ರಾಷ್ಟ್ರೀಯ ವಿಜ್ಞಾನ ದಿನಾಚರಣೆ

0
95
loading...

ಕನ್ನಡಮ್ಮ ಸುದ್ದಿ-ರಾಣೇಬೆನ್ನೂರು : ದೇಶದ ಮಹಾನ್ ವಿಜ್ಞಾನಿ ಸರ್.ಸಿ.ವಿ.ರಾಮನ್‍ರು ಸಾಧಿಸಿದ ಐತಿಹಾಸಿಕ ಸಾಧನೆಯನ್ನು ಮಾಡಿದರೆ, ಸಿ.ವಿ.ರಾಮನ್‍ರು ಭೌತವಿಜ್ಞಾನಕ್ಕೆ ಸಲ್ಲಿಸಿದ ಸೇವೆ ಇಡೀ ವಿಶ್ವವೇ ಕೊಂಡಾಡುವಂತಿದೆ ಎಂದು ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಜಿ.ಬಿ.ಮಾಸಣಗಿ ಹೇಳಿದರು.

ಜೆಸಿಐ ಸಂಸ್ಥೆಯ ವತಿಯಿಂದ ನಗರದ ಡಾ||ಬಿ.ಆರ್.ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ‘ರಾಷ್ಟ್ರೀಯ ವಿಜ್ಞಾನ’ ದಿನಾಚರಣೆಯನ್ನು ಗಿಡಕ್ಕೆ ನೀರನ್ನು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಗಳು ಹಾಗೂ ಜಿಲ್ಲಾ ಅತ್ಯುತ್ತಮ ಯೋಗ ಶಿಕ್ಷಕ ಪ್ರಶಸ್ತಿಯನ್ನು ಪಡೆದ ವಿಜ್ಞಾನ ಶಿಕ್ಷಕರು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ವಿಜ್ಞಾನದ ಬಗ್ಗೆ ಉಪನ್ಯಾಸ ಮಾಡಿ ಮಾತನಾಡಿ ಈ ದಿನಾಚರಣೆಯ ಉದ್ದೇಶ ಎಲ್ಲರಿಗೂ ವಿಜ್ಞಾನದ ಮಹತ್ವ ಮತ್ತು ನಿತ್ಯಬದುಕಿನಲ್ಲಿ ವಿಜ್ಞಾನದ ಪ್ರಯೋಜನದ ಬಗ್ಗೆ ಅರಿವು ಮೂಡಿಸಲು ಪ್ರತಿವರ್ಷ ಆಚರಿಸಲಾಗುತ್ತದೆ.
ಸರ್.ಸಿ.ವಿ.ರಾಮನ್‍ರವರು ಅಸಾಮಾನ್ಯ ವ್ಯಕ್ತಿತ್ವ ಬಾಲ್ಯದಿಂದಲೇ ಭೌತವಿಜ್ಞಾನದ ಬಗ್ಗೆ ಅತೀವ ಕುತೂಹಲ, ಆಸಕ್ತಿ ಸೂಸುವ ಮನೋಭಾವ ಇರುವುದರಿಂದಲೇ ಅವರು ಬಹುಬೇಗ ನೊಬೆಲ್ ಪಾರಿತೋಷಕಕ್ಕೆ ಬಾಜನರಾದರು. ಅದೇ ರೀತಿ ನೀವು ಕೂಡಾ ಈಗಿನಿಂದಲೇ ಸಮಯ ವ್ಯರ್ಥ ಮಾಡದೆ ಗುರಿಯ ಕಡೆ ಗಮನ ಕೊಡಬೇಕು. ದೇಶ ಕೊಂಡಾಡುವಂತೆ ಯಾವುದೇ ಕ್ಷೇತ್ರದಲ್ಲಿಯಾದರೂ ಸಾಧಿಸಿ ಬದುಕು ಸಾರ್ಥಕ ಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಜೆಸಿಐ ಘಟಕದ ಅಧ್ಯಕ್ಷರಾದ ಎಫ್.ಎಚ್.ಗಚ್ಚಿನಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯರಾದ ಶಿವರುದ್ರಪ್ಪ, ಜಿ.ಡಿ.ಬಗಾಡೆ, ಜಯಣ್ಣ ಕರಡೇರ, ಲಕ್ಷ್ಮಣ ಕನಕಿ, ವಿನಯ ಬಗಾಡೆ, ಸಾಯಿನಾಥ ಗೊಂದಕರ ಹಾಗೂ ಶಿವಾನಂದ ಎಸ್.ಎ, ಜಯಲಲಿತ, ಜೆಸಿಐ ಸಹಕಾರ್ಯದರ್ಶಿ ಆರ್.ವಿ.ಪಾಟೀಲ, ಜಯಣ್ಣ ಕರಡೇರ ಉಪಸ್ಥಿತರಿದ್ದರು.

loading...