ವರನ ಸನ್ನಿಧಿಗೆ ಆಗಮಿಸಿ ಮಾಹಾಭಿಷೇಕ ಮಹಾಪೂಜೆ ಜರುಗಿತು, ಸೋಮವಾರ ಮುಂಜಾನೆ ಎರಡು ಗ್ರಾಮಗಳಲ್ಲಿ ಶ್ರೀ ಮ್ಯಲಾರಲಿಂಗನ ಪಲ್ಲಕ್ಕಿ ಉತ್ಸವದೊಂದಿಗೆ ಸಾವಿರಾರು ಭಕ್ತಾದಿಗಳ ಎದುರಲ್ಲಿ ಮದ್ಯಾಹ್ನ 12-35 ಸಮಯದಲ್ಲಿ ನಡೆದ ಕಾಣಿಕೋತ್ಸದಲ್ಲಿ “ತುಂಬಿದ ಹಸಿರಿನಲ್ಲಿ ಮುತ್ತಿನ ಕಾಳು ಪೊಣಿಸಿತ್ತು ಪರಾಕ ಎಂದು ಭವಿಷ್ಯ ನುಡಿಯಲಾಯಿತು. ಅಲ್ಲಿಂದ ದೇವಸ್ಥಾನಕ್ಕೆ ಆಗಮಿಸಿದರು ತದ ನಂತರ 1-35 ಘಂಟೆಗೆ ಶಸ್ತ್ರ ಶಿವದಾರರ ಪವಾಡ ಸರಪಳಿ ಪವಾಡ ಹಾಗೂ ಜರುಗಿದವು,ನಂತರ ದೇವರಿಗೆ ಹೂ ಹಣ್ಣು ಕಾಯಿ-ಕರ್ಪೂರ ಡೋಣೆ ತುಂಬುವುದು ಹಾಗೂ ತುಲಾಭಾರ ಮತ್ತು ಮಕ್ಕಳ ಜವುಳದ ಕಾರ್ಯಕ್ರಮಗಳು ನಡೆದವು. ಜಾತ್ರಾ ಸಮಯದಲ್ಲಿ ಆಗಮಿಸಿದ ಎಲ್ಲಾ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಒಟ್ಟಿನಲ್ಲಿ ಮೂರು ದಿನಗಳ ಕಾಲ ನಡೆಯುವ ಜಾತ್ರೆಯು ಆ ಭಾಗದ ಸುತ್ತಮುತ್ತಲಿನ ಜನರಲ್ಲಿ ಒಂದು ಹಬ್ಬದ ವಾತಾವರಣ ಇರುತ್ತದೆ.
ಯುವಕರ ಡೋಳ್ಳು ಕುಣಿತ- ಎರಡು ದಿನಗಳ ಕಾಲ ನಡೆದಂತಹ ಜಾತ್ರಾ ಉತ್ಸವದಲ್ಲಿ ಪಕ್ಕದ ಕಲಘಟಗಿ ತಾಲೂಕಿನ ಬಮ್ಮೀಗಟ್ಟಿ ಗ್ರಾಮದ ಮತ್ತು ಮುಂಡಗೋಡ ತಾಲೂಕಿನ ಕಲಕೇರಿ ಗ್ರಾಮದ ಯುವಕರ ಡೋಳ್ಳು ಕುಣಿತ ವಿಶೇಷವಾಗಿ ಜಾತ್ರಾ ಉತ್ಸವಕ್ಕೆ ಮೇರಗು ತಂದಿದೆ.

loading...